• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದ ಸೊಗಡು ಶಿವಣ್ಣ

By ಕುಮಾರಸ್ವಾಮಿ
|

ತುಮಕೂರು, ಮೇ 28: ಈ ಮೈತ್ರಿ ಸರ್ಕಾರ ವಿಧಾನ ಸಭೆಯನ್ನು ಮಾಯಾ ಬಜಾರ್ ನಂತೆ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿ ಕಾರಿದ್ದಾರೆ.

ಬಸವರಾಜು ಹಾಗೂ ಸೊಗಡು ಶಿವಣ್ಣ ಮಧ್ಯೆ ಸಂಧಾನ ಮಾಡಿದರು ಬಿಎಸ್ ವೈ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೈತ್ರಿ ಸರ್ಕಾರ, ಯಾವುದೋ ಒಂದು ದೊಡ್ಡ ಸಹಕಾರಿ ಸಂಘದ ರೀತಿ ಆಡಳಿತ ಮಾಡುತ್ತಿದೆ ಎಂದು ದೂರಿದರು. ಸಿದ್ದರಾಮಯ್ಯ ತಾನು ಅಹಿಂದ ಎಂದು ಹೇಳಿಕೊಳ್ಳುತ್ತಾರೆ. ಹೀಗೆ ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ ಎಂದು ಗುಡುಗಿದರು.

ಅಸೆಂಬ್ಲಿಯಲ್ಲಿ ಪೈಲ್ವಾನ್ ನಂತೆ ಸಿದ್ದರಾಮಯ್ಯ ತೋಳು ತೊಡೆ ತಟ್ಟಿಕೊಳ್ಳುತ್ತಾರೆ. ನನ್ನ ಕಣ್ಣಿಗೆ ಸಿದ್ದರಾಮಯ್ಯ, ಕೃಷ್ಣ ಗಾರುಡಿಗ ನಾಟಕದ ನಕಲಿ ಶಾಮನಂತೆ ಕಾಣುತ್ತಾರೆ ಎಂದು ವ್ಯಂಗ್ಯ ಮಾಡಿದರು. ತೊಟ್ಟಿಲನ್ನೂ ತೂಗಿ ಮಗುವನ್ನೂ ಚಿವುಟುವ ಕೆಲಸವನ್ನು ಸಿದ್ದರಾಮಯ್ಯ ಮೈತ್ರಿ ಸರ್ಕಾರದಲ್ಲಿ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.

English summary
former minister sogadu shivanna reacts to the government attitude, he said that the alliance government has made vidhanasabha as Maya Bazaar. This government is governing something like a big cooperative society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X