ಜರ್ಮನಿಯಲ್ಲಿ ಕುಂದಾಪುರ ಮೂಲದ ದಂಪತಿಗೆ ಚೂರಿ ಇರಿತ, ಪತಿ ಸಾವು

ಕುಂದಾಪುರ, ಮಾರ್ಚ್ 31 : ಕರ್ನಾಟಕ ಮೂಲದ ದಂಪತಿಯನ್ನು ಯುವಕನೋರ್ವ ಚೂರಿಯಿಂದ ಇರಿದ ಘಟನೆ ಪೂರ್ವ ಜರ್ಮನಿಯ ಮ್ಯೂನಿಚ್ ನಗರದಲ್ಲಿ ನಡೆದಿದೆ.

ಇಲ್ಲಿಯ ಹಂಬರ್ಗ್‌ನಲ್ಲಿ ನಡೆದ ಗಲಾಟೆಯೊಂದರಲ್ಲಿ ವಲಸಿಗ ನೋರ್ವ ಕುಂದಾಪುರ ಮೂಲದ ದಂಪತಿ ಪ್ರಶಾಂತ್ ಬಸ್ರೂರು (47) ಹಾಗೂ ಸ್ಮಿತಾ ಬಸ್ರೂರು ಅವರನ್ನು ಚಾಕುವಿನಿಂದ ಇರಿದಿದ್ದಾನೆ ಎಂದು ವರದಿ ಯಾಗಿದೆ.

ಈ ಘಟನೆಯಲ್ಲಿ ಪ್ರಶಾಂತ್ ಬಸ್ರೂರು ಮೃತಪಟ್ಟಿದ್ದು ಪತ್ನಿ ಸ್ಮಿತಾ ಬಸ್ರೂರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

Couple from Kundapur stabbed in German

ಸ್ಮಿತಾ ಬಸ್ರೂರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಪ್ರಶಾಂತ್ ಹಾಗೂ ಸ್ಮಿತಾ ದಂಪತಿಗಳು ಜರ್ಮನಿಯ ಹಂಬರ್ಗ್ ನಗರದಲ್ಲಿ ವಾಸಿಸುತ್ತಿದ್ದು ಅಲ್ಲಿನ ಪೌರತ್ವ ಪಡೆದಿದ್ದಾರೆ.

ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸ್ಮಿತಾ ಮೂಲತಃ ಕುಂದಾಪುರ ಸಮೀಪದ ಸಿದ್ಧಾಪುರದ ಡಾ. ಚಂದ್ರಮೌಳಿ ಎಂಬುವವರ ಪುತ್ರಿ. ಮದುವೆಯ ಬಳಿಕ ಪತಿಯೊಂದಿಗೆ ಹಂಬರ್ಗ್ ನಗರದಲ್ಲಿ ವಾಸಿಸುತ್ತಿದ್ದರು.

ಅಪಾರ್ಟ್‌ಮೆಂಟ್ ವಿಚಾರದಲ್ಲಿ ಆಫ್ರಿಕ ಮೂಲದ ವಲಸಿಗ ಹಾಗೂ ಪ್ರಶಾಂತ್ ನಡುವೆ ಗಲಾಟೆ ನಡೆದಿದ್ದು, ಆತ ಏಕಾಏಕಿ ಚೂರಿಯಿಂದ ಹಲ್ಲೆಗೆ ಮುಂದಾಗಿದ್ದ ಎನ್ನಲಾಗಿದೆ. ಘಟನೆಯಲ್ಲಿ ಪ್ರಶಾಂತ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ .

ಹಲ್ಲೆಯನ್ನು ತಡೆಯಲು ಹೋದ ಸ್ಮಿತಾ ಅವರಿಗೂ ಚೂರಿಯಿಂದ ಇರಿಯಲಾಗಿದೆ. ಸದ್ಯ, ದಂಪತಿಗಳ ಮಕ್ಕಳನ್ನು ಚೈಲ್ಡ್ ಕೇರ್‌ನಲ್ಲಿ ಇರಿಸಲಾಗಿದೆ.

ಟ್ವೀಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಘಟನೆಯ ಬಗ್ಗೆ ವಿವರಣೆ ನೀಡಿದ್ದ ಪ್ರಶಾಂತ್ ಅವರ ಸಹೋದರನನ್ನು ಮ್ಯೂನಿಚ್ ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಶಾಂತ್ ಶಿವಮೊಗ್ಗ ಜಿಲ್ಲೆಯ ಹೊಸನಗರದವರಾಗಿದ್ದು, ಹತ್ತು ವರ್ಷದ ಹಿಂದೆ ಕುಂದಾಪುರದಲ್ಲಿ ಮನೆ ಖರೀದಿಸಿದ್ದರು. ಅವರ ತಾಯಿ ಕುಂದಾಪುರದಲ್ಲಿ ನೆಲೆಸಿದ್ದರು.

ಸಹೋದರ ಪ್ರಭಾತ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು ಎನ್ನಲಾಗಿದೆ. ಮುಂದಿನ ತಿಂಗಳು ಎಪ್ರಿಲ್ 9ರಂದು ಅವರು ತಮ್ಮ ಹುಟ್ಟೂರಿಗೆ ಬರುವವರಿದ್ದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+