ಚೀನಾದಲ್ಲಿ ಸಿಲುಕಿರುವ ಸಿರಾ ವೈದ್ಯಕೀಯ ವಿದ್ಯಾರ್ಥಿ; ಪೋಷಕರ ಆತಂಕ

ಸಿರಾ, ಜನವರಿ 31: ಚೀನಾದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಚೀನಾದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಕುರಿತು ಆತಂಕ ವ್ಯಕ್ತಗೊಂಡಿದೆ. ಶಿರಾ ಮೂಲದ ವೈದ್ಯಕೀಯ ವಿದ್ಯಾರ್ಥಿ ಶಾಂತನ್ ಚೀನಾ ದೇಶದ ವುಹಾನ್ ನಲ್ಲಿ ನೆಲೆಸಿದ್ದು, ಪೋಷಕರು ಆತಂಕಗೊಂಡಿದ್ದಾರೆ.

ನಗರದ ಹನುಮಾನ್ ಮೆಡಿಕಲ್ಸ್ ಸ್ಟೋರ್ ಮಾಲೀಕ ಸನತ್ ಅವರ ಪುತ್ರ ಶಾಂತನ್ ಚೀನಾ ವುಹಾನ್ ನಗರದ ಝಿಂಗಾ ವಿಶ್ವವಿದ್ಯಾಲಯದಲ್ಲಿ 3ನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದು ಶಾಂತನ್ ಪೋಷಕರ ಆತಂಕವನ್ನು ಹೆಚ್ಚಿಸಿದೆ.

Sira Based Medical Student Stuck In China

"ನನ್ನ ಮಗ ವುಹಾನ್ ನಗರದ ಸ್ಟೂಡೆಂಟ್ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುತ್ತಿದ್ದಾನೆ. ಕಟ್ಟಡದಿಂದ ಹೊರ ಬರದಂತೆ ಸ್ಥಳೀಯ ಆಡಳಿತ ಅವರಿಗೆ ಸೂಚನೆ ನೀಡಿದೆ. ವುಹಾನ್ ನಗರದ ಒಳಗೆ ಹೋಗಲು ಮತ್ತು ಹೊರ ಬರಲು ಯಾರನ್ನೂ ಬಿಡುತ್ತಿಲ್ಲ. ಊಟ ಮತ್ತು ತಿಂಡಿಗೆ ಸಹ ತೊಂದರೆಯಾಗಿದ್ದು ಭಾರತ ಸರ್ಕಾರ ವಿಶೇಷ ವಿಮಾನ ವ್ಯವಸ್ಥೆ ಮಾಡಿದರೂ ಚೀನಾ ಸರ್ಕಾರ ಅವರನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಿಲ್ಲ. ಚೀನಾದಲ್ಲಿರುವ ನನ್ನ ಮಗನನ್ನು ಭಾರತಕ್ಕೆ ಕರೆ ತರಲು ಕೇಂದ್ರ ಸರ್ಕಾರ ಮುಂದಾಗಬೇಕು" ಎಂದು ಕೇಳಿಕೊಂಡಿದ್ದಾರೆ ಸನತ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+