Get Updates
Get notified of breaking news, exclusive insights, and must-see stories!

ಆಸ್ಪತ್ರೆಯಿಂದ ಸಿದ್ದಗಂಗಾ ಮಠಕ್ಕೆ ಹಿಂತಿರುಗಿದ ನಡೆದಾಡುವ ದೇವರು

ತುಮಕೂರು, ಜನವರಿ 16: ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳನ್ನು ಅವರ ಅಪೇಕ್ಷೆಯಂತೆ ಸಸಿದ್ದಗಂಗಾ ಆಸ್ಪತ್ರೆಯಿಂದ ಮಠಕ್ಕೆ ಕರೆದೊಯ್ಯಲಾಗಿದೆ.

ಬುಧವಾರ ಬೆಳಗಿನ ಜಾವ 3.45ರ ಸುಮಾರಿಗೆ ಸಿದ್ದಗಂಗಾ ಶ್ರೀಗಳನ್ನು ಆಂಬುಲೆನ್ಸ್ ಮೂಲಕ ಮಠಕ್ಕೆ ಕರೆತರಲಾಗಿದೆ. ಮಂಗಳವಾರ ರಾತ್ರಿ ಸ್ವಾಮೀಜಿ ತಾವು ಮಠಕ್ಕೆ ತೆರಳ ಬೇಕು ಎಂದು ತಿಳಿಸಿದ್ದರು, ಸಿದ್ದಗಂಗಾ ಶ್ರೀಗಳನ್ನು ಆಸ್ಪತ್ರೆಯಿಂದ ಮಠಕ್ಕೆ ಕರೆತರುವ ಕುರಿತು ಸಭೆ ನಡೆಸಲಾಗಿತ್ತು.

ಶ್ರೀಗಳು ಮಠಕ್ಕೆ ತೆರಳುವ ಕುರಿತು ಚಡಪಡಿಸಿರುವ ಹಿನ್ನೆಲೆಯಲ್ಲಿ ಅವರನ್ನು ಇಂದು ಬೆಳಗಿನ ಜಾವ ಮಠಕ್ಕೆ ಕರೆತರಲಾಗಿದೆ. ಅವರಿಗೆ ತಗುಲಿದ್ದ ಸೋಂಕು ಕಡಿಮೆಯಾಗಿದೆ. ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆಯನ್ನು ಮಠದಲ್ಲೂ ಮುಂದುವರೆಸಲಾಗುತ್ತದೆ.

Siddaganga Shree shifted to mutt

ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ಕುರಿತು ಭಕ್ತರು ಆತಂಕಗೊಳ್ಳುವ ಅಗತ್ಯವಿಲ್ಲ, ಅವರಿಗೆ ಶಕ್ತಿ ಬರಬೇಕಿದೆ, ಅವರ ಆರೋಗ್ಯ ಸ್ಥಿರವಾಗಿದೆ ಯಾವುದೇ ಅಪಾಯವಿಲ್ಲ ಎಂದು ಶ್ರೀಗಳ ವೈದ್ಯರಾದ ಡಾ. ಪರಮೇಶ್ ತಿಳಿಸಿದ್ದಾರೆ.

111 ವರ್ಷದವರಾದ ಶ್ರೀಗಳ ಆರೋಗ್ಯದ ದೃಷ್ಟಿಯಿಂದ ಅವರ ಭೇಟಿಗೆ ಯಾರೂ ಬರಬಾರದೆಂದು ಕೋರಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+