Get Updates
Get notified of breaking news, exclusive insights, and must-see stories!

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ನಿರಂಜನ್ ಭಟ್ ಗೆ ಮಧ್ಯಂತರ ಜಾಮೀನು

ಉಡುಪಿ, ಜೂನ್ 24: ಬಹುಕೋಟಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜ್ಯೋತಿಷಿ ನಿರಂಜನ್ ಭಟ್ ಗೆ ಉಡುಪಿ ಜಿಲ್ಲಾ ನ್ಯಾಯಾಲಯ ಜುಲೈ 7 ರವರೆಗೆ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ.

Recommended Video

      SSLC Exam : ಪರೀಕ್ಷೆ ಬರೆಯುವ ಮುನ್ನ‌ ವಿದ್ಯಾರ್ಥಿಗಳು ಈ ನಿಯಮಗಳನ್ನು ಪಾಲಿಸಲೇಬೇಕು| Precautions for SSLC Exam

      ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಮೂರನೇ ಆರೋಪಿ ನಿರಂಜನ್ ಭಟ್ ತಂದೆ ಮೃತಪಟ್ಟಿದ್ದು, ಈ ಕಾರಣಕ್ಕೆ ಮಧ್ಯಂತರ ಜಾಮೀನು ನೀಡಲಾಗಿದೆ. ನಿರಂಜನ್ ತಂದೆ ಹಾಗೂ ಇದೇ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದ ಶ್ರೀನಿವಾಸ್ ಭಟ್ (65) ಅವರು ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು.

      ತಂದೆಯ ಉತ್ತರಕ್ರಿಯೆಯ ಕಾರ್ಯವನ್ನು ನೆರವೇರಿಸಲು ಜಾಮೀನು ನೀಡಬೇಕೆಂದು ನಿರಂಜನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ 5 ಲಕ್ಷ ರೂಪಾಯಿ ಬಾಂಡ್ ಪಡೆದು ಏಳು ದಿನಗಳ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣ ನಾಲ್ಕನೇ ಆರೋಪಿಯಾಗಿದ್ದ ಶ್ರೀನಿವಾಸ್ ಭಟ್ ಹಾಗೂ ರಾಘವೇಂದ್ರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ನಿರಂಜನ್ ಜೈಲಿನಲ್ಲಿದ್ದಾರೆ.

      Udupi District Court Granted Interim Bail To Niranjan Bhat In Bhaskar Shetty Murder Case

      ಜುಲೈ 18, 2016ರಲ್ಲಿ ಉಡುಪಿಯ ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿಯನ್ನು ತಾಯಿ, ಮಗ ಸೇರಿ ಕೊಲೆ ಮಾಡಿದ ಪ್ರಕರಣ ಇದಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ನಿರಂಜನ ತನ್ನ ಮನೆಯ ಹೋಮಕುಂಡದಲ್ಲಿ ಮೃತದೇಹವನ್ನು ಸುಡಲು ಸಹಾಯ ಮಾಡಿದ್ದ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+