• search
 • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಲಕ್ಷಣವಿದ್ದರೂ, ತುಮಕೂರು ಜಿಲ್ಲಾಡಳಿತ ಬೇಜವಾಬ್ದಾರಿ

|
Google Oneindia Kannada News

ತುಮಕೂರು, ಜುಲೈ 2: ಕುಣಿಗಲ್‌ನಲ್ಲಿ ಜಿಲ್ಲಾಡಳಿತದ ಮೇಲೆ ಜನರು ಗಂಭೀರ ಆರೋಪ ಮಾಡಿದ್ದಾರೆ. ಕೊರೊನಾ ಲಕ್ಷಣವಿದ್ದರೂ ಕ್ವಾರಂಟೈನ್ ಮಾಡದೇ ಬೇಕಾಬಿಟ್ಟಿ ವರ್ತನೆಯ ಆರೋಪ ಕೇಳಿ ಬಂದಿದೆ.

   Bangalore No Longer Safe:ಬೆಂಗಳೂರಿನಲ್ಲಿ ಕೊರೊನಾ ಉಗ್ರ ತಾಂಡವ: ಭಯ ಹುಟ್ಟಿಸುವ ಅಂಕಿಅಂಶ! | Oneindia Kannada

   ಕುಣಿಗಲ್ ತಾಲ್ಲೂಕಿನ ತಿಮ್ಮೇಗೌಡನಪಾಳ್ಯದಲ್ಲಿ ಈ ಘಟನೆ ನಡೆದಿದೆ. ಜೂನ್ 25 ರಂದು ತಿಮ್ಮೇಗೌಡನಪಾಳ್ಯದ ಮಹಿಳೆ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಿಂದ ಗ್ರಾಮಕ್ಕೆ ವಾಪಸ್ ಬಂದ ಬಳಿಕ ಆಕೆಗೆ ಜ್ವರ ಕಾಣಿಸಿಕೊಂಡಿದೆ.

   ಬೆಳಗಾವಿ; ಕ್ವಾರಂಟೈನ್ ನಿಯಮ ಮುರಿದು ತಿರುಗಾಡಿದ 573 ಜನರ ವಿರುದ್ಧ ಕೇಸ್ಬೆಳಗಾವಿ; ಕ್ವಾರಂಟೈನ್ ನಿಯಮ ಮುರಿದು ತಿರುಗಾಡಿದ 573 ಜನರ ವಿರುದ್ಧ ಕೇಸ್

   ಕೊರೊನಾ ಲಕ್ಷಣ ಇದ್ದರೂ ಕೋವಿಡ್ ಟೆಸ್ಟ್ ಮಾಡದೇ ಜಿಲ್ಲಾಡಳಿತ ಬೇಜವಾಬ್ದಾರಿ ವರ್ತನೆ ತೋರಿದೆ ಎನ್ನುವುದು ಸ್ಥಳಿಯರ ಆರೋಪವಾಗಿದೆ. ಅಲ್ಲದೆ, ಜೂನ್ 30 ರಂದು ಮಹಿಳೆಯ ಪತಿ ಉಸಿರಾಟದ ಸಮಸ್ಯೆಯಿಂದ ಸಾವನಪ್ಪಿದ್ದಾರೆ.

   ಸಂಬಂಧಿಕರು, ಗ್ರಾಮಸ್ಥರು ಸೇರಿ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಕೊನೆ ಘಳಿಗೆಯಲ್ಲಿ ಅಧಿಕಾರಿಗಳಿಂದ ಮೃತನ ಹಾಗು ಪತ್ನಿಯ ಸ್ವ್ಯಾಬ್ ಸಂಗ್ರಹ ಮಾಡಲಾಗಿದೆ. ಕೊನೆ ಘಳಿಗೆಯಲ್ಲಿ ಬಂದು ನಾಲ್ವರಿಗೆ ಪಿಪಿಇ ಕಿಟ್ ನೀಡಿ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಲಾಗಿದೆ. .

   ಜುಲೈ 1 ರಂದು ಆಕೆಯ ಸ್ಯ್ವಾಬ್ ವರದಿಯಲ್ಲಿ ಕೊರೊನಾ ದೃಢವಾಗಿದೆ. ಹೀಗಾಗಿ, ಇಡೀ ಗ್ರಾಮಸ್ಥರಿಗೆ ಇದೀಗ ಕೊರೊನಾ ಆತಂಕ ಹೆಚ್ಚಾಗಿದೆ. ಮೃತ ವ್ಯಕ್ತಿಗೂ ಕೊರೊನಾ ಸೋಂಕು‌ ಇರುವ ಶಂಕೆ ವ್ಯಕ್ತವಾಗಿದೆ. ಮಹಿಳೆಗೆ ಜ್ವರ ಬಂದ ದಿನವೇ ತಾಲ್ಲೂಕಾಡಳಿತಕ್ಕೆ ಮಾಹಿತಿ‌ ನೀಡಲಾಗಿತ್ತು ಆದರೆ ಯಾವುದೇ ಪ್ರಯೋಜನ ಆಗಲಿಲ್ಲ.

   English summary
   Kunigal people allegation on district administration for not quarantining people who have coronavirus symptoms.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X