ಸಿಂಗಪುರ: ವಿಶ್ವ ಸಮ್ಮೇಳನದಿ ಡಾ. ಅನ್ನಪೂರ್ಣ ಪ್ರಬಂಧ
ಮಣಿಪಾಲ, ಜೂ.22: ಸಿಂಗಪುರದಲ್ಲಿ ನಡೆಯಲಿರುವ ವಿಶ್ವ ಆರೋಗ್ಯ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಕೆಎಂಸಿಯ ಯೋಗ ವಿಭಾಗದ ವ್ಯೆದ್ಯೆ ಡಾ. ಅನ್ನಪೂರ್ಣ ಆಚಾರ್ಯ ಅವರು ತಮ್ಮ ಪ್ರಬಂಧ ಮಂಡಿಸಲಿದ್ದಾರೆ.
ಜೂನ್ 22 ರಿಂದ 24 ರವರೆಗೆ ಸಿಂಗಾಪುರದಲ್ಲಿ ನಡೆಯಲಿರುವ ವಿಶ್ವ ಆರೋಗ್ಯ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಅನ್ನಪೂರ್ಣ ಆಚಾರ್ಯ ಅವರು 'ಮಧುಮೇಹವನ್ನು ತಡೆಗಟ್ಟುವಲ್ಲಿ ಯೋಗ ಚಿಕತ್ಸೆಯ ಪರಿಣಾಮಗಳು' ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಲಿದ್ದಾರೆ.

ಸೂರ್ಯ ನಮಸ್ಕಾರ, ಆಸನ, ಪ್ರಾಣಯಾಮ, ಧ್ಯಾನದ ನಿರಂತರ ಅಭ್ಯಾಸದಿಂದ ಮಧುಮೇಹ ರೋಗಿಗಳಲ್ಲಿ ಉಂಟಾಗುವ ಶಾರೀರಿಕ ಮತ್ತು ಮಾನಸಿಕ ಪರಿಣಾಮಗಳನ್ನು ಪ್ರಾತ್ಯಕ್ಷಿತೆ ಸಹಿತವಾಗಿ ಸಮ್ಮೇಳನದಲ್ಲಿ ಡಾ, ಅನ್ನಪೂರ್ಣ ಅವರು ವಿವರಿಸಲಿದ್ದಾರೆ.
ಉಡುಪಿಯ ಡಾ. ಎ.ವಿ.ಬಾಳಿಗ ಆಸ್ವತ್ರೆಯ ಪ್ರೊಫೆಸರ್ ಡಾ. ಲತಾ ಕೆ.ಎಸ್ ಹಾಗು ಕೆಎಂಸಿಯ ಯೋಗ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಜೋಯಿಸ ಇವರ ಮಾರ್ಗದರ್ಶನದಲ್ಲಿ ಈ ಸಂಶೋಧನಾ ಪ್ರಬಂಧವನ್ನು ಡಾ, ಅನ್ನಪೂರ್ಣ ಸಿದ್ದ ಪಡಿಸಿದ್ದಾರೆ.












Click it and Unblock the Notifications