ದಾವಣಗೆರೆ-ತುಮಕೂರು ರೈಲು ಮಾರ್ಗ ಯೋಜನೆ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಸಚಿವ.ವಿಸೋಮಣ್ಣ

Davanagere-Tumakuru Railway Line: ರಾಜ್ಯದಲ್ಲಿ ರೈಲ್ವೆ ಲೈನ್‌ ಕಾಮಗಾರಿ ವಿಚಾರದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಆಗುತ್ತಿದೆ. ಅದರಲ್ಲೂ, ವಿ.ಸೋಮಣ್ಣ ಅವರು ರಾಜ್ಯ ರೈಲ್ವೆ ಖಾತೆ ಸಚಿವರಾಗಿನಿಂದಲೂ ರೈಲ್ವೆ ಜಾಲವನ್ನು ವಿಸ್ತರಣೆ ಮಾಡುವ ಕೆಲಸ ಮಾಡುತ್ತಲಿದ್ದಾರೆ. ಇದೀಗ ಬಹುನಿರೀಕ್ಷಿತ ತುಮಕೂರು-ದಾವಣಗೆರೆ ರೈಲು ಮಾರ್ಗ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್‌ವೊಂದನ್ನು ನೀಡಿದ್ದಾರೆ.

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದಿಂದ ತುಂಬಾ ಪ್ರಯೋಜನಾಗಳಿವೆ. ಪ್ರಯಾಣ ಅವಧಿ ಕಡಿಮೆಯಾಗಲಿದ್ದು, ಇದರಿಂದ ಪ್ರಯಾಣಿಕರಿಗೆ ಸಮಯ ಉಳಿದಂತಾಗಲಿದೆ. ಆದ್ದರಿಂದ ಈ ರೈಲು ಮಾರ್ಗ ಯಾವಾಗ ಪೂರ್ಣಗೊಂಡು ಪ್ರಯಾಣಕ್ಕೆ ಮುಕ್ತವಾಗಲಿದೆಯೋ ಎಂದು ಪ್ರಯಾಣಿಕರು ಕಾತರದಲ್ಲಿದ್ದಾರೆ. ಈ ಸಂಬಂಧ ಇದೀಗ ಸಚಿವ ವಿ.ಸೋಮಣ್ಣ ಅವರು ಮಹತ್ವದ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

Minister V Somanna Gives Big Update on Davangere Tumakuru Railway Line Project

ತುಮಕೂರು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುವುದಲ್ಲದೆ, ಕೆಲವೇ ವರ್ಷಗಳಲ್ಲಿ ಬೆಂಗಳೂರಿನ ಸಮೀಪದವರೆಗೂ ವಿಸ್ತರಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ತುಮಕೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶ, ರೈಲು ಪ್ರಮಾಣ ಅವಲಂಬನೆ ಹೆಚ್ಚಳ ಆಗುವ ದೃಷ್ಟಿಯಿಂದ ತುಮಕೂರು-ಬೆಂಗಳೂರು ನಡುವೆ 4 ರೈಲು ಮಾರ್ಗ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಈ ಮೂಲಕ ಹೆಚ್ಚುವರಿ ರೈಲುಗಳ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.

ತುಮಕೂರಿನ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ಇಟ್ಟುಕೊಂಡಿದ್ದ 11ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟನೆ ಮಾಡಿ, ಪ್ರಯಾಣಿಕರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣೆ ಮಾಡಿದರು. ಈ ವೇಳೆ ರೈಲು ಕಾಮಗಾರಿಗಳ ಬಗ್ಗೆ ಮಾತನಾಡಿದರು. ಅದರಲ್ಲೂ ಬಹುನಿರೀಕ್ಷಿತ ರೈಲು ಮಾರ್ಗದ ಯೋಜನೆ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು.

ನಗರದ ಹೊರವಲಯದ ತಿಮ್ಮರಾಜನಹಳ್ಳಿ ಬಳಿ ರೈಲ್ವೆ ಇಲಾಖೆಯಿಂದ ಬೃಹತ್‌ ಗೋಡೌನ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಸುಮಾರು 200 ಹೆಕ್ಟೇರ್ ಭೂಮಿ ಅವಶ್ಯಕತೆ ಇದ್ದು, ಈ ಬಗ್ಗೆ ಕೆಎಐಡಿಬಿ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚೆ ಮಾಡಲಾಗಿದೆ ಎಂದು ವಿ.ಸೋಮಣ್ಣ ಅವರು ತಿಳಿಸಿದರು.

