ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಎಂದೂ ಸರ್ಕಾರ ಮಾಡುವುದಿಲ್ಲ : ಮೋದಿ

|
Google Oneindia Kannada News

Recommended Video

ತುಮಕೂರಿನಲ್ಲಿ ಜೆಡಿಎಸ್ ಬಗ್ಗೆ ಮೋದಿ ನುಡಿದ ಭವಿಷ್ಯ | Oneindia Kannada

ತುಮಕೂರು, ಮೇ 05 : ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಶನಿವಾರ ರಾಜ್ಯಕ್ಕೆ ಆಗಮಿಸಿದರು. ತುಮಕೂರಿನಲ್ಲಿ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ.

ನರೇಂದ್ರ ಮೋದಿ ಅವರು ಶನಿವಾರ ತುಮಕೂರು, ಗದಗ, ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಮೋದಿ ಸಮಾವೇಶ ಉದ್ದೇಶಿಸಿ ಇಂದು ಮಾತನಾಡಲಿದ್ದಾರೆ.

ಗುಡುಗು ಮಿಂಚುಗಳ ನಡುವೆ ಮೋದಿ ಮಾತಿನ ಕಾಮನಬಿಲ್ಲು!ಗುಡುಗು ಮಿಂಚುಗಳ ನಡುವೆ ಮೋದಿ ಮಾತಿನ ಕಾಮನಬಿಲ್ಲು!

Karnataka elections : Narendra Modi election campaign rally in Tumakuru

ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು

* ಕನ್ನಡದಲ್ಲಿ ಭಾಷಣ ಆರಂಭಿಸಿದ ನರೇಂದ್ರ ಮೋದಿ ಅವರು ಸಿದ್ದಗಂಗಾ ಶ್ರೀಗಳಿಗೆ ಪ್ರಣಾಮಗಳನ್ನು ಸಲ್ಲಿಸಿದರು. ಜಕಣಾಚಾರಿ, ಗುಬ್ಬಿ ವೀರಣ್ಣ ಅವರನ್ನು ಸ್ಮರಿಸಿದರು.

In Pics : ಕರ್ನಾಟಕದಾದ್ಯಂತ ಬಿಜೆಪಿಯಿಂದ ಭರ್ಜರಿ ಪ್ರಚಾರ

* ಚುನಾವಣೆ ಬಂದಾಗ ಕಾಂಗ್ರೆಸ್ ಬಡತನ, ಬಡವರ ಪರವಾಗಿ ಮಾತನಾಡುತ್ತಾರೆ. ಆದರೆ, ಚುನಾವಣೆ ಮುಗಿದ ಮೇಲೆ ಅವರು ಬಡವರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದರು.

* ಜೆಡಿಎಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಪರ್ಯಾಯ ಜೆಡಿಎಸ್‌ಅಲ್ಲ. ಜೆಡಿಎಸ್‌ ಯಾವುತ್ತೂ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕು. ಕರ್ನಾಟಕದಲ್ಲಿ ಬಿಜೆಪಿಯೇ ಸರ್ಕಾರ ರಚನೆ ಮಾಡಲಿದೆ? ಎಂದರು.

* ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪರದೆಯ ಹಿಂದೆ ಮಾತುಕತೆ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಬಿಬಿಎಂಪಿಯಲ್ಲಿನ ಮೈತ್ರಿ. ಅಲ್ಲಿ ಕಾಂಗ್ರೆಸ್‌ ಪಕ್ಷದವರನ್ನು ಮೇಯರ್ ಮಾಡಿರುವುದು ಜೆಡಿಎಸ್. ನಿಮ್ಮ ನಡುವೆ ಮೈತ್ರಿ ಇಲ್ಲ ಎಂದರೆ ಅದನ್ನು ಜನರ ಮುಂದೆ ಸ್ಪಷ್ಟವಾಗಿ ಹೇಳಿ.

*ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪರದೆಯ ಹಿಂದೆ ಮಾತುಕತೆ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಬಿಬಿಎಂಪಿಯಲ್ಲಿನ ಮೈತ್ರಿ. ಅಲ್ಲಿ ಕಾಂಗ್ರೆಸ್‌ ಪಕ್ಷದವರನ್ನು ಮೇಯರ್ ಮಾಡಿರುವುದು ಜೆಡಿಎಸ್. ನಿಮ್ಮ ನಡುವೆ ಮೈತ್ರಿ ಇಲ್ಲ ಎಂದರೆ ಅದನ್ನು ಜನರ ಮುಂದೆ ಸ್ಪಷ್ಟವಾಗಿ ಹೇಳಿ.

* ತುಮಕೂರು ಜನರಿಗೆ ಕುಡಿಯುವ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಇನ್ನೂ ಕುಂಟುತ್ತಾ ಸಾಗಿದೆ. ನೀವು ಕಾಂಗ್ರೆಸ್ ನಾಯಕರಿಗೆ ಕೇಳಿ, ಏಕೆ ಇನ್ನೂ ಕೊಡಲು ಸಾಧ್ಯವಾಗಿಲ್ಲ ಎಂದು.

* ಕೇಂದ್ರ ಸರ್ಕಾರ ವಾಜಪೇಯಿ ಅವರ ಕನಸಾದ ನದಿ ಜೋಡಣೆಯನ್ನು ಕೈಗೆತ್ತಿಕೊಂಡಿದೆ. ಹೇಮಾವತಿ ಮತ್ತು ನೇತ್ರಾವತಿ ನದಿಯನ್ನು ಜೋಡಣೆ ಮಾಡುತ್ತೇವೆ.

* ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಭ್ರಷ್ಟಾಚಾರ. ರೈತರ ಆತ್ಮಹತ್ಯೆ ನಡೆದಿದೆ. ರಾಜ್ಯ ಅಭಿವೃದ್ಧಿಯಾಗಿಲ್ಲ. ಆದರೆ, ಮಂತ್ರಿಗಳ ಖಜಾನೆ ತುಂಬಿದೆ.

* ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೆ ತುಮಕೂರಿನಲ್ಲಿ ಆಹಾರ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದೇವೆ. ಇದರಿಂದಾಗಿ ತುಮಕೂರು ಭಾಗದ ರೈತರಿಗೆ ಅನುಕೂಲವಾಗಿದೆ.

* ಕರ್ನಾಟಕದ 7 ಸ್ಮಾರ್ಟ್ ಸಿಟಿಯ ಯೋಜನೆಗಳಲ್ಲಿ ತುಮಕೂರು ಸಹ ಸೇರಿದೆ. ಸ್ಮಾರ್ಟ್‌ ಸಿಟಿ ಯೋಜನೆಗೆ ಅಗತ್ಯವಿರುವ ಅನುದಾನವನ್ನು ನಾವು ಈಗಾಗಲೇ ರಾಜ್ಯಕ್ಕೆ ನೀಡಿದ್ದೇವೆ. ಆದರೆ, ಸರ್ಕಾರ ಆ ಹಣವನ್ನು ಖರ್ಚು ಮಾಡದೇ ಬಾಕಿ ಉಳಿಸಿಕೊಂಡಿದೆ.

English summary
As campaigning is underway in poll-bound Karnataka. PM Narendra Modi address rally in Tumakuru on May 05, 2018. Here are the Live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X