ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಮಪತ್ರ ಹಿಂಪಡೆಯಲು 3.5 ಕೋಟಿ: ಮುದ್ದಹನುಮೇಗೌಡ ವಿರುದ್ಧ ಆಡಿಯೋ ಬಾಂಬ್

|
Google Oneindia Kannada News

Recommended Video

ದೇವೇಗೌಡರನ್ನು ಸೋಲಿಸೋಕೆ ನಡೆದಿತ್ತು ಮಾಸ್ಟರ್ ಪ್ಲಾನ್..! | Oneindia Kannada

ತುಮಕೂರು, ಏಪ್ರಿಲ್ 26: ದೇವೇಗೌಡರ ವಿರುದ್ಧ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆಯಲು ಸಂಸದ ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ಕೆ.ಎಂ.ರಾಜಣ್ಣ ಅವರು ಕೋಟ್ಯಂತರ ಹಣ ಪಡೆದಿದ್ದಾರೆ ಎಂದು ಉಲ್ಲೇಖಿತವಾಗಿರುವ ಆಡಿಯೋ ಒಂದು ಹರಿದಾಡುತ್ತಿದೆ.

ಪರಮೇಶ್ವರ್ ಅವರ ಆಪ್ತ ಎನ್ನಲಾಗಿರುವ ದರ್ಶನ್ ಎಂಬುವರು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಮಾತನಾಡಿ ಎನ್ನಲಾಗಿರುವ ಆಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಆಡಿಯೋದಲ್ಲಿ ದರ್ಶನ್ ಎಂಬಾತ ಮಾತನಾಡುತ್ತಾ, ಕಾಂಗ್ರೆಸ್‌ನ ಸಂಸದ ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ರಾಜಣ್ಣ ಅವರುಗಳು ತಮ್ಮ ನಾಮಪತ್ರ ವಾಪಸ್ ಪಡೆಯಲು ತಲಾ 3.50 ಕೋಟಿ ಹಣ ಪಡೆದಿದ್ದಾರೆ ಎಂದಿದ್ದಾರೆ. ಮುಂದುವರೆದು ಮಾತನಾಡಿ, ಆ ವಿಷಯವು ತನಗೆ ಅತೀ ಹತ್ತಿರದವರು, ಬಲ್ಲವರೊಬ್ಬರಿಂದ ನನಗೆ ಗೊತ್ತಾಯಿತೆಂದು ಹೇಳುತ್ತಾರೆ.

ದೇವೇಗೌಡರು, ಕಾಂಗ್ರೆಸ್ ಹೈ ಕಮಾಂಡ್ ಮೇಲೆ ಅಬ್ಬರಿಸಿದ ಮಧುಗಿರಿ ರಾಜಣ್ಣ ದೇವೇಗೌಡರು, ಕಾಂಗ್ರೆಸ್ ಹೈ ಕಮಾಂಡ್ ಮೇಲೆ ಅಬ್ಬರಿಸಿದ ಮಧುಗಿರಿ ರಾಜಣ್ಣ

2.48 ನಿಮಿಷದ ಆಡಿಯೋದಲ್ಲಿ ದರ್ಶನ್ ಎಂಬಾತ ತುಮಕೂರಿನ ಲೋಕಸಭಾ ಚುನಾವಣೆ ಬಗ್ಗೆ ಹಲವು ಒಳ ವಿಷಯಗಳನ್ನು ಹೇಳಿದ್ದು, ಕಾಂಗ್ರೆಸ್‌ನವರು ಹಣ ಪಡೆದುಕೊಂಡರೂ ಸಹ ಸಹಾಯ ಮಾಡಲಿಲ್ಲ ಎನ್ನುತ್ತಾರೆ.

'ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ'

'ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ'

ಮುದ್ದಹನುಮೇಗೌಡ ಅವರ ಬಗ್ಗೆ ಆಡಿಯೋದಲ್ಲಿ ಹೆಚ್ಚಿನ ಉಲ್ಲೇಖವಿದ್ದು, ಮುದ್ದಹನುಮೇಗೌಡ ಅವರು ನೂರಾರು ಉನ್ನತ ಅಧಿಕಾರಿಗಳನ್ನು ತಮ್ಮ ಅನುಕೂಲಕ್ಕಾಗಿ ವರ್ಗಾವಣೆ ಮಾಡಿಸಿದ್ದಾರೆ. ದಾಖಲೆ ಸಮೇತ ಇದೆ, ಇದನ್ನೆಲ್ಲಾ ತಿಳಿದುಕೊಂಡ ಮೇಲೆ ಮುದ್ದಹನೇಗೌಡ ಅವರ ಬಗ್ಗೆ ಅಸಹ್ಯವೆನಿಸುತ್ತಿದೆ, ಅವರ ಸಿದ್ಧಾಂತ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡುತ್ತಾರೆ.

ಒಂದು ವೇಳೆ ಗೌಡ್ರು ಸೋತ್ರೆ, ರಾಜೀನಾಮೆ ಪತ್ರ ರೆಡಿ ಇಟ್ಕೊಂಡ ಜೆಡಿಎಸ್ ಶಾಸಕಒಂದು ವೇಳೆ ಗೌಡ್ರು ಸೋತ್ರೆ, ರಾಜೀನಾಮೆ ಪತ್ರ ರೆಡಿ ಇಟ್ಕೊಂಡ ಜೆಡಿಎಸ್ ಶಾಸಕ

ಪರಮೇಶ್ವರ್ ಸಿಎಂ, ರೇವಣ್ಣ ಡಿಸಿಎಂ?

