Breaking: ಗುಜರಾತ್ ಗಲಭೆ ಕುರಿತು ಹೇಳಿಕೆ- ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ತುಮಕೂರು ಪೊಲೀಸರು
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡ ಶರಣ್ ಪಂಪ್‌ವೆಲ್ 2002 ರ ಗುಜರಾತ್ ಗಲಭೆಯನ್ನು ಸಮರ್ಥಿಸಿಕೊಂಡ ಕೆಲವು ದಿನಗಳ ನಂತರ, ತುಮಕೂರಿನ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತುಮಕೂರು, ಫೆಬ್ರವರಿ 02: ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮುಖಂಡ ಶರಣ್ ಪಂಪ್‌ವೆಲ್ 2002 ರ ಗುಜರಾತ್ ಗಲಭೆಯನ್ನು ಸಮರ್ಥಿಸಿಕೊಂಡ ಕೆಲವು ದಿನಗಳ ನಂತರ, ತುಮಕೂರಿನ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತುಮಕೂರು ಪಟ್ಟಣದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪಂಪ್‌ವೆಲ್ ವಿರುದ್ಧ ಭಾರತೀಯ ದಂಡನೆಯ ಸೆಕ್ಷನ್ 295 (ಎ) (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಬೇರೊಬ್ಬರ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಚೋದನಕಾರಿ ಭಾಷಣಗಳ ಮೂಲಕ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೇಲ್ ವಿವಿಧ ಧರ್ಮಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸೈಯದ್ ಬುರ್ಹಾನ್ ಉದ್ದೀನ್ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ. ತುಮಕೂರು ಶಾಂತಿಯುತ ಸ್ಥಳವಾಗಿದ್ದು, ಪಂಪ್‌ವೆಲ್‌ನಂತಹ ಜನರು ಧಾರ್ಮಿಕ ಆಧಾರದ ಮೇಲೆ ಸಾರ್ವಜನಿಕರ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸೈಯದ್ ಬುರ್ಹಾನ್ ಉದ್ದೀನ್ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ಬಜರಂಗದಳದ ಶೌರ್ಯ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಎಚ್‌ಪಿಯ ಪ್ರಾಂತೀಯ ಕಾರ್ಯದರ್ಶಿ ಪಂಪ್‌ವೆಲ್ ಗುಜರಾತ್ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡಿದ್ದರು.
ಕಳೆದ ತಿಂಗಳು ಮಂಗಳೂರಿನಲ್ಲಿ ಕೊಲೆಯಾದ ವ್ಯಕ್ತಿ ಮೊಹಮ್ಮದ್ ಫಾಝಿಲ್ ಅವರ ತಂದೆ ಪಂಪ್‌ವೆಲ್ ವಿರುದ್ಧ ದೂರು ದಾಖಲಿಸಿದ್ದು, ಅಪರಾಧದಲ್ಲಿ ಆತನ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಕೋರಿದ್ದರು. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸೇಡು ತೀರಿಸಿಕೊಳ್ಳಲು ಫಾಜಿಲ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಪಂಪ್‌ವೆಲ್ ಹೇಳಿದ್ದರು.

ಹಿಂದೂಗಳು ಫಾಜಿಲ್‌ನನ್ನು ಕೊಂದಿದ್ದಾರೆ ಎಂದು ಶರಣ್ ಪಂಪ್‌ವೆಲ್ ಬಹಿರಂಗ ಹೇಳಿಕೆ ನೀಡಿದ್ದಾರೆ. ಅದು ಹಿಂದೂಗಳಲ್ಲ, ಹಿಂದುತ್ವವಾದಿಗಳು ಎಂದು ಉಮರ್ ಮಾಧ್ಯಮಗಳಿಗೆ ತಿಳಿಸಿದ್ದರು. ಫಾಜಿಲ್ ಹತ್ಯೆಯ ಹಿಂದೆ ಯಾರ ಕೈವಾಡವಿದೆ ಎಂದು ಆರು ತಿಂಗಳಿನಿಂದ ಕೇಳುತ್ತಿದ್ದೇವೆ. ಈಗ ನಮಗೆ ತಿಳಿಯಿತು. ಅದು ಶರಣ್ ಪಂಪ್‌ವೇಲ್ ಎಂದು. ಧೈರ್ಯವಿದ್ದರೆ ನನ್ನ ಬಳಿ ಜಗಳಕ್ಕೆ ಬರಲಿ. ಕೋಮುವಾದದ ಮೂಲಕ ಪಂಪ್‌ವೇಲ್ ನಮ್ಮ ಜನರನ್ನು ಹಾಳು ಮಾಡುತ್ತಿದ್ದಾರೆ. ಅವನೊಬ್ಬ ರೌಡಿ. ಅವನು ನಾಯಕರನಲ್ಲ' ಎಂದು ಫಾಜಿಲ್ ತಂದೆ ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ವರ್ಷ ಜುಲೈ 19 ರಂದು 19 ವರ್ಷದ ಮಸೂದ್ ಹತ್ಯೆಯಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿಬಿದ್ದಿತ್ತು. ಇದರ ನಂತರ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಇದಕ್ಕೆ ಪ್ರತಿಕಾರವಾಗಿ ಫಾಜಿಲ್ ಹತ್ಯೆ ನಡೆಯಿತು ಎಂಬ ಆರೋಪಗಳು ಕೇಳಿಬಂದಿವೆ.












Click it and Unblock the Notifications