ಕೋಟ್ಯಂತರ ಭಕ್ತರ ತೊರೆದು ಶಿವನೆಡೆಗೆ ನಡೆದ 'ನಡೆದಾಡುವ ದೇವರು'
Recommended Video

Siddaganga Swamiji : ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆ ಕರ್ನಾಟಕದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ
ತುಮಕೂರು, ಜನವರಿ 21: ನಡೆದಾಡುವ ದೇವರೂ ಎಂದೇ ಭಕ್ತರ ಮನೆ-ಮನದಲ್ಲಿ ಹೆಸರಾದ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ(111) ಇಂದು ಬೆಳಿಗ್ಗೆ 11:44 ಕ್ಕೆ ಲಿಂಗೈಕ್ಯರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳು ಚೆನ್ನೈ ಆಸ್ಪತ್ರೆಯೊಂದರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಠದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳ ಆರೋಗ್ಯದಲ್ಲಿ ಕಳೆದ ವಾರವೆಲ್ಲ ಕೊಂಚ ಚೇತರಿಕೆ ಕಂಡುಬಂದಿತ್ತು. ಆದರೆ ಭಾನುವಾರ ರಾತ್ರಿ ರಕ್ತದೊತ್ತಡ ಏರುಪೇರಾದ ಕಾರಣ ಮತ್ತೆ ಆರೋಗ್ಯ ಗಂಭೀರವಾಗಿತ್ತು.

ಆದರೆ ಬೆಳಗ್ಗೆ ಅವರ ದೇಹ ಚಿಕಿತ್ಸೆಗೆ ಸ್ಪಂದಿಸದ ಕಾರಣ ಶತಾಯುಷಿ ಸಂತ ಶಿವಕುಮಾರ ಸ್ವಾಮೀಜಿ(ಏಪ್ರಿಲ್ 1, 1907-ಜನವರಿ 21, 2019) ಅವರು ಇಹಲೋಕ ತ್ಯಜಿಸಿದ್ದಾರೆ. ಶ್ರೀಗಳ ಅಂತಿಮ ಯಾತ್ರೆಯ ಕುರಿತ ಅಪ್ಡೇಟ್ಸ್ ಇಲ್ಲಿದೆ.












Click it and Unblock the Notifications