• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಡೀ ಕರ್ನಾಟಕ ನನ್ನ ಕ್ಷೇತ್ರದತ್ತ ನೋಡುತ್ತಿದೆ: ಡಿ.ಕೆ.ಸುರೇಶ್

|

ಬೆಂಗಳೂರು, ಜೂನ್ 13: ಲೋಕಸಭೆ ಚುನಾವಣೆ ನಂತರ ಇಡೀಯ ಕರ್ನಾಟಕ ನಮ್ಮ ಲೋಕಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರದತ್ತ ನೋಡುವಂತಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಅವರು ಹೇಳಿದರು.

ಕುಣಿಗಲ್ ತಾಲ್ಲೂಕಿನಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಾಂಭದಲ್ಲಿ ಮಾತನಾಡಿದ ಅವರು, ಇಡೀಯ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿರುವುದು ಈ ಒಂದು ಕ್ಷೇತ್ರದಲ್ಲಿ ಮಾತ್ರ, ಈ ಗೆಲುವು ಸಾಧ್ಯವಾಗಿದ್ದು ಕಾರ್ಯಕರ್ತರ ಶ್ರಮದಿಂದ ಎಂದು ಡಿ.ಕೆ.ಸುರೇಶ್ ಹೇಳಿದರು.

2020ರಲ್ಲಿ ಸಮ್ಮಿಶ್ರ ಸರ್ಕಾರ ಉರುಳುತ್ತದೆ ಎಂದ ಕಾಂಗ್ರೆಸ್ ಮುಖಂಡ

ಇಡೀ ದೇಶದಲ್ಲೇ ಮೋದಿ ಅಲೆ ಇತ್ತು ಆದರೆ ಮಾಗಡಿ, ಕುಣಿಗಲ್, ಕನಕಪುರ, ರಾಮನಗರದಲ್ಲಿ ಈ ಅಲೆ ಕೊಚ್ಚಿಹೋಗಿದೆ. ಗೆಲ್ಲಿಸಿದ ಮತದಾರರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಚುನಾವಣೆ ಎದುರಿಸಿದ್ದು, ಬೆಂಗಳೂರರು ಗ್ರಾಮಾಂತರದಲ್ಲಿ ಅಪಸ್ವರ ಬಾರದೇ ಮೈತ್ರಿ ಧರ್ಮ ಪಾಲೆಯಾಗಿದ್ದು, ಇದಕ್ಕೆ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

'ಮೈತ್ರಿ ಧರ್ಮ ಸರಿಯಾಗಿ ಪಾಲನೆಯಾಗಿದ್ದು ಇಲ್ಲಿ ಮಾತ್ರ'

'ಮೈತ್ರಿ ಧರ್ಮ ಸರಿಯಾಗಿ ಪಾಲನೆಯಾಗಿದ್ದು ಇಲ್ಲಿ ಮಾತ್ರ'

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾವುದೇ ಗೊಂದಲ, ಅಪಸ್ವರ ಇಲ್ಲದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಆಯಿತು. ಇದಕ್ಕಾಗಿ ನಾನು ಸಿಎಂ ಕುಮಾರಸ್ವಾಮಿ ಅವರಿಗೂ ಅಭಿನಂದನೆ ತಿಳಿಸುತ್ತೇನೆ ಎಂದು ಹೇಳಿದರು.

ಮಾಜಿ ಸಚಿವ ಡಿ.ನಾಗರಾಜಯ್ಯಗೆ ವಿಶೇಷ ಧನ್ಯವಾದ

ಮಾಜಿ ಸಚಿವ ಡಿ.ನಾಗರಾಜಯ್ಯಗೆ ವಿಶೇಷ ಧನ್ಯವಾದ

ಮಾಜಿ ಸಚಿವ ಡಿ.ನಾಗಾರಾಜಯ್ಯ ಅವರಿಗೆ ವಿಶೇಷ ಧನ್ಯವಾದ ತಿಳಿಸಿದ ಡಿ.ಕೆ.ಸುರೇಶ್, ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ನಡುವೆ ಅಸಮಾಧಾನ ಇದ್ದರೂ ಸಹ ನನಗೆ 41,000 ಕ್ಕೂ ಹೆಚ್ಚು ಲೀಡ್ ತಂದುಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಅಮಿತ್‌ ಶಾಗೆ ಮಹತ್ವದ ವರದಿ ನೀಡಿದ ಯಡಿಯೂರಪ್ಪ!

ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನೀರು ಭರವಸೆ

ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನೀರು ಭರವಸೆ

ಇದು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಒಕ್ಕೂರಲ ಜಯ, ಹಾಗಾಗಿ ಪಕ್ಷಾತೀತವಾಗಿ ನಾನು ನಿಮಗಾಗಿ ದುಡಿಯುತ್ತೇನೆ ಎಂದ ಅವರು, ಕುಣಿಗಲ್‌ ತಾಲ್ಲೂಕಿಗೆ ಹೇಮಾವತಿ ನೀರು ತರುವ ಬಗ್ಗೆ ಶಾಸಕರು ಮತ್ತು ನಾನು ರೂಪುರೇಶೆ ಮಾಡಿಕೊಂಡಿದ್ದೇವೆ ಎಂದರು.

ಕಾಂಗ್ರೆಸ್‌ 1, ಜೆಡಿಎಸ್ 1 ಕ್ಷೇತ್ರ ಮಾತ್ರ ಗೆದ್ದಿದೆ

ಕಾಂಗ್ರೆಸ್‌ 1, ಜೆಡಿಎಸ್ 1 ಕ್ಷೇತ್ರ ಮಾತ್ರ ಗೆದ್ದಿದೆ

ಇಡೀಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರವೇ ಜಯ ಸಾಧಿಸಿತು. ರಾಜ್ಯದಿಂದ ಲೋಕಸಭೆಗೆ ಹೋಗುವ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್. ಜೆಡಿಎಸ್ ಸಹ ಒಂದು ಸ್ಥಾನ ಮಾತ್ರ ಗೆದ್ದಿದ್ದು, ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ಗೆದ್ದಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಭಾರಿ ಬದಲಾವಣೆ: ಸಿದ್ದರಾಮಯ್ಯಗೆ ಹಿಂಬಡ್ತಿ?

English summary
Whole Karnataka is watching Bengaluru Rural constituency said Congress MP DK Suresh. He said this is the win of Congress-JDS party workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X