ಉಡುಪಿಯಲ್ಲಿ 60 ಲಕ್ಷ ವೆಚ್ಚದಲ್ಲಿ 'ಅಡ್ವೆಂಚರ್ ಫೆಸ್ಟ್'

Subscribe to Oneindia Kannada

ಉಡುಪಿ, ಡಿಸೆಂಬರ್ 21: ಎರಡು ದಿನಗಳ ಅಡ್ವೆಂಚರ್ ಫೆಸ್ಟಿವಲ್ (ಸಾಹಸ ಹಬ್ಬ)ವನ್ನು ಉಡುಪಿಯಲ್ಲಿ ಆಯೋಜನೆ ಮಾಡಲಾಗಿದೆ. ಇದೇ ಡಿಸೆಂಬರ್ 30 ಮತ್ತು 31ರಂದು ಈ ಹಬ್ಬ ನಡೆಯಲಿದೆ.

ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಈ ಫೆಸ್ಟ್ ಆಯೋಜನೆ ಮಾಡಲಾಗಿದೆ. ಸುಮಾರು, "60 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಹಬ್ಬ ಆಯೋಜಿಸಲಾಗಿದೆ" ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕ್ರೀಡಾ ಮತ್ತು ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

Adventure Festival in Udupi on Dec 30 and 31

'ಜನರಲ್ ತಿಮ್ಮಯ್ಯ ಅಕಾಡೆಮಿ ಆಫ್ ಅಡ್ವೆಂಚರ್' ಈ ಸಾಹಸ ಹಬ್ಬವನ್ನು ಆಯೋಜನೆ ಮಾಡಿದೆ.

ಈ ಸಾಹಸ ಹಬ್ಬದ ಪ್ರಯುಕ್ತ, ರಾಷ್ಟ್ರೀಯ ಸಮುದ್ರ ಈಜು ಸ್ಪರ್ಧೆ, ವೇಗವಾಗಿ ಗೋಡೆ ಹತ್ತುವುದು, ಸೈಕ್ಲಿಂಗ್, ಮ್ಯಾರಥಾನ್, ಸ್ಕೇಟ್ ಬೋರ್ಡಿಂಗ್ ಮತ್ತು ಇತರ ಸಾಹಸ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a bid to encourage adventure tourism General Thimmayya National Academy of Adventure organises a ‘Adventure Festival’ in Udupi. The estimated cost of the adventure festival is Rs 60 lakh. And to be held on 30 and 31st December 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