ವೈದ್ಯರ ಸೂಚನೆ ನಿರ್ಲಕ್ಷಿಸಿ ಭಕ್ತರಿಗೆ ದರ್ಶನ ನೀಡುತ್ತಿರುವ ಶ್ರೀಗಳು
ತುಮಕೂರು, ಜನವರಿ 28: ಮೊನ್ನೆಯಷ್ಟೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ನಿನ್ನೆ ಮಠಕ್ಕೆ ವಾಪಾಸ್ಸಾಗಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಜಿಗಳು ವೈದ್ಯರ ಸೂಚನೆ ನಿರ್ಲಕ್ಷಿಸಿ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.
ಆರೋಗ್ಯ ಸರಿ ಇಲ್ಲದ ಕಾರಣ ಮೊನ್ನೆಯಷ್ಟೆ ಬಿಜಿಎಸ್ ಆಸ್ಪತ್ರೆಗೆ ಸಿದ್ದಗಂಗಾ ಶ್ರೀಗಳು ಸೇರಿದ್ದರು, ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ಸ್ಟಂಟ್ ಅಳವಡಿಸಲಾಗಿತ್ತು. ಹಾಗಾಗಿ ವಿಶ್ರಾಂತಿ ಮಾಡಲು ವೈದ್ಯರು ಶ್ರೀಗಳಿಗೆ ಸೂಚಿಸಿದ್ದರು.
ವೈದ್ಯರ ಸೂಚನೆ ದಿಕ್ಕರಿಸಿರುವ ಶ್ರೀಗಳು ಹಠತೊಟ್ಟು ಮಾಮೂಲಿನಂತೆ ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ದಲ್ಲದೆ ಭಕ್ತಾಧಿಗಳಿಗೆ ದರ್ಶನ ನೀಡಿದ್ದಾರೆ. ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಹಾಗೂ ವೈದ್ಯರು ವಿಶ್ರಾಂತಿಯ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ ಸ್ವಾಮೀಜಿ ಒಪ್ಪಲಿಲ್ಲ ಎನ್ನಲಾಗಿದೆ.

ಮಠದ ಕಿರಿಯ ಸ್ವಾಮಿಗಳು, ಶ್ರೀಗಳ ಸೇವಕರು ಬಲವಂತದ ಹೊರತಾಗಿಯೂ ಹಠ ಮಾಡಿ ಮಾಮೂಲಿನಂತೆ ಮಂಚದ ಮೇಲೆ ಕೂತ ಭಕ್ತಾಧಿಗಳನ್ನು ಭೇಟಿ ಮಾಡಿ ಆಶೀರ್ವಾದ ನೀಡುತ್ತಿದ್ದಾರೆ.












Click it and Unblock the Notifications