ಚುನಾವಣಾ ನೀತಿ ಸಂಹಿತೆ ಜಾರಿ:ಖಾಸಗಿ ವಾಹನವೇರಿ ತೆರಳಿದ ಕೈ ನಾಯಕರು
ಉಡುಪಿ, ಮಾರ್ಚ್ 11: ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಉಡುಪಿ ಪರಿವರ್ತನಾ ಯಾತ್ರೆ ಸಮಾವೇಶಕ್ಕೆ ಆಗಮಿಸಿದ್ದ ಸಚಿವರ ಸರಕಾರಿ ವಾಹನಗಳನ್ನು ಏಕಾಏಕಿ ಹಿಂಪಡೆದ ಹಿನ್ನೆಲೆಯಲ್ಲಿ ಸಚಿವರು ಹಾಗೂ ಕಾಂಗ್ರೆಸ್ ನಾಯಕರು ಖಾಸಗಿ ವಾಹನವೇರಿ ತೆರಳಬೇಕಾದ ಪ್ರಸಂಗ ನಡೆಯಿತು.
ಸರಕಾರಿ ವಾಹನ, ಭದ್ರತೆಯಲ್ಲಿ ಬಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಗಳು, ಕೆಪಿಸಿಸಿ ಆಧ್ಯಕ್ಷ ದಿನೇಶ್ ಗುಂಡೂರಾವ್ ಖಾಸಗಿ ವಾಹನದಲ್ಲಿ ಪ್ರಯಾಣ ಬೆಳಸಬೇಕಾಯಿತು.
ಚುನಾವಣೆ ದಿನಾಂಕ ಘೋಷಣೆ : ಫಾರಂ 26 ಎಂದರೇನು?
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಕೂಡ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರು ಹತ್ತಿದರು. ಅದಲ್ಲದೇ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಕೂಡ ಖಾಸಗಿ ಕಾರನ್ನು ತಾವೇ ಚಲಾಯಿಸಿಕೊಂಡು ಸಿದ್ದರಾಮಯ್ಯ ಸೇರಿದಂತೆ ಇನ್ನಿತರರನ್ನು ಕಾರಿಗೆ ಹತ್ತಿಸಿಕೊಂಡು ಪ್ರಯಾಣ ಬೆಳೆಸಿದರು.
ಏರ್ ಸ್ಟ್ರೈಕ್ ನಂತರ ಉತ್ತರ ಪ್ರದೇಶದಲ್ಲಿ ಬದಲಾಗಲಿದೆಯೆ ಬಿಜೆಪಿ ಲಕ್ಕು?
ಆದರೆ ಈ ನಡುವೆ ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದರೂ ಅದನ್ನು ಲೆಕ್ಕಿಸದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು, ಬೆಳಕಿಗೆ ಬಂದಿದೆ.
ಪರಿವರ್ತನಾ ಸಮಾವೇಶದಿಂದ ತೆರಳುವಾಗ ಇತರ ಕಾಂಗ್ರೆಸ್ ನಾಯಕರು ಖಾಸಗಿ ವಾಹನವನ್ನೇರಿ ತೆರಳಿದರೆ, ಆಸ್ಕರ್ ಫರ್ನಾಂಡಿಸ್ ದಂಪತಿ ಸರಕಾರಿ ಕಾರಲ್ಲಿ ಪ್ರಯಾಣ ಬೆಳಸಿದ್ದಾರೆ. ಯುಟಿ ಖಾದರ್ ಅವರ ಸರ್ಕಾರಿ ಕಾರಲ್ಲಿ ಆಸ್ಕರ್ ದಂಪತಿ ತೆರಳಿರುವುದು ಬೆಳಕಿಗೆ ಬಂದಿದೆ.