'ಸಿದ್ದರಾಮಯ್ಯ ಹೇಗೆ ಬಸವಣ್ಣ ಭಕ್ತರಾಗುತ್ತಾರೆ?'

Posted By:
Subscribe to Oneindia Kannada

ಉಡುಪಿ, ನವೆಂಬರ್ 27 : ಉಡುಪಿಯಲ್ಲಿ ಮೂರು ದಿನಗಳ ಕಾಲ ನಡೆದ 'ಧರ್ಮ ಸಂಸತ್' ವಿರಾಟ್ ಹಿಂದೂ ಸಮಾಜೋತ್ಸವದ ಮೂಲಕ ಸಂಪನ್ನಗೊಂಡಿತು.

In Pics:ಉಡುಪಿಯಲ್ಲಿ ಜರುಗುತ್ತಿರುವ ಧರ್ಮ ಸಂಸದ್ ಸಮ್ಮೇಳನದ ಚಿತ್ರಸಂಪುಟ

ರಾಮ ಮಂದಿರ ನಿರ್ಮಾಣ ಗೋ ರಕ್ಷಣೆ, ದೇವಾಲಯಗಳ ಖಾಸಗೀಕರಣಕ್ಕೆ ವಿರೋಧ ಮತ್ತು ಅಲ್ಪ ಸಂಖ್ಯಾತರ ಸವಲತ್ತುಗಳು ಬಹು ಸಂಖ್ಯಾತ ಹಿಂದುಳಿದವರಿಗೆ ನೀಡುವ ಆಗ್ರಹದ ನಿರ್ಣಯದೊಂದಿಗೆ 12ನೇ 'ಧರ್ಮ ಸಂಸತ್' ಗೆ ತೆರೆ ಎಳೆಯಲಾಯಿತು.

ಪಂಕ್ತಿಭೇದ, ಅಸ್ಪೃಶ್ಯತೆ ಆಚರಣೆ ವಿರುದ್ಧ ಧ್ವನಿ ಎತ್ತಿದ ಧರ್ಮ ಸಂಸತ್

2 ಲಕ್ಷ ಕ್ಕೂ ಅಧಿಕ ಜನ ಭಾಗವಹಿಸಿದ ಹಿಂದೂ ಸಮಾಜೋತ್ಸವದಲ್ಲಿ ಹಿಂದೂ ಮುಖಂಡರ ಖಡಕ್ ಸಂದೇಶಗಳು ಒಂದೆಡೆ ವಿವಾದಕ್ಕೆ ನಾಂದಿ ಹಾಡಿದರೆ ಇನ್ನೊಂದೆಡೆ ಕಾರ್ಯಕರ್ತರಿಗೆ ಹೊಸ ಹುರುಪು ನೀಡಿದಂತಿತ್ತು.

'ಪ್ರತಿಯೊಬ್ಬ ಹಿಂದೂ ಕನಿಷ್ಠ 4 ಮಕ್ಕಳಿಗೆ ಜನ್ಮ ನೀಡಬೇಕು'

'ಧರ್ಮ ಸಂಸತ್' ನ 3ನೇ ದಿನ ಮಧ್ಯಾಹ್ನದ ಬಳಿಕ ನಗರದ ಜೋಡು ರಸ್ತೆಯಿಂದ ಎಂಜಿಎಂ ಕಾಲೇಜಿನ ಮೈದಾನದ ತನಕ ಭವ್ಯ ಶೋಭಾಯಾತ್ರೆ ನಡೆಯಿತು. ದಣಿದವರಿಗೆ ಮುಸ್ಲಿಂ ಸಮಾಜದವರು ತಂಪು ಪಾನೀಯ ವ್ಯವಸ್ಥೆ ಮಾಡಿದ್ದು ಉಡುಪಿಯ ಸೌಹಾರ್ದತೆಯನ್ನು ಮೆರೆಯಿತು. ಸುಮಾರು 15,000 ಲೀಟರ್ ಶರಬತ್ತು ವಿತರಿಸಲಾಯಿತು. ಪೇಜಾವರ ಕಿರಿಯ ಶ್ರೀಗಳು ಕುದುರೆ ಏರಿ ಮೆರೆವಣಿಗೆಯಲ್ಲಿ ಕಾಣಿಸಿಕೊಂಡರು.

ಬೃಹತ್ ಶೋಭಾಯಾತ್ರೆ

ಬೃಹತ್ ಶೋಭಾಯಾತ್ರೆ

'ಧರ್ಮ ಸಂಸತ್' ನ 3ನೇ ದಿನ ಭಾನುವಾರ ಮಧ್ಯಾಹ್ನದ ಬಳಿಕ ನಗರದ ಜೋಡು ರಸ್ತೆಯಿಂದ ಎಂಜಿಎಂ ಕಾಲೇಜಿನ ಮೈದಾನದ ತನಕ ಭವ್ಯ ಶೋಭಾಯಾತ್ರೆ ನಡೆಯಿತು.

