ಶ್ರೀಗಳ ಸ್ಥಿತಿ ಚಿಂತಾಜನಕ, ಆದರೆ ಪ್ರಯತ್ನ ಕೈಬಿಟ್ಟಿಲ್ಲ: ವೈದ್ಯ ಪರಮೇಶ್

ತುಮಕೂರು, ಜನವರಿ 21: ಸಿದ್ದಗಂಗಾ ಶ್ರೀಗಳ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿದೆ ಆದರೆ ನಾವು ಪ್ರಯತ್ನ ಕೈಬಿಟ್ಟಿಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಪರಮೇಶ್ವರ್ ಹೇಳಿದರು.

ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಪ್ರೊಟೀನ್ ಅಂಶ ಪೂರ್ಣವಾಗಿ ಕಡಿಮೆ ಆಗಿದೆ ಇದು ಆತಂಕಕಾರಿ ಎಂದು ಅವರು ಹೇಳಿದರು.

ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್) ಅಳವಡಿಸಲಾಗಿದೆ. ಅಲ್ಬುಮಿನ್ ಉತ್ಪಾದನೆ ಪೂರ್ಣವಾಗಿ ನಿಂತಿದೆ. ಆದರೆ ನಾವು ಪ್ರಯತ್ನ ಕೈಬಿಟ್ಟಿಲ್ಲ. ನಮ್ಮ ತಂಡ ಚಿಕಿತ್ಸೆಯಲ್ಲಿ ನಿರತವಾಗಿದೆ ಎಂದು ಅವರು ಹೇಳಿದರು.

Siddaganga Seers health condition is critical but we did not give up: Ravindra

ಶ್ರೀಗಳ ರಕ್ತದೊತ್ತಡ, ಶ್ವಾಸಕೋಶದ ಕಾರ್ಯದಲ್ಲಿ ವ್ಯತ್ಯಾಸವಾಗಿದೆ. ನಾವು ಪೂರ್ಣ ಶ್ರಮವಹಿಸಿ ಚಿಕಿತ್ಸೆ ನೀಡುತ್ತಿದ್ದೇವೆ. ಆದರೆ ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ವೈದ್ಯ ಪರಮೇಶ್ವರ್ ಹತಾಶೆ ವ್ಯಕ್ತಪಡಿಸಿದರು.

ನಮ್ಮ ಎಂಟು ಜನರ ವೈದ್ಯರ ತಂಡದೊಂದಿಗೆ ಬಿಜಿಎಸ್‌ನ ಹಲವು ತಜ್ಞ ವೈದ್ಯರು ಕೈಜೋಡಿಸಿದ್ದು, ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಪರಮೇಶ್ವರ್ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+