ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕಕ್ಕೆ ಮಹಿಳೆಯೊಬ್ಬರು ಸಿಎಂ : ಮೋಟಮ್ಮ ಭವಿಷ್ಯ!

|
Google Oneindia Kannada News

ತುಮಕೂರು, ಫೆ.16 : ಮಹಿಳೆಯೊಬ್ಬರು ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ ಮತ್ತು ಕಾಂಗ್ರೆಸ್ ಹೈ ಕಮಾಂಡ್ ನಾಯಕರು ಸಹ ಇದಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಹೇಳುವ ಮೂಲಕ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಕುತೂಹಲ ಹುಟ್ಟು ಹಾಕಿದ್ದಾರೆ.

ಭಾನುವಾರ ತುಮಕೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಮೋಟಮ್ಮ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮಹಿಳಾ ಸಮಾವೇಶದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

motamma

ಕರ್ನಾಟಕ ಸರ್ಕಾರದಲ್ಲಿ ಇನ್ನು ಮುಂದೆಯಾದರೂ ಮಹಿಳೆಯರಿಗೆ ಆದ್ಯತೆ ಸಿಗಲಿ ಎಂದು ಹೇಳಿದ ಅವರು, ಮಹಿಳೆಯೊಬ್ಬರು ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಹಕಾರ ನೀಡುತ್ತದೆ ಎಂದು ತಿಳಿಸಿದರು.[ರಾಹುಲ್ ಗಾಂಧಿ ಭಾನುವಾರದ ಕಾರ್ಯಕ್ರಮಗಳು]

ಎರಡು ದಿನದ ರಾಜ್ಯ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಭಾನುವಾರ ತುಮಕೂರಿನಲ್ಲಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ. ಆದರೆ, ಸಮಾವೇಶದಲ್ಲೆ ಸ್ವಾಗತ ಕೋರುವ ಬ್ಯಾನರ್ ಹಾಗೂ ಬಂಟಿಂಗ್ ಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವುದನ್ನು ಬಿಟ್ಟು ಪುರುಷರಿಗೆ ಆದ್ಯತೆ ನೀಡಲಾಗಿದೆ ಎಂಬುದು ಮೋಟಮ್ಮ ಅವರ ಆರೋಪ.

ಆದ್ದರಿಂದ ಕರ್ನಾಟಕ ಸರ್ಕಾರದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿರುವ ಮೋಟಮ್ಮ ಅವರು, ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಸಚಿವ ಸ್ಥಾನದ ಪ್ರಮಬ ಆಕಾಂಕ್ಷಿಯಾಗಿರುವ ಮೋಟಮ್ಮ ಅವರು, ಸದ್ಯ ಮಹಿಳೆಯೊಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿಕೆ ನೀಡಿರುವುದು ತೀವ್ರ ಕುತೂಹಲ ಹುಟ್ಟಿಹಾಕಿದೆ. ಆದರೆ, ಆ ಮಹಿಳೆ ಯಾರು ಎಂಬ ಗುಟ್ಟನ್ನು ಮೋಟಮ್ಮ ಅವರು ಬಿಟ್ಟು ಕೊಟ್ಟಿಲ್ಲ.

English summary
Karnataka may have its first woman chief minister said, Legislative Council member and Senior Congress leader Motamma. On Sunday, Feb 16 she addressed media at Tumkur and said, we may have woman chief minister soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X