ಉಡುಪಿ ಡಿಸಿ ಕೊಲೆ ಯತ್ನ ಕೇಸ್: ಬಂಧಿತರ ಸಂಖ್ಯೆ 20ಕ್ಕೆ ಏರಿಕೆ

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಎಪ್ರಿಲ್ 10: ಉಡುಪಿ ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತೆ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ.

ಬಂಧಿತರನ್ನ ಶುಕೂರ್ (48), ಅರ್ಫಾತ್ (23), ಫಯಾಜ್ ಅಹಮದ್ 22), ಯಾಸೀನ್ (20), ಮುಸೀನ್ (23), ರಾಘವೇಂದ್ರ ಆಚಾರ್ (36) ಎಂದು ಗುರುತಿಸಲಾಗಿದೆ.['ನಾವು ಯಾರಿಗೂ ಹೆದರಲ್ಲ,'ಉಡುಪಿ ಡಿಸಿ ಪ್ರಿಯಾಂಕಾ ಖಡಕ್ ಮಾತು]

6 more persons arrested in Udupi DC and AC murder attempt case

ಕಳೆದ ವಾರದ ಸೋಮವಾರ ರಾತ್ರಿ ಉಡುಪಿ ನೂತನ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ , ಕುಂದಾಪುರ ಎಸಿ ಶಿಲ್ಪನಾಗ್ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಡ್ಲೂರಿನಲ್ಲಿ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಇವರನ್ನ ಮರಳು ದಂಧೆಕೋರರು ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದರು.[ಉಡುಪಿ ಡಿಸಿ ಕೊಲೆ ಯತ್ನ ಖಂಡಿಸಿ ನಾಳೆ ಸರಕಾರಿ ನೌಕರರ ಬಂದ್]

ಸುಮಾರು 50 ಜನರ ಗುಂಪು ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಕುಂದಾಪುರ ಎಸಿ ಶಿಲ್ಪಾ ನಾಗ್ ಮತ್ತವರ ತಂಡದ ಮೇಲೆ ದಾಳಿ ನಡೆಸಿತ್ತು. ಪ್ರಕರಣ ಸಂಬಂಧ ಇದುವರೆಗೆ 14 ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಆರು ಆರೋಪಿಗಳನ್ನ ಬಂಧಿಸಲಾಗಿದೆ. ಉಳಿದ ಆರೋಪಿಗಳಿಗೆ ಉಡುಪಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Six more persons arrested relating to murder attempt on Udupi DC and Kundapur AC case. Sand mafia people try to attack on Udupi DC Priyanka Mary Francis and Kundapur AC Shilpa Nag, when the officials attack on illegal sand mining spots in Kadlur of Kundapur.
Please Wait while comments are loading...