ಉಡುಪಿಯಲ್ಲಿ 144 ಸೆಕ್ಷನ್ ಜಾರಿಯಿದ್ದರೂ ತೆರೆದ ಅಂಗಡಿಗಳು

ಉಡುಪಿ, ಮಾರ್ಚ್ 23: ಉಡುಪಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರು ತೆರೆದಿದ್ದಾರೆ. ಬಂದ್ ಮಾಡಿ ಎಂದು ನಗರಸಭೆ ಆಯುಕ್ತರು ಎಷ್ಟೇ ಹೇಳಿದರೂ ವ್ಯಾಪಾರಿಗಳು ಕೇಳಲಿಲ್ಲ.

ಮಾತಿಗೆ ಬಗ್ಗದ ವ್ಯಾಪಾರಿಗಳ ಮೇಲೆ ನಗರಸಭೆ ಆಯುಕ್ತರು ಕೆಂಡಾಮಂಡಲರಾದ ಪ್ರಸಂಗ ನಡೆಯಿತು. ಅಂಗಡಿ ಮುಚ್ಚದಿದ್ದರೆ ಲೈಸನ್ಸ್ ರದ್ದು ಮಾಡುತ್ತೇನೆ ಎಂದು ನಗರಸಭೆ ಆಯುಕ್ತ ಆನಂದ್ ಕಲ್ಲೋಲಿಕರ್ ಗುಡುಗಿದರು.

All Shops Opened In Udupi City

ಪೌರಾಯುಕ್ತರು ಹೀಗೆ ಹೇಳುತ್ತಿದ್ದಂತೆಯೇ ದಡಬಡನೆ ಅಂಗಡಿ ಬಾಗಿಲುಗಳು ಮುಚ್ಚಿದವು. ಉಡುಪಿ ನಗರ ಭಾಗದ ಎಲ್ಲಾ ಅಂಗಡಿಗಳನ್ನು ಪೌರಾಯುಕ್ತರು ಮುಚ್ಚಿಸಿದ್ದಾರೆ.

All Shops Opened In Udupi City

ದಿನದ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೆಲ್ಲಾ ಅಂಗಡಿಗಳನ್ನು ಮುಚ್ಚಿಸಿದ್ದು, ಉಡುಪಿ ನಗರದಲ್ಲಿ ಕೊರೊನಾ ವೈರಸ್ ಹರಡುವಿಕೆ ತಡೆಯಲು ನಗರಸಭೆಯಿಂದ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+