ಮೂಢನಂಬಿಕೆ ನಿಷೇಧಿಸುವ ಧೈರ್ಯ ಸಿಎಂಗಿಲ್ಲ: ಪೇಜಾವರ ಶ್ರೀ

Posted By:
Subscribe to Oneindia Kannada

ಉಡುಪಿ, ಡಿಸೆಂಬರ್ 23: ಮೂಢನಂಬಿಕೆಗಳನ್ನು ನಿಷೇಧಿಸಲು ಮುಖ್ಯಮಂತ್ರಿಗಳಿಗೆ ಧೈರ್ಯ ಸಾಲದು. ಆ ಧೈರ್ಯ ನಮ್ಮ ಬಳಿ ಇದೆ ಎಂದು ಉಡುಪಿಯಲ್ಲಿ ಸವಿತಾ ಸಮಾಜದ ಪೀಠಕ್ಕೆ ಧರ್ಮಾಧಿಕಾರಿಯ ನೇಮಕ ಮಾಡಿದ ಪೇಜಾವರ ಶ್ರೀಗಳು ಗುಡುಗಿದ್ದಾರೆ.

ಉಡುಪಿಯಲ್ಲಿ ಸವಿತಾ ಸಮಾಜದ ಪೀಠಕ್ಕೆ ಧರ್ಮಾಧಿಕಾರಿಯ ನೇಮಕ ಮಾಡಿದ ಬಳಿಕ ಮಾತನಾಡಿದ ಶ್ರೀಗಳು ಮೂಢನಂಬಿಕೆ ಕಾಯ್ದೆಗೆ ರಾಜ್ಯದ ಪಟ್ಟಭದ್ರರು ವಿರೋಧಿಸುತ್ತಿರುವ ಬಗ್ಗೆ ಸಿಎಂ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಮೂಢನಂಬಿಕೆಗಳನ್ನು ಯಾವ ರೀತಿ ನಿಷೇಧ ಮಾಡಬಹುದು ಎಂದು ಹೇಳುವ ಧೈರ್ಯ ನನಗಿದೆ. ಸರಕಾರ ನನ್ನಲ್ಲಿಗೆ ಬರಲಿ. ಅವರಿಗೆ ನಾನು ಸಲಹೆ ನೀಡುತ್ತೇನೆ. ನಾನು ಅವರಿಗೆ ಬೆಂಬಲ ಕೊಟ್ಟು ಯಾರದೇ ವಿರೋಧ ಬಾರದಂತೆ ನೋಡಿಕೊಳ್ಳುತ್ತೇನೆ ಎಂದರು.[ಮಡೆಸ್ನಾನ ನಿಷೇಧಿಸಿದರೆ ಅಭ್ಯಂತರವಿಲ್ಲ : ಪೇಜಾವರಶ್ರೀ]

CM did not have the courage to ban superstition: Pejawar sri

ಮೂಢನಂಬಿಕೆಗಳನ್ನು ನಿಷೇಧಿಸಲು ಮುಖ್ಯಮಂತ್ರಿಗಳಿಗೆ ಧೈರ್ಯ ಸಾಲದು. ಆ ಧೈರ್ಯ ನಮ್ಮ ಬಳಿ ಇದೆ. ಅವರು ನಮ್ಮ ಬಳಿ ಬಂದರೆ ಅವರಿಗೆ ಈ ಬಗ್ಗೆ ಮಾರ್ಗದರ್ಶನ ನೀಡುತ್ತೇವೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಗಳು ತಿಳಿಸಿದರು.[ಉಡುಪಿ ಕೃಷ್ಣ ಮಠದಲ್ಲಿ 30 ಸಾವಿರ ಮಂದಿಗೆ ಅನ್ನ ಸಂತರ್ಪಣೆ]

ನನ್ನೊಂದಿಗೆ ಸಮಾಲೋಚನೆ ನಡೆಸಲು ಅವರು ಸಿದ್ಧರಿಲ್ಲ. ನಾನು ಮೂಢನಂಬಿಕೆಗೆ ಬೆಂಬಲ ನೀಡುವವನು ಎಂದು ಕೆಲವರು ಭಾವಿಸಿರುವುದೇ ಇದಕ್ಕೆ ಕಾರಣ. ನನ್ನ ಬಗ್ಗೆ ರಾಜಕಾರಣಿಗಳಿಗೆ ತಪ್ಪುಕಲ್ಪನೆಗಳಿವೆ. ಮಡೆಸ್ನಾನದ ವಿಷಯದಲ್ಲೂ ನಾನು ಅದನ್ನು ಬೆಂಬಲಸಿದ್ದೇನೆ ಎಂದು ಹೇಳುತ್ತಾರೆ. ನಿಜವಾಗಿ ಮಡೆಸ್ನಾನ ವನ್ನು ನಾನು ವಿರೋಧಿಸಿದ್ದೇನೆ ಎಂದರು. ಸಮಾಲೋಚನೆಗೆ ನಮ್ಮ ಬಳಿ ಬರಲಿ ಎಂದು ಸಲಹೆ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister did not have the courage to ban superstition says Pejawara Visvesatirtha Sri in Appointed deacon of savitha samja in udupi.
Please Wait while comments are loading...