ವಿದೇಶದಿಂದ ಬಂದು ಬರಡು ಭೂಮಿಯಲ್ಲಿ ಬದುಕು ಬದಲಿಸಿಕೊಂಡ ಕಾರ್ಕಳದ ಕೃಷಿಕ
ಉಡುಪಿ, ಮೇ 08: ಆಧುನೀಕತೆಯ ಭರಾಟೆಯಲ್ಲಿ ಹೆಚ್ಚಿನವರು ಆಧುನೀಕತೆಯ ಅನುಕರಣೆಯಲ್ಲಿಯೇ ಕರಗಿಹೋಗುತ್ತಿದ್ದಾರೆ. ಆಧುನಿಕ ಜಗತ್ತಿನಲ್ಲಿ ಯುವ ಜನತೆ ಕೃಷಿ ಕಾಯಕದಿಂದ ದೂರ ಸರಿಯುತ್ತಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಹಳ್ಳಿಯ ಯುವಕರು ನಗರದತ್ತ ಮುಖ ಮಾಡಿ ಕೃಷಿ ಕಾಯಕವನ್ನು ಬಿಡುತ್ತಿದ್ದಾರೆ.
ಆದರೆ ಆ್ಯಂಟಿನಿ ಅಲಿಯಾ ಡಿಸಿಲ್ವಾ ಎನ್ನುವವರು ವಿದೇಶದಿಂದ ಬಂದು ಕಾರ್ಕಳದ ಗ್ರಾಮೀಣ ಪ್ರದೇಶದ ಬರಡು ಭೂಮಿಯಲ್ಲಿ ವಿವಿಧ ತಳಿಗಳ ಹಣ್ಣಿನ ಗಿಡಗಳನ್ನು ಬೆಳಸಿ ಯಶಸ್ವಿಯಾಗಿದ್ದಾರೆ.

ಆ್ಯಂಟಿನಿ ಅಲಿಯಾ ಡಿಸಿಲ್ವಾ ಮೂಲತಃ ಮಂಗಳೂರಿನವರು. ಇವರಿಗೆ ಬಾಲ್ಯದಿಂದಲೇ ಕೃಷಿಯ ಮೇಲೆ ತುಂಬಾನೆ ಆಸಕ್ತಿ, ಆದರೆ ಇವರು ನಗರ ಭಾಗದಲ್ಲಿ ಹುಟ್ಟಿರುವುದರಿಂದ ಕೃಷಿ ಮಾಡಲು ಇವರ ಬಳಿ ಕೃಷಿಗೆ ಬೇಕಾಗುವಷ್ಟು ಜಾಗವೂ ಇರಲಿಲ್ಲ. ಆದ್ದರಿಂದ ಬಾಲ್ಯದಿಂದಲೇ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಆಸಕ್ತಿ ಇದ್ದಾರೆ ಏನಾದ್ರೂ ಸಾಧಿಸಿಬಹುದು ಅಂದು ಕೊಂಡಿದ್ದ ಇವರು ಕೃಷಿಯಲ್ಲಿ ಆಸಕ್ತಿಯಿದ್ದರು ಕೆಲಸಕ್ಕಾಗಿ ಮಾತ್ರ ಗಲ್ಫ್ ರಾಷ್ಟಕ್ಕೆ ಹೋದರು.
ಗಲ್ಫ್ ನಲ್ಲಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿ ನಿವೃತ್ತಿಯ ಬಳಿಕ ಕೂಡಿಟ್ಟ ಹಣದಲ್ಲಿ ತನ್ನ ಊರಿನಲ್ಲಿ ಏನಾದರೂ ಕೃಷಿ ಮಾಡಬೇಕೆಂದು ಯೋಜನೆ ಮಾಡಿದ್ದರು. ಅದರಂತೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮೀಣ ಪ್ರದೇಶದಲ್ಲಿ ಸುಮಾರು ಮೂರುವರೆ ಎಕರೆ ಬರಡು ಪ್ರದೇಶವನ್ನು ಕಡಿಮೆ ಬೆಲೆಗೆ ಖರೀದಿ ಮಾಡಿದರು.

