ವೈರಲ್ ವಿಡಿಯೋ: ಶ್ರೀಗಳು ನಮ್ಮನ್ನಗಲಿಲ್ಲ,ಇಂಥ ಮಕ್ಕಳಲ್ಲಿದ್ದಾರೆ ನೋಡಿ..!
Recommended Video

ತುಮಕೂರು, ಜನವರಿ 23: "ಅಣ್ಣಾ, ಅನ್ನ ವೇಸ್ಟ್ ಮಾಡ್ಬೇಡಿ ಪ್ಲೀಸ್, ಎಷ್ಟು ಬೇಕೋ ಅಷ್ಟೇ ಹಾಕ್ಕೊಂಡು ತಿನ್ನಿ..." ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪುಟ್ಟ ಹುಡುಗನೊಬ್ಬ ಮಠಕ್ಕೆ ಬಂದ ಭಕ್ತರಲ್ಲಿ ಈ ರೀತಿ ಮನವಿ ಮಾಡಿಕೊಳ್ಳುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.
ಎಷ್ಟೋ ಶಾಲೆಗಳು ಲಕ್ಷ ಲಕ್ಷ ಡೊನೇಶನ್ ತೆಗೆದುಕೊಂಡು ಶಿಕ್ಷಣ ನೀಡಬಹುದು, ಆದರೆ ಸಂಸ್ಕಾರ ನೀಡುವುದಕ್ಕೆ ಇಂಥ ಸೇವಾಮನೋಭಾವದ ಗುಡಿಯಂಥ ಶಾಲೆಯಲ್ಲಿ ಮಾತ್ರ ಸಾಧ್ಯ ಎಂಬುದಕ್ಕೆ ಈ ವಿಡಿಯೋಕ್ಕಿಂತ ಸಾಕ್ಷಿ ಬೇಕಿಲ್ಲ!

ಶ್ರೀಮಠದಲ್ಲಿ ನಿತ್ಯವೂ ಸಾವಿರಾರು ಜನರಿಗೆ ಉಚಿತ ಊಟ ಬಡಿಸುವ ಪರಿಪಾಠವನ್ನು ಮಠ ರೂಢಿಸಿಕೊಂಡು ಬಂದಿದೆ. ಈ ಜಗತ್ತಿನಲ್ಲಿ ಎಷ್ಟೋ ಜನ ಒಂದು ತುತ್ತಿಗಾಗಿ ಹಪಹಪಿಸುತ್ತಿರುವಾಗಲೂ ಅನ್ನದ ಮಹತ್ವ ಗೊತ್ತಿಲ್ಲದ ಹಲವರಿದ್ದಾರೆ. ಅಂಥವರಿಗೆ ಈ ಪುಟ್ಟ ಹುಡುಗನ ನಡೆ ಆದರ್ಶವೆಂದರೆ ತಪ್ಪಿಲ್ಲ.
ಅನ್ನ ಬಿಟ್ಟು ತಟ್ಟೆಯನ್ನು ತಂದು ಡಸ್ಟ್ ಬಿನ್ ಗೆ ಹಾಕಲು ಬಿಡದೆ ಅದನ್ನು ಖಾಲಿಮಾಡುವಂತೆ ಆತ ಒತ್ತಾಯಿಸಿದ್ದಾನೆ. ಆ ತಟ್ಟೆ ಖಾಲಿಯಾಗುವವರೆಗೂ ಎಸೆಯಲು ಬಿಡದೆ ಪಟ್ಟು ಹಿಡಿದಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನ್ನದ ಮಹತ್ವವನ್ನು ಸಾರಿ ಹೇಳಿದೆ.












Click it and Unblock the Notifications