ಅಜ್ಜಿ ಮನೆಗೆ ಹೋಗಿ ಬರುತ್ತೇನೆಂದ ಯುವಕ ಕಾಣೆ
ತುಮಕೂರು, ಏಪ್ರಿಲ್ 25:ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಬಡಾವಣೆಯಿಂದ ರವಿಕುಮಾರ್ (24) ಎಂಬ ಯುವಕ ಏಪ್ರಿಲ್ 16 ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಮನೆಯಿಂದ ಕಾಣೆಯಾಗಿದ್ದಾನೆ ಎಂದು ಈತನ ತಂದೆ ಚಂದ್ರಪ್ಪ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ರವಿಕುಮಾರನು ಫ್ಲವರ್ ಡೆಕೋರೇಷನ್ ಕೆಲಸ ಮಾಡಿಕೊಂಡಿದ್ದು, ಅಜ್ಜಿಯ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಇನ್ನೂ ಮರಳಿ ಬಂದಿರುವುದಿಲ್ಲ. ಈತನು 5.9 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಬಿಳಿ ಬಣ್ಣದ ಅಂಗಿ ಧರಿಸಿದ್ದನು. ಕನ್ನಡ ಮಾತನಾಡುತ್ತಾನೆ.

ಕಾಣೆಯಾಗಿರುವ ರವಿಕುಮಾರ್ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ಸಂ 0816-2281124/ 2281120/ 2278000 ಸಂಪರ್ಕಿಸಬೇಕೆಂದು ಆರಕ್ಷಕ ಉಪ ನಿರೀಕ್ಷಕರು ಮನವಿ ಮಾಡಿದ್ದಾರೆ.












Click it and Unblock the Notifications