ಶ್ರೀಗಳ ಕುದುರೆ ಸವಾರಿ

ಶ್ರೀಗಳ ಕುದುರೆ ಸವಾರಿ

ಪೇಜಾವರ ಮಠದ ಕಿರಿಯ ಶ್ರೀಗಳು ಕುದುರೆ ಏರಿ ಶೋಭಾಯಾತ್ರೆಯ ಮೆರೆವಣಿಗೆಯಲ್ಲಿ ಕಾಣಿಸಿಕೊಂಡರು.

ವೇದಿಕೆಯಲ್ಲಿ ಗಣ್ಯರ ದಂಡು

ವೇದಿಕೆಯಲ್ಲಿ ಗಣ್ಯರ ದಂಡು

ಬೃಹತ್ ವೇದಿಕೆಯಲ್ಲಿ ಸಾಧು ಸಂತರು, ವಿಎಚ್ ಪಿ ಮುಖಂಡರು ಉಪಸ್ಥಿತರಿದ್ದರು. ವಿಎಚ್ ಪಿ ಅಂತಾರಾಷ್ಟ್ರೀಯ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, 'ಚಿತ್ರ ನಿರ್ಮಾಪಕ ಸಂಜಯ್ ಲಿಲಾ ಬನ್ಸಾಲಿ ವಿರುದ್ಧ ವಾಗ್ದಾಳಿ ನಡೆಸಿದರು. ಹಿಂದೂ ಬಾಂಧವರು ಪದ್ಮಾವತಿ ಸಿನೆಮಾ ಬೆಂಬಲಿಸಬೇಡಿ ಎಂದು ಕರೆ ನೀಡಿದ ಅವರು, ರಾಣಿ ಪದ್ಮಾವತಿ ಚಿತ್ರದಲ್ಲಿ ರಾಣಿ ಪದ್ಮಾವತಿಯನ್ನು ಹಾಗು ಹಿಂದೂ ಧರ್ಮವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ.

ಹಿಂದೂಗಳ ಜನಸಂಖ್ಯೆ ಕಡಿಮೆ ಆಗಿದೆ

ಹಿಂದೂಗಳ ಜನಸಂಖ್ಯೆ ಕಡಿಮೆ ಆಗಿದೆ

ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ ಮಾತನಾಡಿ, 'ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆ ಆಗಿದೆ. ಲವ್ ಜಿಹಾದ್, ಮತಾಂತರ ನಿಲ್ಲಿಸುವ ಸಂಕಲ್ಪ ಮಾಡಿದ್ದೇವೆ. ಒಬ್ಬ ವ್ಯಕ್ತಿ ಮತಾಂತರವಾದರೆ ಧರ್ಮದ್ರೋಹಿ ಮಾತ್ರವಲ್ಲ ದೇಶದ್ರೋಹಿ ಕೂಡಾ ಆಗುತ್ತಾನೆ. ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ ಬಲಿಯಾಗುತ್ತಿದ್ದಾರೆ. ಸಲ್ಮಾನ್, ಸುನೀಲ ಸಮಾನರಲ್ಲ ಎನ್ನುವುದು ಹುಡುಗಿಯರಿಗೆ ತಿಳಿದಿಲ್ಲ. ನಮಗೆ ರಾಮನ ಆದರ್ಶದಂತೆ ಕೃಷ್ಣನ ಆದರ್ಶವೂ ಗೊತ್ತಿದೆ, ನಮಗೂ ಪ್ರೀತಿ ಮಾಡೋದಿಕ್ಕೆ ಬರುತ್ತೆ. ನಮ್ಮವರು ಪ್ರೀತಿ ಮಾಡಲು ಹೊರಟರೆ ನಿಮಗೆ ಮದುವೆ ಆಗಲು ಒಂದೂ ಮುಸ್ಲಿಂ ಹೆಣ್ಣು ಮಕ್ಕಳು ಸಿಗಲ್ಲ' ಎಂದು ಎಚ್ಚರಿಸಿದರು.

ಪರ್ಯಾಯ ಸಮ್ಮೇಳನ ನಡೆಯುತ್ತಿದೆ

ಪರ್ಯಾಯ ಸಮ್ಮೇಳನ ನಡೆಯುತ್ತಿದೆ

ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, 'ಧರ್ಮ ಸಂಸದ್ ಗೆ ಮೈಸೂರಿನಲ್ಲಿ ಪರ್ಯಾಯ ಸಮ್ಮೇಳನ ನಡೆಯುತ್ತಿದೆ. ಈ ಸಂಸದ್ ಹಿಂದೆಂದೂ ಆಗದ ಮುಂದೆಯೂ ಆಗಲು ಅಸಾಧ್ಯ ಸಮ್ಮೇಳನ. ಧರ್ಮ ವ್ಯಕ್ತಿಯಿಂದ ಬಂದದ್ದಲ್ಲ ಎಂದು ಹೆಳಿದ ಅವರು ಅಸ್ಪೃಶ್ಯತೆ ನಿವಾರಣೆಗೆ ಪೇಜಾವರಶ್ರೀ ಕಾರ್ಯ ಮಹತ್ವದ್ದು.ಮತಾಂತರಕ್ಕೆ ಯಾರೂ ಮುಂದಾಗಬೇಡಿ' ಎಂದು ಕರೆ ನೀಡಿದರು.

