ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರಿನತ್ತಲೂ ಹೆಜ್ಜೆ ಹಾಕಿದ ನಕ್ಸಲರು

By Srinath
|
Google Oneindia Kannada News

ತುಮಕೂರು, ಜೂನ್ 4: ನಕ್ಸಲರ ಜಾಡು ತುಮಕೂರು ಜಿಲ್ಲೆಯಲ್ಲೂ ಮೂಡಲಾರಂಭಿಸಿವೆ. ತುಮಕೂರು ತಾಲ್ಲೂಕಿನ ತಿರುಮಣಿಗೆ ಕೇವಲ 4 ಕಿಮೀ ದೂರದಲ್ಲಿರುವ ಆಂಧ್ರಪ್ರದೇಶದ ಮೋಟಾರ್ಲ ಚಿಂತಲಪಲ್ಲಿ (ಎಂಸಿ ಪಲ್ಲಿ) ಮತ್ತು ಸಿಕೆ ಪಲ್ಲಿ (ಚಿನ್ನಕೊತ್ತ ಪಲ್ಲಿ) ಗ್ರಾಮಗಳಲ್ಲಿ ಈಚೆಗೆ ನಕ್ಸಲ್ ಹೆಸರಿನಲ್ಲಿ ಭಿತ್ತಿಪತ್ರ ಅಂಟಿಸಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಹಲವು ವರ್ಷಗಳಿಂದ ಕಾಣಿಯಾಗಿದ್ದ ನಕ್ಸಲ್ ಚಟುವಟಿಕೆಗಳು ತಾಲ್ಲೂಕಿನಲ್ಲಿ ಮತ್ತೆ ತಲೆ ಎತ್ತಿವೆ. ಆಂಧ್ರದಲ್ಲಿ ಯಾವುದೇ ಬೆಳವಣಿಗೆ ನಡೆದರೂ ತಾಲ್ಲೂಕಿನ ಮೇಲೆ ಅದರ ಪ್ರಭಾವ ನಿಚ್ಚಳವಾಗಿ ಕಾಣುತ್ತದೆ.

ಈ ಹಿಂದೆ ಆಂಧ್ರ ಪೋಲಿಸರು ನಕ್ಸಲರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ನಕ್ಸಲರು ತಾಲ್ಲೂಕಿನ ಗ್ರಾಮಗಳನ್ನು ಆಶ್ರಯತಾಣಗಳನ್ನಾಗಿಸಿಕೊಂಡು, ಇಲ್ಲಿ ಬಂದು ಅಡಗಿಕೊಳ್ಳುತ್ತಿದ್ದರು. ಆದರೆ ಒಂದಷ್ಟು ವರ್ಷಗಳಿಂದ ತಾಲ್ಲೂಕಿನಲ್ಲಿ ನಕ್ಸಲ್ ಚಟುವಟಿಕೆಗಳು ತೆರೆಮರೆಗೆ ಸರಿದಿದ್ದವು.

Naxalites surface in Tumkur taluk bordering Andhra Pradesh

ಇದೀಗ ಮೇ 30ರಂದು ತಾಲ್ಲೂಕಿಗೆ ಅಂಟಿಕೊಂಡಿರುವ ಆಂಧ್ರದ ಎಂಸಿ ಪಲ್ಲಿ ಗ್ರಾಮದಲ್ಲಿ ನಕ್ಸಲ್ ನಾಯಕರ ಹೆಸರಿನಲ್ಲಿ ಭಿತ್ತಿಪತ್ರಗಳು ಪತ್ತೆಯಾಗಿವೆ. ಗ್ರಾಮದ ದೇಗುಲ, ಬಸ್ ನಿಲ್ದಾಣ ಕಾಲೋನಿಯಲ್ಲಿ ಮೂರು ಭಿತ್ತಿ ಪತ್ರ ಅಂಟಿಸಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಜಮೀನುದಾರರ ದೌರ್ಜನ್ಯ ಹೆಚ್ಚುತ್ತಿದೆ. ಅವರ ದೌರ್ಜನ್ಯ ನಿಯಂತ್ರಿಸುವ ಸಲುವಾಗಿ ಪ್ರತಿ ಹಳ್ಳಿಯಲ್ಲೂ ಸಂಘಟನೆ ಬಲಪಡಿಸಲಾಗುವುದು. ಬಡವರ ಮೇಲೆ ದೌರ್ಜನ್ಯ ಎಸಗುವವರನ್ನು ಶಸ್ತ್ರಾಸ್ತ್ರಗಳ ಮೂಲಕ ಅಂತ್ಯಗೊಳಿಸಲಾಗುವುದು. ಜಮೀನುದಾರರು, ಶ್ರಿಮಂತರೂ ಬಡವರೊಟ್ಟಿಗೆ ಕಷ್ಟಪಟ್ಟು ದುಡಿಯುವಂತಾಗಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಭಿತ್ತಿಪತ್ರದಲ್ಲಿ ತೆಲುಗು ಭಾಷೆಯಲ್ಲಿ ಬರೆಯಲಾಗಿದೆ. ಪತ್ರದ ಕೊನೆಯಲ್ಲಿ ಲಾಲ್ ಸಲಾಂ ಕಾಮ್ರೆಡ್ಸ್, ಕಮಾಂಡರ್ ರಮಣ ಎಂದೂ ನಮೂದಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಂಧ್ರ ಭಾಗದ ಗ್ರಾಮಗಳಲ್ಲಿ ಆಂಧ್ರ ಪೊಲೀಸರು ಪಹರೆ ಹೆಚ್ಚಿಸಿದ್ದಾರೆ. ಆದರೆ ಕರ್ನಾಟಕ ಭಾಗದಲ್ಲಿ ಮಾತ್ರ ಪೋಲಿಸರಿಗೆ ಭಿತ್ತಿಪತ್ರದ ವಿಷಯವೇ ತಿಳಿದಿಲ್ಲವಂತೆ!

English summary
Naxalites with wallpaper writings warning the local land lords who exploit the poor villagers have surfaced recently in Tumkur taluk (Karnataka) bordering Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X