ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಜಾಗ್ರತಾ ಕ್ರಮವಾಗಿ ಉಡುಪಿಯಲ್ಲಿ 17 ಮಂದಿ ಗಡಿಪಾರು: ಎಸ್ಪಿ ನಿಂಬರ್ಗಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 11: ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 1103 ಪೊಲಿಂಗ್ ಬೂತ್ ಗಳನ್ನು ಸ್ಥಾಪಿಸಲಾಗಿದ್ದು , 226 ಮತಗಟ್ಟೆಗಳನ್ನು ಸೂಕ್ಷ್ಮ ಪೊಲಿಂಗ್ ಬೂತ್ ಗಳೆಂದು ಪರಿಗಣಿಸಲಾಗಿದೆ ಎಂದು ಉಡುಪಿ ಎಸ್ಪಿ ನಿಂಬರ್ಗಿ ಹೇಳಿದ್ದಾರೆ.

ಚುನಾವಣೆ ಭದ್ರತೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ , ಜಿಲ್ಲೆಯಲ್ಲಿ ಭದ್ರತೆಗಾಗಿ 2500ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 16 ಸೆಂಟ್ರಲ್ ಪ್ಯಾರ ಮಿಲಿಟರಿ ಫೋರ್ಸ್, 3 ಕೆ.ಎಸ್.ಆರ್.ಪಿ ತುಕಡಿಗಳು ಭದ್ರತೆಯ ಜವಾಬ್ದಾರಿ ವಹಿಸಲಿವೆ ಎಂದರು.

ದಕ್ಷಿಣ ಕನ್ನಡದ ನಕ್ಸಲ್ ಪೀಡಿತ ಮತಗಟ್ಟೆಗಳ ಮೇಲೆ ಹದ್ದಿನ ಕಣ್ಣುದಕ್ಷಿಣ ಕನ್ನಡದ ನಕ್ಸಲ್ ಪೀಡಿತ ಮತಗಟ್ಟೆಗಳ ಮೇಲೆ ಹದ್ದಿನ ಕಣ್ಣು

ಮುಂಜಾಗ್ರತಾ ಕ್ರಮವಾಗಿ 2232 ಸೆಕ್ಯುರಿಟಿ ಕೇಸ್ ಫೈಲ್ ಮಾಡಲಾಗಿದ್ದು , ರೌಡಿಶೀಟರ್ಸ್, ಕಮ್ಯೂನಲ್ ಗೂಂಡಾ ಇವರಿಂದ ಬಾಂಡ್ ಪಡೆಯಲಾಗಿದೆ ಅಂತ ಮಾಹಿತಿ ನೀಡಿದರು. ಉಳಿದಂತೆ 3 ಜನರ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ.

17 persons were exile in Udupi for precautionary measures.

17 ಮಂದಿಯನ್ನು ಗಡಿಪಾರು ಮಾಡಲಾಗಿದೆ. 54 ಬೂತ್ ಗಳನ್ನು ನಕ್ಸಲ್ ಬೂತ್ ಎಂದು ಪರಿಗಣನೆ ಮಾಡಲಾಗಿದೆ ಅಂತ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 9,93,415 ಮತದಾರರಿದ್ದಾರೆ. ಇವರಲ್ಲಿ 4,78,350 ಪುರುಷ ಮತದಾರರು, 5,15,041 ಮಹಿಳಾ ಮತದಾರರು ಮತ್ತು 24 ತೃತೀಯ ಲಿಂಗಿ ಮತದಾರರಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಚುನಾವಣೆಗೆ ಸಿದ್ಧತೆ: ಮತಗಟ್ಟೆಯೊಳಗೆ ಯಾರಿಗೆಲ್ಲಾ ಪ್ರವೇಶ? ದ.ಕ. ಜಿಲ್ಲೆಯಲ್ಲಿ ಚುನಾವಣೆಗೆ ಸಿದ್ಧತೆ: ಮತಗಟ್ಟೆಯೊಳಗೆ ಯಾರಿಗೆಲ್ಲಾ ಪ್ರವೇಶ?

ಸದ್ಯ ಉಡುಪಿಯಲ್ಲಿ ಕಾಂಗ್ರೆಸ್ ಯುವ ರಾಜಕಾರಣಿ ಪ್ರಮೋದ್ ಮಧ್ವರಾಜ್ ಈ ಬಾರಿಯೂ ಗೆಲ್ಲುವ ತವಕದಲ್ಲಿದ್ದಾರೆ. ಅವರ ಓಟಕ್ಕೆ ಬಿಜೆಪಿ ಅಭ್ಯರ್ಥಿಗಳು ಅಡ್ಡಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

English summary
SP Nimbargi Said 1103 polling booths have been set up in Udupi district on the backdrop of assembly elections. 226 polling booths are considered to be sensitive policing booths. 17 persons were exile in Udupi for precautionary measures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X