ಚೆನ್ನೈ ಆಸ್ಪತ್ರೆ ತಲುಪಿದ ಸಿದ್ದಗಂಗಾ ಶ್ರೀ
ತುಮಕೂರು, ಡಿಸೆಂಬರ್ 07: ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಸ್ವಾಮೀಜಿ ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದಿಂದ ಏರ್ ಅಂಬುಲೆನ್ಸ್ ಮೂಲಕ ಅವರನ್ನು ಚೆನ್ನೈಗೆ ಕರೆದೊಯ್ಯಲಾಗುತ್ತಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿರುವ 111 ವರ್ಷ ವಯಸ್ಸಿನ ಸ್ವಾಮೀಜಿ ಅವರ ಹೃದಯದಲ್ಲಿ ಅಳವಡಿಸಲಾದ 11 ಸ್ಟೆಂಟ್ ಗಳನ್ನು ಬದಲಿಸುವ ಅಗತ್ಯವಿದೆ. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಚೆನ್ನೈನ ಪ್ರತಿಷ್ಠಿತ ರೇಲಾ ಇನ್‌ಸ್ಟಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್ ಗೆ ಕರೆದೊಯ್ಯಲಾಗುತ್ತಿದೆ.

ಶತಾಯುಷಿ, ನಡೆದಾಡುವ ದೇವರು ಎಂದೇ ಖ್ಯಾತಿಗಳಿಸಿದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಸಾವಿರಾರು ಭಕ್ತರು ತುಮಕೂರಿನ ಮಠದ ಎದುರು ಜಮಾಯಿಸಿದ್ದಾರೆ. ಅವರ ಆರೋಗ್ಯಕ್ಕೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.
ಆಸ್ಪತ್ರೆಯಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು, ಇಷ್ಟಲಿಂಗ ಪೂಜೆ ಮಾಡಿದ ಸಿದ್ಧಗಂಗಾ ಶ್ರೀ
ಚೆನ್ನೈ ಆಸ್ಪತ್ರೆಗೆ ಆಗಮಿಸಿದ ಶಿವಕುಮಾರ ಸ್ವಾಮೀಜಿ ಅವರನ್ನು ವ್ಹೀಲ್ ಚೇರ್ ನಲ್ಲಿ ಕೂರಿಸಿಕೊಂದು ಹೋಗಲು ಸಿಬ್ಬಂದಿ ಮುಂದಾದಾಗ, ನಿರಾಕರಿಸಿದ ಸ್ವಾಮೀಜಿ ನಡೆದೇ ಸಾಗಿ ಅಚ್ಚರಿ ಮೂಡಿಸಿದರು.
ಕೆಲಹೊತ್ತಿನಲ್ಲೇ ಶ್ರೀಗಳು ಚೆನ್ನೈ ಗೆ ಪ್ರಯಾಣಿಸಲಿದ್ದು, ಚೆನ್ನೈನ ನುಂಗಂಬಾಕಂ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.
ದೆಹಲಿಯಿಂದ ಆಗಮಿಸಲಿರುವ ಏರ್ ಅಂಬುಲೆನ್ಸ್. ಇದರಲ್ಲಿ ಐಸಿಯು ನಲ್ಲಿರುವ ಎಲ್ಲಾ ಸೌಲಭ್ಯವೂ ಲಭ್ಯ. ತಜ್ಞ ವೈದ್ಯರೂ ಜೊತೆಗಿರುತ್ತಾರೆ.

ಶಿವಕುಮಾರ ಸ್ವಾಮೀಜಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ ಎಎಲ್ ವಿಮಾನ ನಿಲ್ದಾಣದ ಸುತ್ತಮುತ್ತ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ.

ಇದಕ್ಕೂ ಮುನ್ನವೂ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ಮೊಹಮದ್ ರೇಲಾ. 'ಈಗ ಸ್ಟೆಂಟ್ ಅಳವಡಿಸೋದು ಕಷ್ಟ. ಆದರೆ ಬದಲಿ ವ್ಯವಸ್ಥೆಯನ್ನೇನಾದರೂ ಮಾಡಬಹುದಾ ಎಂದು ಯೋಚಿಸಿ, ಗುಣಮುಖ ಮಾಡೋಣ' ಎಂಬ ಭರವಸೆ ನೀಡಿದ್ದಾರೆ.
ಚೆನ್ನೈಯಲ್ಲಿ ಪ್ರಸಿದ್ಧ ವೈದ್ಯ ಮೊಹಮದ್ ರೇಲಾರವರಿಂದ ಚಿಕಿತ್ಸೆ ಕೊಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.












Click it and Unblock the Notifications