ಸಿದ್ದರಾಮಯ್ಯ ವಿರುದ್ಧ ಆಕ್ರೋಶ

ಸಿದ್ದರಾಮಯ್ಯ ವಿರುದ್ಧ ಆಕ್ರೋಶ

ಪರ್ಯಾಯ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿರು. 'ಸಿದ್ದರಾಮಯ್ಯ ಬಸವಣ್ಣನ ಭಕ್ತ ಎಂದು ಹೇಳುತ್ತಿದ್ದಾರೆ. ಆದರೆ ಬಸವಣ್ಣ ಗೋಹತ್ಯೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಹಾಗಾದ್ರೆ ಸಿದ್ದರಾಮಯ್ಯ ಹೇಗೆ ಅವರ ಭಕ್ತರಾಗುತ್ತಾರೆ? ಎಂದು ಪ್ರಶ್ನಿಸಿದರು. ರಾಮ ಮಂದಿರವಾಗುವವರೆಗೆ ನಾನಂತೂ ನಿದ್ದೆ ಮಾಡಲ್ಲ ನೀವೂ ಮಾಡದಿರಿ ಅಂತಾ ಕರೆನೀಡಿದರು. ನನಗೆ ಹಿಂದ- ಅಹಿಂದ ಎರಡು ಒಂದೇ. ಕೆಲವರಿಗೆ ಅಹಿಂದ ಮಾತ್ರ ಮುಖ್ಯ. ಬುದ್ಧಿಜೀವಿಗಳ ಬಗ್ಗೆ ನನಗೆ ಕನಿಕರವಾಗುತ್ತಿದೆ. ಅವರು ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಾರೆ' ಎಂದು ಟೀಕಿಸಿರು.

ಪದ್ಮಾವತಿ ಚಿತ್ರದ ವಿರುದ್ಧ ಆಕ್ರೋಶ

ಪದ್ಮಾವತಿ ಚಿತ್ರದ ವಿರುದ್ಧ ಆಕ್ರೋಶ

ವಿರಾಟ್ ಹಿಂದೂ ಸಮಾಜೋತ್ಸವದ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ವಿಎಚ್ ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಅವರು ಹಿಂದೂ ವಿರೋಧಿಗಳ ವಿರುದ್ಧ ಹರಿಹಾಯ್ದರು. 'ಪದ್ಮಾವತಿ ಚಿತ್ರವನ್ನು ದೇಶಾದ್ಯಂತ ನಿಷೇಧಿಸ ಬೇಕು ಎಂದು ಅವರು ಕರೆ ನೀಡಿದರು. ಪದ್ಮಾವತಿ ಚಿತ್ರದ ಕುರಿತು ಮಾತನಾಡಿ ಅವರು ತಾಯಿ ಹಾಲು ಕುಡಿದವರು ಈ ರೀತಿ ಮಾಡುತ್ತಿರಲಿಲ್ಲ ಸಂಜಯ್ ಲೀಲಾ ಬನ್ಸಾಲಿ ವಿರುದ್ದ ಕಿಡಿಕಾರಿದರು. ರಾಮ ಮಂದಿರ ವಿಚಾರ ಮಾತುಕತೆ ಮೂಲಕ ಪರಿಹರಿಸಿ ಅಂತಾ ಹೇಳ್ತಾರೆ. ಆದ್ರೆ ಮುಸ್ಲಿಮರು ಇದಕ್ಕೆ ಒಪ್ಪುತ್ತಿಲ್ಲ.ಹಿಂದೂಗಳ ಭುಜದ ಆಧಾರದಲ್ಲಿ ಮಂದಿರ ಕಟ್ಟುತ್ತೇವೆ ಅಂತಾ ಗುಡುಗಿದರು. ಲಾಡೆನ್ ಗೂ ಆದ ಸ್ಥಿತಿ ಹಫೀಝ್ ಗೆ ಆಗಲಿದೆ ಎಂದು ಹೇಳಿದ ಅವರು ಭಾರತದ ಹಿಂದೂಗಳ ಎದೆಯಲ್ಲಿ ಅಗ್ನಿ ಉರಿಯುತ್ತಿದೆ. ಈ ಬೆಂಕಿ ದೇಶದ್ರೋಹಿ ಮುಸ್ಲಿಮರನ್ನು ಸುಡದೆ ಬಿಡದು' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dharma Sansad 2017 concluded at Udupi, on Sunday with a 5 major resolution. Dharma Sansad organised by Vishwa Hindu Parishad in which nearly 2000 Sants from all over nation participate at Udupi, Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