ತುಮಕೂರು : ಎಚ್‌ಎಎಲ್ ಹೆಲಿಕಾಪ್ಟರ್ ಘಟಕದ ವಿಶೇಷತೆಗಳು
ತುಮಕೂರು, ಡಿಸೆಂಬರ್ 17 : ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ಲಘು ಹೆಲಿಕಾಪ್ಟರ್ ಘಟಕವನ್ನು ತುಮಕೂರಿನಲ್ಲಿ ಸ್ಥಾಪನೆ ಮಾಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 3ರ ಭಾನುವಾರ ಘಟಕ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಈ ಘಟಕ ವಾರ್ಷಿಕ 2 ಸಾವಿರ ಕೋಟಿ ವಹಿವಾಟು ನಡೆಸಲಿದ್ದು, 3 ರಿಂದ 4 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಯುಪಿಎ ಸರ್ಕಾರದ 2ನೇ ಅವಧಿಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಎಚ್‌ಎಎಲ್ ಲಘು ಹೆಲಿಕಾಪ್ಟರ್ ಘಟಕವನ್ನು ನಿರ್ಮಾಣ ಮಾಡಲು ಒಪ್ಪಿಗೆ ದೊರಕಿತ್ತು. ಘಟಕ ಸ್ಥಾಪನೆಗೆ ಬೀದರ್ ಮತ್ತು ತುಮಕೂರಿನ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ತುಮಕೂರು ಆಯ್ಕೆಯಾಗಿತ್ತು. [ಗುಬ್ಬಿಯಲ್ಲಿ ಹೆಲಿಕಾಪ್ಟರ್ ಘಟಕ ಸ್ಥಾಪನೆ]

ಬಿದರೆಹಳ್ಳ ಕಾವಲ್‌ನಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ಘಟಕ ನಿರ್ಮಾಣ ಮಾಡುವ ಕಾರ್ಯಕ್ಕೆ ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಸುಮಾರು 610 ಎಕರೆ ಜಾಗದಲ್ಲಿ ಘಟಕ ನಿರ್ಮಾಣಗೊಳ್ಳಲಿದೆ. ಘಟಕ ನಿರ್ಮಾಣಕ್ಕೆ ಸುಮಾರು 4000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ. [ತುಮಕೂರಿನ ಮೆಗಾ ಫುಡ್ ಪಾರ್ಕ್ ಬಗ್ಗೆ ಓದಿ]
ಸ್ಥಳಾಂತರದ ಸುದ್ದಿ : ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಕೇಂದ್ರ ರಕ್ಷಣಾ ಸಚಿವರಾದ ಬಳಿಕ ಈ ಘಟಕ ಗೋವಾಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ಸುದ್ದಿ ಹಬ್ಬಿತ್ತು. ಡಿಸೆಂಬರ್ 14ರಂದು ಬೆಂಗಳೂರಿಗೆ ಬಂದಿದ್ದ ಪರಿಕ್ಕರ್ ಅವರು ಘಟಕ ಸ್ಥಳಾಂತರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. [ಪಾವಗಡದಲ್ಲಿ ಬೃಹತ್ ಸೌರ ಶಕ್ತಿ ಪಾರ್ಕ್ ಸ್ಥಾಪನೆಗೆ ಅಸ್ತು]

ಯಾವ ಹೆಲಿಕಾಪ್ಟರ್ ಉತ್ಪಾದನೆ? : ಗುಬ್ಬಿಯ ಉತ್ಪಾದನೆ ಘಟಕದಲ್ಲಿ 3000 ಕೆ.ಜಿ.ತೂಕದ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ನಿರ್ಮಾಣ ಮಾಡಲು ಎಚ್‌ಎಎಲ್ ಉದ್ದೇಶಿಸಿದೆ. 5 ರಿಂದ 6 ಜನರು ಪ್ರಯಾಣಿಸಬಹುದಾದದ ಈ ಹೆಲಿಕಾಪ್ಟರ್ ಅನ್ನು ಭೂ ಸೇನೆ ಮತ್ತು ವಾಯುಸೇನೆ ಬಳಸಲಿವೆ. ಭವಿಷ್ಯದಲ್ಲಿ ಈ ಘಟಕದಲ್ಲಿ 10 ರಿಂದ 12 ಸಾವಿರ ಟನ್ ತೂಕದ ಹೆಲಿಕಾಪ್ಟರ್ ನಿರ್ಮಾಣ ಮಾಡುವ ಗುರಿಯನ್ನು ಎಚ್‌ಎಎಲ್ ಹೊಂದಿದೆ.
ವಿದ್ಯುತ್ ಮಾರ್ಗ ಸ್ಥಳಾಂತರ : ಹೆಲಿಕಾಪ್ಟರ್ ಉತ್ಪಾದನಾ ಘಟಕಕ್ಕೆ ಗುರುತಿಸಿರುವ ಜಾಗದಲ್ಲಿ 220 ಕೆ.ವಿ.ಸಾಮರ್ಥ್ಯದ ಎರಡು ವಿದ್ಯುತ್ ಲೈನ್ ಹಾದು ಹೋಗಿದ್ದು, ಅದನ್ನು ಇಂಧನ ಇಲಾಖೆ ತೆರವುಗೊಳಿಸುತ್ತಿದೆ. ಘಟಕಕ್ಕೆ ಅಗತ್ಯವಾಗಿ ವಿದ್ಯುತ್ ಪೂರೈಕೆಗೆ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ನೀರಿನ ವ್ಯವಸ್ಥೆ : ಹೇಮಾವತಿ ನಾಲೆಯಿಂದ ಕೆರೆಗಳಿಗೆ ನೀರು ತುಂಬಿ, ಎಚ್‌ಎಎಲ್ ಘಟಕಕ್ಕೆ 0.43 ಟಿಎಂಸಿ ನೀರನ್ನು ಕೆರೆಗಳ ಮೂಲಕ ಪೂರೈಸಲಾಗುತ್ತದೆ. 2018-19ರ ವೇಳೆಗೆ ಘಟಕದಲ್ಲಿ ನಿರ್ಮಾಣಗೊಳ್ಳುವ ಹೆಲಿಕಾಪ್ಟರ್ ಸೇನೆಗೆ ಸೇರುವ ಸಾಧ್ಯತೆ ಇದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications