ಗಂಗೊಳ್ಳಿಯಲ್ಲಿ ಹಿಟ್ ಆಂಡ್ ರನ್:ಬೈಕ್ ಸವಾರ ಸ್ಥಳದಲ್ಲೇ ಸಾವು

ಉಡುಪಿ, ಫೆಬ್ರವರಿ 19:ಕುಂದಾಪುರ ತಾಲೂಕಿನ ಆರಾಟೆ ಸೇತುವೆ ಮೇಲೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮೃತ ದೇಹ ನಜ್ಜುಗುಜ್ಜುಗೊಂಡಿದ್ದು, ಅಫಘಾತ ಸ್ಥಳದಿಂದ 2 ಕಿಲೋಮೀಟರ್ ದೂರ ಅಂದರೆ ಹೆಮ್ಮಾಡಿ ತನಕ ಮೃತಪಟ್ಟ ಯುವಕನ ಬೈಕ್ ಅನ್ನು ಖಾಸಗಿ ವಾಹನ ಎಳೆದೊಯ್ದಿದೆ. ಮೃತ ಪಟ್ಟ ಯುವಕ ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ಗಣೇಶ್ ಎಂಬುವವರ ಪುತ್ರ ವಿಖ್ಯಾತ್ (24) ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ಹೈವೇ ಪೆಟ್ರೊಲ್ ವಾಹನದ ಸಿಬ್ಬಂದಿಗಳಿಂದ ಅಫಘಾತದ ಮಾಹಿತಿ ಪಡೆದಿದ್ದಾರೆ.

Bike rider died on the spot in a vehicle accident

ಮೃತದೇಹ ಹೆದ್ದಾರಿಯಲ್ಲಿ ಅನಾಥವಾಗಿ ಬಿದ್ದಿದ್ದು, ಗಂಗೊಳ್ಳಿ 24x7 ಹೆಲ್ಪ್ ಲೈನ್ ಸ್ವಯಂಸೇವಕರು ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.ವಿಖ್ಯಾತ್ ಕುಂದಾಪುರದ ಹೊಟೇಲ್ ವೊಂದರಲ್ಲಿ ಕೆಲಸಕ್ಕಿದ್ದ. ತಡರಾತ್ರಿ 12.30 ಸುಮಾರಿಗೆ ಅಫಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+