ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಮೋದ್ ಮದ್ವರಾಜ್ ಗೆ ಪರ್ಯಾಯ ಅಭ್ಯರ್ಥಿ ಸಿದ್ದಪಡಿಸುತ್ತಿದೆಯಾ ಕಾಂಗ್ರೆಸ್‌ ?

|
Google Oneindia Kannada News

ಉಡುಪಿ, ಏಪ್ರಿಲ್ 04: ಉಡುಪಿ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದೆ. ಉಡುಪಿ ಶಾಸಕ ಪ್ರಮೋದ್ ಮದ್ವರಾಜ್ ಅವರ ಮೇಲೆ ಕಾಂಗ್ರೆಸ್ ನಾಯಕರು ನಂಬಿಕೆ ಕಳೆದುಕೊಂಡಿದ್ದಾರಾ ? ಎಂಬ ಸಂಶಯ ವ್ಯಕ್ತವಾಗ ತೊಡಗಿದೆ. ಪ್ರಮೋದ್ ಮದ್ವರಾಜ್ ಈ ಬಾರಿ ಕಾಂಗ್ರೆಸ್‌ ನಿಂದ ಸ್ಪರ್ಧಿಸುತ್ತಾರೆ ಅನ್ನುವುದರ ಬಗ್ಗೆ ಕೈ ಪಾಳಯದ ಹಿರಿಯ ನಾಯಕರಿಗೆ ಅನುಮಾನ ಕಾಡಲಾರಂಭಿಸಿದೆ.

ಶಾಸಕ ಪ್ರಮೋದ್ ಮದ್ವರಾಜ್ ಬಿಜೆಪಿ ಗೆ ಸೇರಲಿದ್ದಾರೆ ಎಂಬ ಗುಸುಗುಸು ಈ ಹಿಂದೆ ಆರಂಭವಾಗಿ ಭಾರೀ ವಿವಾದವೇ ಸೃಷ್ಟಿಯಾಗಿತ್ತು. ಆದರೆ ಈ ಎಲ್ಲಾ ಅನುಮಾನಗಳಿಗೆ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆಯೆಳೆದಿದ್ದರು.

ಬಿಜೆಪಿ ಸೇರುವ ಬಗ್ಗೆ ಪ್ರಮೋದ್ ಮಧ್ವರಾಜ್ ಹೇಳಿದ್ದೇನು?ಬಿಜೆಪಿ ಸೇರುವ ಬಗ್ಗೆ ಪ್ರಮೋದ್ ಮಧ್ವರಾಜ್ ಹೇಳಿದ್ದೇನು?

ಆದರೆ ಈ ನಡುವೆ ಕಾಂಗ್ರೇಸ್ ನಾಯಕರು ಉಡುಪಿ ವಿಧಾನ ಸಭಕ್ಷೇತದಿಂದ ಸ್ಫರ್ಧಿಸಲು ಅಭ್ಯರ್ಥಿಯನ್ನು ತೆರೆಯ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಟಿಕೆಟ್ ಯಾರಿಗೆ ಅನ್ನುವುದು ಘೋಷಣೆಯಾಗುತ್ತಿದಂತೆ ಪ್ರಮೋದ್ ಮದ್ವರಾಜ್ ಕೈಪಾಳಯಕ್ಕೆ ಕೈ ಕೊಟ್ಟು‌ ಬಿಜೆಪಿ ಕಡೆ ಮುಖಮಾಡಿದರೆ ಪ್ರಮೋದ್ ಮದ್ವರಾಜ್ ಗೆ ಪ್ರಬಲ ಸ್ಪರ್ಧಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

congress searching alternative candidate for Pramod Madhwaraj in Udupi?

ತೆರೆಮರೆಗೆ ಸರಿದಿದ್ದಮಾಜಿ ಶಾಸಕ ಯು ಆರ್ ಸಭಾಪತಿ ರಾಜಕೀಯ ರಂಗಕ್ಕೆ ಮರುಪ್ರವೇಶ ಮಾಡಲು ಸಿದ್ದತೆಯಲ್ಲಿ ತೋಡಗಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೇಸ್ ನ ಹಿರಿಯ ನಾಯಕರೊಬ್ಬರ ಯೋಜನೆ ಯಂತೆ ಯು ಆರ್ ಸಭಾಪತಿಯವರಿಗೆ ಕಾಂಗ್ರೇಸ್ ಟಿಕೆಟ್ ನೀಡುವುದಕ್ಕೆ ತರೆಯ ಮರೆಯಲ್ಲಿ ತಯಾರಿ ನಡೆಸುತ್ತಿದೆ ಎಂಬ ಸಂಶಯ ವ್ಯಕ್ತವಾಗಿದೆ.

congress searching alternative candidate for Pramod Madhwaraj in Udupi?

ಯು ಆರ್ ಸಭಾಪತಿ ಉಡುಪಿಯ ಹಲವು ಉದ್ಯಮಿಗಳನ್ನುಭೇಟಿ ಮಾಡಿ ಬೆಂಬಲ ಯಾಚಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಚುನಾವಣೆ ಹತ್ತಿವಾಗುತ್ತಿದ್ದಂತೆ ಶಾಸಕ ಪ್ರಮೋದ್ ಮದ್ವರಾಜ್ ನಡೆಸಲಿರುವ ರಾಜಕೀಯ ದಾಳ ನೋಡಿಕೊಂಡು ಕಾಂಗ್ರೇಸ್ ಹಿರಿಯ ನಾಯಕರು ತಮ್ಮ ರಾಜಕೀಯ ತಂತ್ರಗಾರಿಕೆ ಜಾರಿಗೆ ತರಲು ಕಾಯುತ್ತಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ.

English summary
There is a rumour spread that Udupi incharge minister Pramod Madhwaraj to way out of congress and join BJP. after that Madhwaraj clarified that he wont leave congress . But according to the source that congress senior leaders searching alternative for Madhwaraj in next upcoming election to contest from Udupi constituency .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X