ಬಳಿಕ ವಿವಿಧ ತೋಟಾಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಯಾವ ಕೃಷಿ ಉತ್ತಮ ಎಂಬುವುದರ ಬಗ್ಗೆ ಅಧ್ಯಯನ ಮಾಡಲು ಶುರು ಮಾಡಿದರು. ಆದರೆ ಎಲ್ಲಿ ನೋಡಿದ್ರು ಅಡಿಕೆ ಬೆಳೆ ಇವರಿಗೆ ಕಾಣ ಸಿಗುತಿತ್ತು. ಅದಕ್ಕಾಗಿ ಇವರು ಅಡಿಕೆ ಒಂದನ್ನು ಬಿಟ್ಟು ಬೇರೆ ಏನಾದರೂ ಮಾಡಬೇಕು ಎಂದು ಯೋಚಿಸಿದ ಇವರು ಮೂರವರೆ ಎಕರೆ ಬರಡು ಭೂಮಿಯಲ್ಲಿ ವಿವಿಧ ತಳಿ ಹಣ್ಣುಗಳನ್ನು ಬೆಳೆಸಿ ಯಶಸ್ಸು ಕಂಡಿದ್ದಾರೆ.
ಇನ್ನು ಮೂರುವರೆ ಎಕರೆಯಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ವಿವಿಧ ತಳಿಯ ಹಣ್ಣುಗಳನ್ನು ಸಾವಯವ ಗೊಬ್ಬರದ ಮೂಲಕ ಬೆಳಿಸಿದ್ದಾರೆ. ಡ್ರಾಗ್ಯನ್, ಮ್ಯಾಂಗೋಸ್ಟೀನ್, ರಂಭೂಟನ್, ಚಿಕ್ಕು, ಹಲಸು ಸೇರಿದಂತೆ ಎಪ್ಪತ್ತಕ್ಕೂ ಹೆಚ್ಚು ದೇಶಿ ಹಾಗೂ ವಿದೇಶಿ ತಳಿಯ ಹಣ್ಣುಗಳನ್ನು ಬೆಳೆಸಿದ್ದಾರೆ. ಮತ್ತು ಸೀಸನಲ್ ಹಣ್ಣುಗನ್ನು ಬೆಳೆಸಿಯು ಇವರು ಯಶ್ಶಸ್ಸು ಕಂಡಿದ್ದಾರೆ.
ತಮ್ಮ ತೋಟದಲ್ಲಿ ಬೆಳೆದ ಹಣ್ಣುಗಳನ್ನು ಯಾವುದೇ ಮಾರುಕಟ್ಟೆಗೆ ಹಾಕುವುದಿಲ್ಲ ಬದಲಾಗಿ ಮಂಗಳೂರಿನ ತನ್ನ ಮನೆಯ ಹತ್ತಿರದಲ್ಲಿ ಒಂದು ಅಂಗಡಿಯನ್ನು ಖರೀದಿಸಿ ಇವರೇ ಮಾರಟ ಮಾಡುತ್ತಾರೆ. ಇವರು ಸಾವಯವ ಗೊಬ್ಬರದ ಮೂಲಕ ಹಣ್ಣುಗಳನ್ನು ಬೆಳೆಸುವುದರಿಂದ ಇವರ ತೋಟದಲ್ಲಿ ಬೆಳೆದ ಹಣ್ಣುಗಳಿಗೆ ಬಾರೀ ಬೇಡಿಕೆಯು ಇದೆ. ಕೆಲಸದಲ್ಲಿ ಆಸಕ್ತಿವೊಂದಿದ್ದರೆ ಏನನ್ನು ಸಾಧೀಸಬಹುದು ಎಂಬುವುಕ್ಕೆ ಆ್ಯಂಟಿನಿ ಅಲಿಯಾ ಡಿಸಿಲ್ವಾ ಒಂದು ಉತ್ತಮ ಉದಾಹರಣೆಯಾಗಿದ್ದಾರೆ.












Click it and Unblock the Notifications