ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಬಂಧನ ವಾರಂಟ್

Posted By:
Subscribe to Oneindia Kannada

ಉಡುಪಿ, ಮಾರ್ಚ್ 10: ಭೂ ಕಬಳಿಕೆ ಹಾಗೂ ಒತ್ತುವರಿ ವಿಚಾರವಾಗಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಉಡುಪಿ ಜಿಲ್ಲಾಧಿಕಾರಿಗೆ ಬಂಧನ ವಾರೆಂಟ್ ಜಾರಿಗೊಳಿಸಿದೆ.

ಭೂ ಕಬಳಿಕೆ ಹಾಗೂ ಒತ್ತುವರಿ ವಿಚಾರವಾಗಿ ಉಡುಪಿ ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಜಾರಿ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವರ್ಗಾವಣೆಗೆ ಗಿಡ ನೆಟ್ಟು

ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಯಡಿ ಸ್ಥಾಪಿಸಲಾದ ಈ ನ್ಯಾಯಾಲಯವು ಜಿಲ್ಲೆಯಲ್ಲಿ ನಡೆದ ಭೂ ಒತ್ತುವರಿ, ಕೆರೆ ಒತ್ತುವರಿ ಬಗ್ಗೆ ಜಿಲ್ಲಾಡಳಿತ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೇಳಿತ್ತು. ಆದರೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾಹಿತಿ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.

Court issues arrest warrant against Udupi DC

ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಮಾರ್ಚ್ 8 ರಂದು ಮಂಗಳೂರು ಐಜಿ ಕಚೇರಿಗೆ ವಾರೆಂಟ್ ಪ್ರತಿ ಕಳುಹಿಸಿತ್ತು. ಇದೀಗ ಆ ವಾರೆಂಟ್ ಪ್ರತಿ ಉಡುಪಿ ಎಸ್ಪಿ ಕಚೇರಿ ತಲುಪಿದ್ದು, ಜಿಲ್ಲಾಧಿಕಾರಿಗೆ ಬಂಧನ ಭೀತಿ ಎದುರಾಗಿದೆ.

ಉಡುಪಿ ಡಿಸಿ ಕೊಲೆ ಯತ್ನ ಕೇಸ್: ಬಂಧಿತರ ಸಂಖ್ಯೆ 20ಕ್ಕೆ ಏರಿಕೆ

ಆದರೆ ಇದೊಂದು ಜಾಮೀನು ಸಹಿತ ವಾರೆಂಟ್ ಆಗಿದ್ದು, 10 ಸಾವಿರ ರೂಪಾಯಿಯ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಒದಗಿಸಿದಲ್ಲಿ ಜಾಮೀನು ಸಿಗಲಿದೆ. ಇನ್ನು ಮಾರ್ಚ್ 13 ರಂದು ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ನಾಯಾಲಯ ಸೂಚಿಸಿದೆ. ಇದರಿಂದಾಗಿ ಜಿಲ್ಲಾಧಿಕಾರಿಯವರು ನ್ಯಾಯಾಲಯಕ್ಕೆ ಹಾಜರಾಗಲು ಮುಂದಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಭೂ ಒತ್ತುವರಿ ಕುರಿತು ತಾಲೂಕಿನ ತಹಶೀಲ್ದಾರರು ವರದಿ ನೀಡುವಲ್ಲಿ ವಿಫಲರಾದ ಕಾರಣ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನ್ಯಾಯಾಲಯಕ್ಕೆ ಸಮರ್ಪಕ ಮಾಹಿತಿ ಒದಗಿಸಲು ವಿಫಲರಾಗಿದ್ದರು. ಇದರಿಂದ ಬಂಧನ ವಾರೆಂಟ್ ಎದುರಿಸುವಂತಾಗಿದೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The special court of Bengaluru which is formed to deal with land encroachment cases has issued an arrest warrant against Udupi DC Priyanka Mary Francis.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