ಸಿದ್ದಗಂಗಾ ಮಠದ ಬಳಿ ತುರ್ತಾಗಿ ಹತ್ತು ಹೆಲಿಪ್ಯಾಡ್ ನಿರ್ಮಾಣ
ತುಮಕೂರು, ಜ 17: ಸಿದ್ದಗಂಗಾ ಮಠದ ಆಸುಪಾಸಿನಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸುವ ಕಾರ್ಯ ಭರದಿಂದ ಸಾಗುತ್ತಿದೆ. ತುಮಕೂರು ನಗರದ ಹತ್ತಿರ ನಾಲ್ಕು ಜಾಗಗಳಲ್ಲಿ ಹೆಲಿಪ್ಯಾಡ್ ನಿರ್ಮಾಣಗೊಳ್ಳುತ್ತಿದೆ.
ನಡೆದಾಡುವ ದೇವರು, ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ನಿರೀಕ್ಷಿತ ಪ್ರಮಾಣದ ಚೇತರಿಕೆ ಕಾಣದೇ ಇರುವ ಹಿನ್ನಲೆಯಲ್ಲಿ, ಮಠದತ್ತ ಭಕ್ತರು, ವಿಐಪಿಗಳ ದಂಡೇ ಹರಿದು ಬರಲಾರಂಭಿಸಿದೆ.
ಚಿಕಿತ್ಸೆಗೆ ಶ್ರೀಗಳ ದೇಹ ನಿರೀಕ್ಷಿಸಿದಷ್ಟು ಸ್ಪಂದನೆ ನೀಡುತ್ತಿಲ್ಲ. ವೈದ್ಯಕೀಯವಾಗಿ ನಾವು ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಎಲ್ಲವನ್ನೂ ಕಾಲವೇ ನಿರ್ಧರಿಸಬೇಕು ಎಂದು ಅವರನ್ನು ನೋಡಿಕೊಳ್ಳುತ್ತಿರುವ ಬಿಜಿಎಸ್ ಆಸ್ಪತ್ರೆಯ ವೈದ್ಯರ ತಂಡ ಹತಾಶೆ ವ್ಯಕ್ತ ಪಡಿಸಿದೆ.

Z ಪ್ಲಸ್ ಸೆಕ್ಯೂರಿಟಿ ಇರುವ ಗಣ್ಯರು ಮಠದತ್ತ ಆಗಮಿಸುವ ಸಾಧ್ಯತೆಯಿರುವುದರಿಂದ, ಒಂದು ವೇಳೆ ಎಲ್ಲರೂ ಶ್ರೀಗಳನ್ನು ನೋಡಲು ಏಕಕಾಲದಲ್ಲಿ ಆಗಮಿಸಿದರೆ, ಯಾವುದೇ ಅನಾನುಕೂಲ ಆಗದೇ ಇರಲಿ ಎನ್ನುವ ಕಾರಣಕ್ಕಾಗಿ, ಮುಂಜಾಗ್ರತಾ ಕ್ರಮವಾಗಿ ಹತ್ತು ಹೆಲಿಪ್ಯಾಡ್ ನಿರ್ಮಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಪಂಡಿತನಹಳ್ಳಿ ಗೇಟ್ ಬಳಿ 3, ಮಹಾತ್ಮಗಾಂಧಿ ಸ್ಟೇಡಿಯಂ ಬಳಿ 1, ತುಮಕೂರು ವಿವಿ ಆವರಣದಲ್ಲಿ 4, ಎಸ್‍ಐಟಿ ಕಾಲೇಜಿನಲ್ಲಿ 2 ಹೀಗೆ ಒಟ್ಟು 10 ಹೆಲಿಪ್ಯಾಡ್ಗಳನ್ನ ನಿರ್ಮಾಣ ಮಾಡಲಾಗುತ್ತಿದೆ.












Click it and Unblock the Notifications