ಬೀ ಹ್ಯಾಪ್ಪಿ, ನೋ ಬೀಪಿ: ಎಲ್ಲರಿಗೂ ಮಾದರಿ ಈ ಕೊರೊನಾ ವೈರಸ್ ಸೋಂಕಿತ

ಉಡುಪಿ, ಜುಲೈ 7: ಜಗತ್ತಿನಾದ್ಯಂತ ಕೊರೊನಾ ವೈರಸ್ ಎಂಬ ಮಹಾಮಾರಿ ರೋಗವು ತಾಂಡವವಾಡುತ್ತಿದ್ದು, ಯಾರಿಗಾದರೂ ಕೊರೊನಾ ವೈರಸ್ ಸೋಂಕು ಬಂದರೆ ಸಾಕು ಅದರ ಭೀತಿಯಿಂದ ಅರ್ಧ ಜೀವವೇ ಹೋಗಿರುತ್ತದೆ. ಆದರೆ ಉಡುಪಿಯ ವ್ಯಕ್ತಿಯೊಬ್ಬ ಕೊರೊನಾ ವೈರಸ್ ಪಾಸಿಟಿವ್ ಬಂದರೂ ಖುಷಿಯಿಂದ ಇದ್ದಾನೆ.

ಉಡುಪಿ ಜಿಲ್ಲೆಯ ಕೋಟದ ಹೋಟೆಲ್ ಮಾಲೀಕನಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಮಹಾಮಾರಿ ಸೋಂಕು ಇದ್ದರೂ ನೃತ್ಯದಿಂದ ಎಲ್ಲರನ್ನು ನಗಿಸುತ್ತಾ, ತಾನೂ ನಗುವ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತಿದ್ದಾನೆ.

ಕೊರೊನಾ ವೈರಸ್ ಬಂದರೆ ಜೀವವೇ ಹೋಗುತ್ತೆ ಅನ್ನುವವರ ಮಧ್ಯೆ ಉಡುಪಿ ಹೋಟೆಲ್ ಮಾಲೀಕ ಖುಷಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಗಾಬರಿಗೊಂಡಿರುವ ತಮ್ಮ ಕುಟುಂಬದವರನ್ನು ನಗಿಸುತ್ತಾರೆ.

Coronavirus In Udupi: Be Happy, No Bp: Person Model For People Infected With Coronavirus

ಸದ್ಯ ಕೊರೊನಾ ಪಾಸಿಟಿವ್ ಆದ ವ್ಯಕ್ತಿಯ ನೃತ್ಯ ವೈರಲ್ ಆಗಿದೆ. ಕೊರೊನಾ ಸೋಂಕಿತ ವ್ಯಕ್ತಿ ತಮ್ಮ ಪತ್ನಿಗೆ ವಿಡಿಯೋ ಕಾಲ್ ಮಾಡಿ ಧೈರ್ಯ ಹೇಳಿದ್ದಲ್ಲದೇ ನೃತ್ಯ ಮಾಡಿದ್ದಾರೆ. ಕೋವಿಡ್ ಆಸ್ಪತ್ರೆಯಿಂದಲೇ ವಿಡಿಯೋ ಕಾಲ್ ಮೂಲಕ ನೃತ್ಯ ಮಾಡಿ ತಾನು ಕೊರೊನಾ ವೈರಸ್ ವಿರುದ್ಧ ಗೆದ್ದು ಬರುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

Puttappa Koli Oneindia, [07.07.20 12:15]

ಡಾ.ರಾಜಕುಮಾರ್ ಅಭಿಮಾನಿಯಾಗಿರುವ ಇವರು ರಾಜಕುಮಾರ್ ಗೀತೆಗೆ ನೃತ್ಯ ಮಾಡಿ ಪತ್ನಿಯನ್ನು ಖುಷಿಪಡಿಸಿದ್ದಾರೆ. ಇವರು ಕೊರೊನಾ ವೈರಸ್ ಪಾಸಿಟಿವ್ ಬಂದ ಬಳಿಕ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯ ಉಳಿದ ಸದಸ್ಯರು ಭಯ ಭೀತರಾಗಬಾರದು ಎನ್ನುವ ಉದ್ದೇಶದಿಂದ ನೃತ್ಯ ಮಾಡಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+