ಉಡುಪಿ: 1 ರುಪಾಯಿಗಾಗಿ ಟೋಲ್ ಗೇಟ್ ನಲ್ಲಿ ಯುವಕರ ಗಲಾಟೆ ವಿಡಿಯೋ ವೈರಲ್

ಉಡುಪಿ, ಜುಲೈ 6: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಸಾಸ್ತಾನ ಟೋಲ್ ಗೇಟ್ ನಲ್ಲಿ ಒಂದು ರುಪಾಯಿಗಾಗಿ ಯುವಕರು ಸಾಮಾಜಿಕ ಅಂತರ ಮರೆತು ಗಲಾಟೆ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ.

Recommended Video

      Kushal Mendis arrested ಶ್ರೀಲಂಕಾ ಕ್ರಿಕೆಟಿಗರ್ ಕುಸಾಲ್ ಮೆಂಡಿಸ್ ಅರೆಸ್ಟ್ | Oneindia Kannada

      5 ರುಪಾಯಿ ಚಿಲ್ಲರೆ ಬದಲಿಗೆ 4 ರುಪಾಯಿ ನೀಡಿದ್ದ ಟೋಲ್ ಸಿಬ್ಬಂದಿಯ ವಿರುದ್ಧ ಕಿಡಿಗೇಡಿ ಯುವಕರು ಏರಿ ಹೋಗಿದ್ದಾರೆ. ಒಂದು ರುಪಾಯಿ ನೀಡಿಲ್ಲ ಎನ್ನುವ ಕಾರಣಕ್ಕೆ ಪ್ರಾರಂಭವಾದ ಗಲಾಟೆಯು ಘರ್ಷಣೆಯ ರೂಪ ಪಡೆದುಕೊಂಡಿದೆ.

      ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಸಮಯದಲ್ಲೂ ಯುವಕರ ಮುಖದಲ್ಲಿ ಮಾಸ್ಕ್ ಕೂಡ ಇಲ್ಲ, ಸಾಮಾಜಿಕ ಅಂತರವೂ ಇಲ್ಲ. ಕೊನೆಗೆ ಈ ಒಂದು ರುಪಾಯಿ ಗಲಾಟೆ ತಳ್ಳಾಟ, ಹೊಡೆದಾಟದ ತನಕವೂ ತಲುಪಿದೆ.

      Udupi: A Youths Uproar At The Toll Gate For 1 Rupee, Video Goes Viral

      ಟೋಲ್ ಸಿಬ್ಬಂದಿ ಮತ್ತು ಯುವಕರ ತಂಡ ಅಕ್ಷರಶಃ ಗುಂಪುಗೂಡಿ ಘರ್ಷಣೆಗಿಳಿದಿದೆ. ಟೋಲ್ ಗೇಟ್ ನಲ್ಲಿ ಪೊಲೀಸ್ ಸಿಬ್ಬಂದಿಯೂ ಇರಲಿಲ್ಲ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಜ್ಞಾವಂತರ ಜಿಲ್ಲೆಯಲ್ಲಿ ನಡೆದಿರುವ ಈ ಗಲಾಟೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+