ಉಡುಪಿ ಜುಲೈ 20: ಜೀವ ಉಳಿಸಬೇಕಾದ ಆಂಬ್ಯುಲೆನ್ಸ್ ತನ್ನ ವೇಗದಿಂದಲೇ ಇತರರ ಪ್ರಾಣಕ್ಕೆ ಕುತ್ತು ತಂದ ಘಟನೆ ಬುಧವಾರ ಉಡುಪಿ ಜಿಲ್ಲೆಯಲ್ಲಿ ಜರುಗಿದೆ. ವೇಗವಾಗಿ ಬಂದ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ರಸ್ತೆ ಟೋಲ್ ಗೇಟ್‌ಗೆ ಗುದ್ದಿದ ಘಟನೆ ನಡೆದಿದೆ.
ಅಪಘಾತದಲ್ಲಿ ರೋಗೊ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು ಆಂಬುಲೆನ್ಸ್ ಚಾಲಕ, ಟೋಲ್ ಸಿಬ್ಬಂದಿ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟೋಲ್ ಸಿಬ್ಬಂದಿ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಆಂಬ್ಯುಲೆನ್ಸ್ ಎಂದಾಕ್ಷಣ ಅದರ ತುರ್ತು ಚಾಲನೆ, ರೋಗಿಗಳಿಗೆ ಅದರ ಅನಿವಾರ್ಯತೆ, ರಸ್ತೆಯುದ್ಧಕ್ಕೂ ಅದರ ಸದ್ದು ನೆನಪಾಗುತ್ತದೆ. ಆದರೆ ಇಲ್ಲೊಂದು ಆಂಬ್ಯುಲೆನ್ಸ ತನ್ನ ವೇಗದ ಚಾಲನೆಯಿಂದಲೇ ಟೋಲ್‌ಗೆ ಡಿಕ್ಕಿ ಹೊಡೆದು ಜನರ ಜೀವಕ್ಕೆ ಕಂಟಕಪ್ರಾಯವಾಗಿದೆ. ಈ ರಣ ಭೀಕರ ಘಟನೆ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.
ಉಡುಪಿ: ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಚಾಲಕನ ಅತೀವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಟೋಲ್ ಕಂಬಕ್ಕೆ ಡಿಕ್ಕಿಯಾಗಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.#Udupi#ambulance#Honnavar#CCTV
Speeding ambulance collided with Shiruru toll road in Udupi, accident in that place. Three are seriously injured and the condition of the toll staff is the incident. The scene of the accident was captured on CCTV.