ಪರಮೇಶ್ವರ್ ಸಿಎಂ, ರೇವಣ್ಣ ಡಿಸಿಎಂ?

ಅಷ್ಟೆ ಅಲ್ಲದೆ ಆಡಿಯೋದಲ್ಲಿ ಮಹತ್ವದ ವಿಷಯವೊಂದು ಚರ್ಚೆ ಆಗಿದೆ. ತುಮಕೂರಿನಲ್ಲಿ ದೇವೇಗೌಡ ಅವರು ಗೆದ್ದರೆ ನಮ್ಮ ಸಾಹೇಬ್ರು (ಜಿ.ಪರಮೇಶ್ವರ್) ಸಿಎಂ ಆಗುವುದು ಖಾಯಂ, ಪರಮೇಶ್ವರ್ ಸಿಎಂ, ರೇವಣ್ಣ ಡಿಸಿಎಂ ಎಂದು ಸಹ ದರ್ಶನ್ ಎಂಬಾತ ಆಡಿಯೋದಲ್ಲಿ ಹೇಳಿದ್ದಾರೆ.

ಕುಮಾರಸ್ವಾಮಿ, ದೇವೇಗೌಡರನ್ನು ಮನೆಯಿಂದ ಹೊರ ಹಾಕಿದ್ದರು: ಮಾಧುಸ್ವಾಮಿ ಕುಮಾರಸ್ವಾಮಿ, ದೇವೇಗೌಡರನ್ನು ಮನೆಯಿಂದ ಹೊರ ಹಾಕಿದ್ದರು: ಮಾಧುಸ್ವಾಮಿ

ಆಡಿಯೋ ಚರ್ಚೆ ಕಾವೇರಿದೆ

ಆಡಿಯೋ ಚರ್ಚೆ ಕಾವೇರಿದೆ

ಪ್ರಸ್ತುತ ಈ ಆಡಿಯೋದ ಚರ್ಚೆ ಕಾವು ಹೆಚ್ಚಾಗಿದ್ದು, ಆಡಿಯೋದಲ್ಲಿನ ದನಿ ದರ್ಶನ್ ಎಂಬಾತನದ್ದು ಎನ್ನಲಾಗಿದ್ದು, ದರ್ಶನ್, ಪರಮೇಶ್ವರ್ ಅವರಿಗೆ ಆಪ್ತವಲಯದಲ್ಲಿ ಗುರುತಿಸಿಕೊಂಡವರಾಗಿದ್ದು, ಸಾಮಾಜಿಕ ಜಾಲತಾಣದ ಉಸ್ತುವಾರಿ ವಹಿಸಿಕೊಂಡಿದ್ದರು ಎನ್ನಲಾಗಿದೆ.

ಕೊನೆಯ ದಿನ ನಾಮಪತ್ರ ವಾಪಸ್ ಪಡೆದಿದ್ದ ಮುದ್ದಹನುಮೇಗೌಡ

ಕೊನೆಯ ದಿನ ನಾಮಪತ್ರ ವಾಪಸ್ ಪಡೆದಿದ್ದ ಮುದ್ದಹನುಮೇಗೌಡ

ತುಮಕೂರಿನ ಕಾಂಗ್ರೆಸ್ ಸಂಸದರಾಗಿರುವ ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಬಗ್ಗೆ ತೀವ್ರ ಅಸಾಮಾಧಾನಗೊಂಡು ದೇವೇಗೌಡ ಅವರು ವಿರುದ್ಧವಾಗಿ ನಾಮಪತ್ರ ಸಲ್ಲಿಸಿದ್ದರು, ಆದರೆ ಕೊನೆಯ ಸಮಯದಲ್ಲಿ ನಾಮಪತ್ರ ವಾಪಸ್ ಪಡೆದರು. ಕಾಂಗ್ರೆಸ್‌ನ ಮಾಜಿ ಶಾಸಕ ರಾಜಣ್ಣ ಸಹ ನಾಮಪತ್ರ ಸಲ್ಲಿಸಿದ್ದರು, ಕೊನೆಯ ದಿನ ವಾಪಸ್ ಪಡೆದಿದ್ದರು. ಇವರಿಬ್ಬರೂ ಹಣ ಪಡೆದು ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಈಗ ಆರೋಪಿಸಲಾಗುತ್ತಿದೆ.

ಆಡಿಯೋ ಬಗ್ಗೆ ಪರಮೇಶ್ವರ್ ಹೇಳಿದ್ದೇನು?

ಆಡಿಯೋ ಬಗ್ಗೆ ಪರಮೇಶ್ವರ್ ಹೇಳಿದ್ದೇನು?

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಪರಮೇಶ್ವರ್ ಅವರು, ಮುದ್ದಹನುಮೇಗೌಡ ಅವರು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಅವರು ಯಾವುದೇ ರೀತಿಯ ಹಣ ಪಡೆದು ನಾಮಪತ್ರ ವಾಪಸ್ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ದರ್ಶನ್ ಅವರು ಚುನಾವಣೆ ಪ್ರಚಾರದಲ್ಲಿ ಜೊತೆ ಇದ್ದರು, ಆದರೆ ಸುಳ್ಳು ಸುದ್ದಿ ಹರಡಿರುವ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.

English summary
A audio released accusing congress MP Muddahanumegowda and former MLA KN Rajanna took 3.5 crore money to take back his nomination from Tumakuru constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X