ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಮೇಶ್ವರ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ಏಕೆ?

|
Google Oneindia Kannada News

ತುಮಕೂರು, ಅಕ್ಟೋಬರ್ 11 : ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ ಒಡೆತನದ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೇಲೆ ಐಟಿ ದಾಳಿ ನಡೆಸಿದೆ. ಎರಡು ದಿನಗಳಿಂದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, "ನಾವು ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಇನ್ಯಾವುದೇ ವ್ಯವಹಾರವನ್ನು ನಡೆಸುತ್ತಿಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕೆ ದಾಳಿ ಮಾಡಿದ್ದಾರೆ ಗೊತ್ತಿಲ್ಲ. ಅವರಿಗೆ ಅಗತ್ಯವಾಗಿರುವ ಮಾಹಿತಿ ನೀಡುತ್ತೇವೆ" ಎಂದು ಹೇಳಿದರು.

ಕಚೇರಿ, ನಿವಾಸದ ಮೇಲೆ ಐಟಿ ದಾಳಿ; ಪರಮೇಶ್ವರ ಹೇಳಿದ್ದೇನು?ಕಚೇರಿ, ನಿವಾಸದ ಮೇಲೆ ಐಟಿ ದಾಳಿ; ಪರಮೇಶ್ವರ ಹೇಳಿದ್ದೇನು?

ಜಿ. ಪರಮೇಶ್ವರ ಒಡೆತನದ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೀಟು ಬ್ಲಾಕಿಂಗ್ ಹಗರಣ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ರಾಜಸ್ಥಾನದ ವಿದ್ಯಾರ್ಥಿಗಳ ವಿಚಾರಣೆ ನಡೆಸಿದ ಬಳಿಕ ಐಟಿ ದಾಳಿ ನಡೆಸಲಾಗಿದೆ ಎಂಬ ವರದಿಗಳು ಬರುತ್ತಿವೆ.

ಜಿ ಪರಮೇಶ್ವರ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು? ಜಿ ಪರಮೇಶ್ವರ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು?

Why IT Raid On G Parameshwara Owned Education Institution

ಮ್ಯಾನೇಜ್ ಮೆಂಟ್‌ ಕೋಟಾದಡಿ ನಿಗದಿಯಾದ 300 ಮೆಡಿಕಲ್ ಸೀಟುಗಳಲ್ಲಿ 168 ಸೀಟುಗಳನ್ನು ವಿವಿಧ ಕಾಲೇಜುಗಳಲ್ಲಿ ಬ್ಲಾಕ್ ಮಾಡಲಾಗಿತ್ತು. ಬಳಿಕ ಇದನ್ನು ನೀಟ್ ಪರೀಕ್ಷೆಯಲ್ಲಿ ಕಡಿಮೆ rank ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾಗಿದೆ ಎಂಬುದು ಆರೋಪವಾಗಿದೆ.

ಸುದೀಪ್, ಪುನೀತ್, ಯಶ್ ಅಘೋಷಿತ ಆಸ್ತಿ, ಐಟಿ ಇಲಾಖೆ ಮರು ತನಿಖೆ ಸುದೀಪ್, ಪುನೀತ್, ಯಶ್ ಅಘೋಷಿತ ಆಸ್ತಿ, ಐಟಿ ಇಲಾಖೆ ಮರು ತನಿಖೆ

ಸುಮಾರು 6 ಲಕ್ಷ ರೂ. ಸೀಟನ್ನು 50 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂಬ ಆರೋಪವಿದೆ. ರಾಜಸ್ಥಾನದ 68 ವಿದ್ಯಾರ್ಥಿಗಳಿಗಾಗಿ ಸೀಟ್ ಬ್ಲಾಕ್ ಮಾಡಲಾಗಿತ್ತು. ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಇವರು ಸೀಟುಗಳನ್ನು ಬಿಟ್ಟುಕೊಟ್ಟಿದ್ದರು. ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬುದು ದೂರಿನ ಸಾರಂಶವಾಗಿದೆ.

ಆರ್. ಎಲ್. ಜಾಲಪ್ಪ ಒಡೆತನದ ದೇವರಾಜ್ ಅರಸು ಮೆಡಿಕಲ್ ಕಾಲೇಜಿನಲ್ಲಿ 58 ಸೀಟುಗಳನ್ನು ಮಾರಾಟ ಮಾಡಲಾಗಿದೆ ಎಂಬುದು ಆರೋಪ. ಐಟಿ ಅಧಿಕಾರಿಗಳು ಕಾಲೇಜಿನ ಮೇಲೆ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೇಲೆಯೂ ದಾಳಿ ನಡೆದಿದೆ. 114 ಸೀಟುಗಳನ್ನು ಬ್ಲಾಕ್ ಮಾಡಿಸಿ ಬಳಿಕ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗಿದೆ ಎಂಬುದು ಆರೋಪವಾಗಿದೆ.

English summary
Income Tax department officials conducted raid on Sri Siddhartha Institute of Technology which belongs to Congress Leader G.Parameshwara. Why IT raid on education institution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X