ಅನಂತ್‌ಕುಮಾರ್ ಹೆಗಡೆಗೆ ಬಿಎಸ್‌ವೈ, ಅಮಿತ್ ಶಾ ಎಚ್ಚರಿಕೆ
ತುಮಕೂರು, ಜನವರಿ 2: ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆಗೆ ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪ ಹಾಗೂ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಎಚ್ಚರಿಕೆ ನೀಡಿದ್ದಾರೆ.
ತುಮಕೂರಿನ ಕೈದಾಳದಲ್ಲಿ ಜಕಣಾಚಾರಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯವನ್ನು ಹೇಳಿದ್ದಾರೆ.
ಸಂವಿಧಾನ ಬದಲಾಯಿಸಲು ಅಧಿಕಾರಕ್ಕೆ ಬಂದಿರುವುದಾಗಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನೀಡಿದ್ದ ಹೇಳಿಕೆ ಸರಿಯಲ್ಲ. ಜನರಿಗೆ ನೋವಾಗುವ ರೀತಿಯಲ್ಲಿ ಮಾತನಾಡಬಾರದು ಎಂದು ಸಚಿವರಿಗೆ ಹೇಳಿದ್ದೇವೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

'ಸಂಸತ್‌ನಲ್ಲಿ ಹೆಗಡೆ ಅವರು ಕ್ಷಮೆ ಕೋರಿದ್ದಾರೆ. ಈಗ ಅದು ಮುಗಿದ ಅಧ್ಯಾಯ. ಯಾವುದೇ ಉದ್ದೇಶದಿಂದ ಹೇಳಿದ್ದರೂ ಅವರ ಹೇಳಿಕೆ ಸರಿಯಲ್ಲ. ಹೆಗಡೆ ಹೇಳಿಕೆ ಬಗ್ಗೆ ಹಿರಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಅವರಿಗೂ ಅಸಮಾಧಾನವಾಗಿದೆ' ಎಂದು ಹೇಳಿದರು.'ಈ ರೀತಿ ಹೇಳಿಕೆ ನೀಡಬಾರದು ಎಂದು ಸಚಿವರಿಗೆ ನಾನು ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಎಚ್ಚರಿಕೆ ನೀಡಿದ್ದೇವೆ' ಎಂದರು.












Click it and Unblock the Notifications