ಶಿರಾ ಉಪ ಚುನಾವಣೆ ಫಲಿತಾಂಶ; ಪಕ್ಷೇತರ ಅಭ್ಯರ್ಥಿ ಪ್ರತಿಭಟನೆ
ತುಮಕೂರು, ನವೆಂಬರ್ 10: ತುಮಕೂರು ಜಿಲ್ಲೆಯ sira ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಪಕ್ಷೇತರ ಅಭ್ಯರ್ಥಿಯೊಬ್ಬರು ಮತ ಎಣಿಕೆ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ.
ಮಂಗಳವಾರ ತುಮಕೂರು ನಗರದ ಪಾಲಿಟೆಕ್ನಕ್ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರದ ಮುಂದೆ ಪಕ್ಷೇತರ ಅಭ್ಯರ್ಥಿ ಆಂಬ್ರೋಸ್ ಡಿ. ಮೆಲ್ಲೊ ಪ್ರತಿಭಟನೆ ನಡೆಸಿದರು. ತಮ್ಮನ್ನು ಮತ ಎಣಿಕೆ ಕೇಂದ್ರಕ್ಕೆ ಬಿಡುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ತಿಪ್ಪೇಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಯನ್ನು ಮತ ಕೇಂದ್ರಕ್ಕೆ ಕಳುಹಿಸಿಕೊಟ್ಟರು. ಇದರಿಂದಾಗಿ ಪರಿಸ್ಥಿತಿ ತಿಳಿಗೊಂಡಿತು. ಶಿರಾದಲ್ಲಿ ಬಿಜೆಪಿಯ ಡಾ. ರಾಜೇಶ್ ಗೌಡ ಮುನ್ನಡೆ ಸಾಧಿಸಿದ್ದಾರೆ.

ನೀರು ಮಾರಾಟ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮೌನ ಪ್ರತಿಭಟನೆ ನಡೆಸುವ ಆಂಬ್ರೋಸ್ ಡಿ. ಮೆಲ್ಲೊ ಜನರಿಗೆ ಚಿರಪರಿಚಿತರು. ಅವರು ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣಕ್ಕಿಳಿದಿದ್ದಾರೆ.
11.30ರ ಮಾಹಿತಿಯಂತೆ ಶಿರಾದಲ್ಲಿ ಬಿಜೆಪಿಯ ಡಾ. ರಾಜೇಶ್ ಗೌಡ 21,401 ಮತ. ಕಾಂಗ್ರೆಸ್‌ನ ಟಿ. ಬಿ. ಜಯಚಂದ್ರ 18,076 ಮತ ಮತ್ತು ಜೆಡಿಎಸ್‌ನ ಅಮ್ಮಾಜಮ್ಮ 11,648 ಮತಗಳನ್ನು ಪಡೆದಿದ್ದಾರೆ.
ಶಿರಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಆದರೆ, 2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು.












Click it and Unblock the Notifications