ಉಡುಪಿ ಮಠಕ್ಕೆ ಸಂವಿಧಾನ ಬೇಕಂತೆ; ಪೇಜಾವರ ವಿರುದ್ಧ ಕೋರ್ಟಿಗೆ ದೂರು

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಜನವರಿ 30:ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಏಳು ಪೀಠಾಧಿಪತಿಗಳ ವಿರುದ್ಧ ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ಪೇಜಾವರ ಮಠದ ಮಾಜಿ ಕಿರಿಯ ಪೀಠಾಧಿಪತಿ ವಿಶ್ವ ವಿಜಯರು ಸೋಮವಾರ ದಾವೆಯೊಂದನ್ನು ಹೂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಉಡುಪಿಯ ಅಷ್ಟಮಠಾಧೀಶರುಗಳಲ್ಲಿ ವಿಪರೀತ ಭಿನ್ನಾಭಿಪ್ರಾಯ, ವಿರೋಧ, ಅಸಹಕಾರ ಕಂಡು ಬರುತ್ತಿದೆ. ಇದಲ್ಲದೆ ಪರ್ಯಾಯ ಉತ್ಸವಗಳಲ್ಲಿ ಅಷ್ಟ ಮಠಾಧೀಶರ ನಡುವೆ ಉಂಟಾದ ಗಲಭೆ, ತಿಕ್ಕಾಟಗಳಿಂದಾಗಿ ಶ್ರೀಮಾನ್ ಮಧ್ವಾಚಾರ್ಯರ ಮೂಲ ಸಂಸ್ಥಾನಕ್ಕೆ ತೀವ್ರ ಅಪಚಾರ ಮತ್ತು ಅನ್ಯಾಯವಾಗಿದೆ ಎಂದು ದಾವೆಯಲ್ಲಿ ಹೇಳಲಾಗಿದೆ.[ಚುನಾವಣೆ ಬಂದಾಗ ಬಿಜೆಪಿಗೆ ಮಂದಿರ ನೆನಪಾ? ಪೇಜಾವರ ಶ್ರೀ ಹೇಳಿದ್ದೇನು?]

Complent filed against Pejavara Shri and 7 others

ವಿಶ್ವ ವಿಜಯರ ಪರವಾಗಿ ದಾವೆಯನ್ನು ಮಂಗಳೂರಿನ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ.[ಹಿಂಸೆರಹಿತ ಕಂಬಳಕ್ಕೆ ಪೇಜಾವರ ಶ್ರೀಗಳ ಬೆಂಬಲ]

ಮಠದ ಕಾನೂನು ಕಟ್ಟಲೆಗಳನ್ನು ಮಠಾಧೀಶರು ತಮಗೆ ಬೇಕಾದ ರೀತಿಯಲ್ಲಿ ತಿರುಚುತ್ತಿದ್ದಾರೆ. ಉಡುಪಿ ಶ್ರೀಕೃಷ್ಣ ಮಠ ಹಾಗೂ ಅಷ್ಟ ಮಠಗಳು ಒಂದು ಸಂಯುಕ್ತ ಸಂಸ್ಥಾನವಾದೆ. ಹಾಗಾಗಿ ಎಂಟು ಮಠಾಧೀಶರಿಗೆ ಸರಿಯಾದ ಸಂವಿಧಾನವನ್ನು ಲಿಖಿತ ರೂಪದಲ್ಲಿ ರಚಿಸಿ ನೋಂದಾಯಿಸಬೇಕು ಎಂದು ವಿಶ್ವ ವಿಜಯರು 2016ರ ಜನವರಿಯಲ್ಲಿ ವಕೀಲರ ಮೂಲಕ ನೋಟಿಸೊಂದನ್ನು ಎಂಟು ಮಠಾಧಿಪತಿಗಳಿಗೆ ರವಾನಿಸಿದ್ದರು. ಒಂದು ವರ್ಷ ಕಳೆದರೂ ನೋಟಿಸ್ ಗೆ ಯಾವುದೇ ಉತ್ತರ ನೀಡಿಲ್ಲ ಎಂದು ವಿಶ್ವ ವಿಜಯರು ದಾವೆಯಲ್ಲಿ ದೂರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A plea has been filed against Pejavara Vishweshatheertha Swamiji and 7 others seeking Constitution for Udupi Krishna Mat, filed by Vishwa Vijay, ex primary head of Pejavara mat.
Please Wait while comments are loading...