ತುಮಕೂರಿನಲ್ಲಿ ಜಿಂಕೆ ಪ್ರಾಣ ಉಳಿಸಲು ಹೋಗಿ ಶಿಕ್ಷಕ ಸಾವು
ತುಮಕೂರು, ಫೆಬ್ರವರಿ 11: ದ್ವಿಚಕ್ರವಾಹನದಲ್ಲಿ ಪಯಣಿಸುತ್ತಿದ್ದ ಸಂದರ್ಭ ದಾರಿಯಲ್ಲಿ ಅಡ್ಡ ಬಂದ ಜಿಂಕೆಯ ಪ್ರಾಣ ಉಳಿಸಲು ಹೋಗಿ ಶಿಕ್ಷಕರೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ತುಮಕೂರಿನ ಕ್ಯಾದಿಗುಂಟೆ ಬಳಿ ನಡೆದಿದೆ.
ನಾದೂರು ಗ್ರಾಮದ ರಾಜಣ್ಣ ಘಟನೆಯಲ್ಲಿ ಮೃತಪಟ್ಟವರು. ಬರಗೂರು ಗಂಗಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರು ಭಾನುವಾರ ರಾತ್ರಿ ಕಾರೇಹಳ್ಳಿ ಗ್ರಾಮದಿಂದ ನಾದೂರಿಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ದಾರಿಗೆ ಏಕಾಏಕಿ ಜಿಂಕೆಯೊಂದು ಅಡ್ಡಬಂದ ಪರಿಣಾಮ ಜಿಂಕೆಯನ್ನು ಪಾರು ಮಾಡಲು ಹೋಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications