• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಯಾಗ್ರಾ ಓವರ್ ಡೋಸ್, ಯುವಕ ಸಾವು

By Mahesh
|

ತಿಪಟೂರು, ಆ.20 : ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ತಡಸೂರು ಗ್ರಾಮದ ಚೇತನ್ ಎಂಬ ಯುವಕ ದುರಂತ ಸಾವಿಗೀಡಾಗಿದ್ದಾನೆ. ತನ್ನ ಗೆಳತಿಯೊಡನೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಸಾವನ್ನಪ್ಪಿದ್ದಾನೆ. ಅತಿಯಾಗಿ ಕಾಮೋತ್ತೇಜಕ ಮಾತ್ರೆ ಸೇವಿಸಿದ ಕಾರಣ ಚೇತನ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಬೇರೆ ಯಾವುದೇ ಚಟ ಇಲ್ಲದ 24 ವರ್ಷ ವಯಸ್ಸಿನ ಚೇತನ್ ಕುಮಾರ್ ಗೆ ನಿರಂತರ ಸೆಕ್ಸ್ ಮಾಡುವ ಅಭ್ಯಾಸ ಬೆಳೆದುಬಿಟ್ಟಿತ್ತು. ಇನ್ನೂ ಅವಿವಾಹಿತನಾಗಿದ್ದ ಚೇತನ್ ನ ಕೋರಿಕೆಯನ್ನು ಪುರಸ್ಕರಿಸಲು ಆತನಿಗೊಬ್ಬಳು ಗೆಳತಿ ಇದ್ದಳು.

ಶಿವಲಿಂಗಯ್ಯ ಹಾಗೂ ಗೌರಮ್ಮ ದಂಪತಿಯ ಪುತ್ರ ಚೇತನ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ. ಆತನ ಬಗ್ಗೆ ಎಲ್ಲರೂ ಒಳ್ಳೆ ಮಾತನಾಡುತ್ತಿದ್ದರು. ಆದರೆ, ಈಗ ಅತಿಯಾದ ಕಾಮದಾಸೆಯಿಂದ ಸಾವನ್ನಪ್ಪಿದ್ದಲ್ಲದೆ ಶಿವಲಿಂಗಯ್ಯ ದಂಪತಿಗಳು ಊರಿನಲ್ಲಿ ತಲೆ ಎತ್ತಿಕೊಂಡು ಓಡಾಡಲು ಆಗದ ಪರಿಸ್ಥಿತಿ ತಂದೊಡ್ಡಿದ್ದಾನೆ.

ಪೊಲೀಸರ ಪ್ರಕಾರ, ಚೇತನ್ ಗೆ ಒಬ್ಬ ಗೆಳತಿ ಇದ್ದಳು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ಲೈಂಗಿಕ ಕ್ರಿಯೆಗೆ ಆಹ್ವಾನ ನೀಡಿದ್ದಾನೆ. ಅಕೆ ಕೂಡಾ ಒಪ್ಪಿದ್ದಾಳೆ. ಇಬ್ಬರಿಗೂ ನೆಲೆ ಒದಗಿಸಲು ಪ್ರಕಾಶ್ ಎಂಬ ಸ್ನೇಹಿತ ಒಪ್ಪಿಕೊಂಡಿದ್ದಾನೆ. ಊರಿನ ಶಾಲೆ ಬಳಿ ಇದ್ದ ಸ್ನೇಹಿತನ ರೂಮಿನಲ್ಲಿ ಆಗಾಗ ಇಬ್ಬರು ಸಂಧಿಸುತ್ತಿರುತ್ತಾರೆ.

ಆತನಿಗೆ ಸಮಸ್ಯೆ ಇತ್ತು: ಲೈಂಗಿಕವಾಗಿ ನನ್ನ ಹುಡುಗಿಗೆ ತೃಪ್ತಿ ನೀಡಲಾಗುತ್ತಿಲ್ಲ ಎಂಬ ಕೊರಗು ಚೇತನ್ ನನ್ನು ಕಾಡುತ್ತಿತ್ತು. ಚೇತನ್ ಗೆ ಶೀಘ್ರಸ್ಖಲನ ಸಮಸ್ಯೆ ಇತ್ತು ಎನ್ನಲಾಗಿದೆ. ಹೀಗಾಗಿ ಗೆಳೆಯರ ಸಲಹೆ ಮೇರೆಗೆ ಕಾಮೋತ್ತೇಜಕ ಮಾತ್ರೆ ವಯಾಗ್ರಾ ತೆಗೆದುಕೊಳ್ಳಲು ನಿರ್ಧರಿಸಿದ್ದಾನೆ.

ಆದರೆ, ಸೂಕ್ತ ಮಾರ್ಗದರ್ಶನವಿಲ್ಲದೆ ಅತಿಯಾದ ಮಾತ್ರೆ ಸೇವಿಸಿ ಕಾಮದಾಟಕ್ಕಿಳಿದಿದ್ದಾನೆ. ಆಗಸ್ಟ್ 13 ರಂದು ಸ್ನೇಹಿತ ರೂಮಿನಲ್ಲಿ ಗೆಳತಿಯೊಂದಿಗೆ ಸುಮಾರು 45 ನಿಮಿಷಗಳ ಕಾಲ ಲೈಂಗಿಕ ಸುಖ ಅನುಭವಿಸಿದ್ದಾನೆ.

ಆದರೆ, ಈತನ ಕಾಮೋದ್ರೇಕತೆ ತಡೆದುಕೊಳ್ಳಲಾಗದೆ ಪ್ರತಿರೋಧ ಒಡ್ಡಿದ್ದಾಳೆ. ಸಡನ್ ಆಗಿ ಬಂದ ರೆಡ್ ಸಿಗ್ನಲ್ ಕಂಡು ಹೌಹಾರಿದ ಚೇತನ್ ತಕ್ಷಣವೇ ಕ್ರಿಯೆ ನಿಲ್ಲಿಸಿದ್ದಾನೆ. ಅದರೆ, ಉಸಿರಾಟದ ತೊಂದರೆ ಅನುಭವಿಸಿದ ಚೇತನ್ ಕೆಲ ನಿಮಿಷದಲ್ಲೇ ಉಸಿರು ನಿಲ್ಲಿಸಿದ್ದಾನೆ. ಗಾಬರಿಗೊಂಡ ಆತನ ಗೆಳತಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾಳೆ.

ಘಟನಾ ಸ್ಥಳದಲ್ಲಿ ಯುವಕ ಉಪಯೋಗಿಸಿದ ಕಾಂಡೋಮ್ ಮತ್ತು ವಯಾಗ್ರ ಮಾತ್ರೆ ಕವರ್ ಲಭ್ಯವಾಗಿದೆ. ತಿಪಟೂರು ನಗರ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ ಎಂದು ಎಎಸ್​ಪಿ ಲಕ್ಷ್ಮಣ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 24 youth from Tadasur village in Tiptur taluk Tumkur district lost his life after consuming high dose of Viagra.Chetan was unmarried and used to have sex with his girlfriend, He had allegedly consumed over dose of Viagra and died while having inter course.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more