ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಪೌರ ಕಾರ್ಮಿಕನಿಗೆ ಹಲ್ಲೆ ನಡೆಸಿದ ಅಂಗಡಿಯ ಲೈಸೆನ್ಸ್ ರದ್ದು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮಾರ್ಚ್ 15: ಪೌರ ಕಾರ್ಮಿಕನ ಮೇಲೆ ನಡೆದ ಹಲ್ಲೆ ಕುರಿತಂತೆ ಭಾನುವಾರ ಸಂಜೆ 4 ಗಂಟೆಗೆ ಉಡುಪಿ ನಗರಸಭೆ ಕಚೇರಿಯಲ್ಲಿ ನಗರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು.

ಉಡುಪಿಯ ಪೌರ ಕಾರ್ಮಿನಿಗೆ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಯಾವುದೇ ರೀತಿಯಲ್ಲೂ ಆರೋಪಿಗಳ ರಕ್ಷಣೆಗೆ ನಿಲ್ಲುವುದಿಲ್ಲ ಎಂಬ ಖಂಡನಾ ನಿರ್ಣಯವನ್ನೂ ಅಂಗೀಕರಿಸಲಾಯಿತು.

ಉಡುಪಿ: ಪೌರ ಕಾರ್ಮಿಕನಿಗೆ ನಡು ರಸ್ತೆಯಲ್ಲೇ ಹಲ್ಲೆ: ಇಬ್ಬರು ಆರೋಪಿಗಳು ಅಂದರ್ಉಡುಪಿ: ಪೌರ ಕಾರ್ಮಿಕನಿಗೆ ನಡು ರಸ್ತೆಯಲ್ಲೇ ಹಲ್ಲೆ: ಇಬ್ಬರು ಆರೋಪಿಗಳು ಅಂದರ್

ಸಭೆ ಬಳಿಕ ಮಾತನಾಡಿದ ಉಡುಪಿ ಶಾಸಕ ರಘುಪತಿ ಭಟ್, ಪೌರ ಕಾರ್ಮಿಕನಿಗೆ ಹಲ್ಲೆ ನಡೆಸಿದ್ದು ಅಸ್ಮಾ ಇಲೆಕ್ಟ್ರಾನಿಕ್ ಅಂಗಡಿಯ ಸಿಬ್ಬಂದಿ. ಹೀಗಾಗಿ ಕಠಿಣ ಸಂದೇಶ ರವಾನಿಸುವ ದೃಷ್ಟಿಯಿಂದ ಅಸ್ಮಾ ಇಲೆಕ್ಟ್ರಾನಿಕ್‌ನ ಲೈಸನ್ಸ್ ರದ್ದು ಪಡಿಸಲು ನಿರ್ಣಯ ಮಾಡಲಾಗಿದೆ ಎಂದು ಹೇಳಿದರು.

Udupi: Assault On Municipality Worker: Accused Shop License Cancelled

Recommended Video

ಚೀನಾದಲ್ಲಿ ಪತ್ತೆಯಾಯಿತು ಮತ್ತೊಂದು ವೈರಸ್ | Oneindia Kannada

ಹಲ್ಲೆ ನಡೆಸಿದವರು ಯಾರೇ ಆಗಿರಲಿ, ರಾಜಿಯ ವಿಷಯವೇ ಇಲ್ಲ. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಶಾಸಕ ರಘುಪತಿ ಭಟ್ ಇದೇ ವೇಳೆ ಎಚ್ಚರಿಕೆ ನೀಡಿದರು.

English summary
In Udupi municipality, has been urged to take stern action against those who attacked Municipality worker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X