ಯಾರನ್ನೋ ಮೆಚ್ಚಿಸಲಿಕ್ಕೋಸ್ಕರ ನಾನು ಕೆಲಸ ಮಾಡುತ್ತಿಲ್ಲ, ಜನರಿಗೆ ಅನುಕೂಲ ಆಗಲಿ ಎನ್ನುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆ. 50 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳಿಗೆ ಚಾಲನೆ ದೊರಕಿಸುವಂತೆ ಮಾಡಲು ಸೋಮಣ್ಣನೇ ಬರಬೇಕಾಯಿತು. ಜಿಲ್ಲೆಯಲ್ಲಿ 27-28 ರೈಲ್ವೆ ಗೇಟ್‌ಗಳನ್ನು ತೆರವುಗೊಳಿಸಿ ಅಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣ ಕೆಲಸ ಆರಂಭ ಅಗಿವೆ. ಇವು ಎರಡು ವರ್ಷಗಳಲ್ಲಿ ಲೋಕಾರ್ಪಣೆ ಆಗಲಿವೆ ಎಂದು ಭರವಸೆ ನೀಡಿದರು.

ಇನ್ನು 18 ವರ್ಷಗಳಿಂದ ಬಾಕಿ ಉಳಿದಿದ್ದ ಬಹುನಿರೀಕ್ಷಿತ ತುಮಕೂರು-ದಾವಣಗೆರೆ ರೈಲು ಮಾರ್ಗ ಯೋಜನೆ ಕಾಮಗಾರಿಗೆ ಇದೀಗ ವೇಗ ಸಿಕ್ಕಿದೆ. ಸುಮಾರು 2,500 ಹೆಕ್ಟೇರ್‌ ಭೂಮಿ ಸ್ವಾಧೀನ ಪ್ರಕ್ರಿಯೆ ಮುಗಿಯುತ್ತಾ ಬಂದಿದೆ ಎಂದು ಹೇಳಿದರು. ಇನ್ನು ಇದೇ ವೇಳೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂರಮೇಶ್‌ ಮಾತನಾಡಿ, ತುಮಕೂರು-ಬೆಂಗಳೂರು ಮಾರ್ಗದಲ್ಲಿ ಹೆಚ್ಚಿನ ರೈಲು ಸೇವೆ ನೀಡಬೇಕು ಎಂದು ಮನವಿ ಮಾಡಿದರು.

ಅಲ್ಲದೆ, ತುಮಕೂರಿನಿಂದ ಹೊರಡುವ ಮೆಮೊ ರೈಲು ಬೆಂಗಳೂರಿನ ಯಶವಂತಪುರದವರೆಗೆ ಮಾತ್ರ ಸೇವೆ ನೀಡುತ್ತಿದೆ. ಇದರ ಸೇವೆಯನ್ನು ಸಂಗೊಳ್ಳಿರಾಯಣ್ಣ ನಿಲ್ದಾಣದವರೆಗೂ ವಿಸ್ತರಣೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ತುಮಕೂರಿನಿಂದ-ಬೆಂಗಳೂರಿಗೆ, ಬೆಂಗಳೂರಿನಿಂದ-ತುಮಕೂರಿಗೆ ಪ್ತಯಾಣ ಮಾಡುವವರ ಸಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹೆಚ್ಚುವರಿ ರೈಲು ಸೇವೆ ಒದಗಿಸಬೇಕೆಂದು ಮನವಿ ಮಾಡಿದರು. ಒಟ್ಟಿನಲ್ಲಿ ದಾವಣಗೆರೆ-ತುಮಕೂರು ರೈಲು ಮಾರ್ಗಕ್ಕಾಗಿ ಈ ಭಾಗದ ಜನರು ಕಾತರದಿಂದ ಕಾದುಕುಳಿತಿದ್ದಾರೆ. ಯಾಕಂದ್ರೆ ಈಗಿರುವ ರೈಲು ಮಾರ್ಗ ಸುತ್ತಾಕಿಕೊಂಡು ಬರಬೇಕಾಗುತ್ತದೆ. ಒಂದು ವೇಳೆ ಈ ಮಾರ್ಗಗಳ ನಡುವೆ ನೇರ ರೈಲು ಮಾರ್ಗ ಆದ್ರೆ. ಬರೀ ದಾವಣಗೆರೆ-ತುಮಕೂರು ಅಷ್ಟೇ ಅಲ್ಲದೆ, ಚಿತ್ರದುರ್ಗ ಭಾಗದ ಜನರಿಗೂ ತುಂಬಾ ಅನುಕೂಲ ಆದಂತಾಗಲಿದೆ. ಪ್ರಯಾಣ ಸಮಯ ಕಡಿಮೆ ಆಗಲಿದ್ದು, ಇದರಿಂದ ಹುಬ್ಬಳ್ಳಿ, ಧಾರವಾಡದ ಕಡೆ ಪ್ರಯಾಣ ಮಾಡುವವರಿಗೂ ಸಹ ಅನುಕೂಲ ಆದಂತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+