ಮಾ.8ರಂದು ನೀರಿನ ಬವಣೆ ನೀಗಿಸುವ ಕಾರ್ಯಕ್ಕೆ ಮುತ್ತಪ್ಪ ರೈ ಚಾಲನೆ
ತುಮಕೂರು, ಮಾರ್ಚ್. 07 : ತುಮಕೂರು ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಪರ ಸಂಘಟನೆಯೊಂದು ನಾಡು ನುಡಿ ಕಟ್ಟುವ ಕಾಯಕದ ಜತೆಗೆ ತುಮಕೂರು ನಗರದ ನಾಗರಿಕರ ಕುಡಿಯುವ ನೀರಿನ ಬವಣೆ ನೀಗಿಸುವ ಮಹತ್ವದ ಕಾರ್ಯವೊಂದಕ್ಕೆ ಮುಂದಾಗಿದೆ.
ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ತಮ್ಮ ಸ್ವಂತ ಹಣದಿಂದ 10 ಟ್ಯಾಂಕರ್ ಖರೀದಿಸಿ ಖಾಸಗಿ ನೀರು ಲಭ್ಯವಿರುವ ಕೊಳವೆ ಬಾವಿಗಳಿಂದ ಹಣ ಕೊಟ್ಟು ನೀರು ಸರಬರಾಜು ಮಾಡಲು ಮುಂದಾಗಿದ್ದಾರೆ.
ಜಯಕರ್ನಾಟಕ ಸಂಸ್ಥಾಪಕ ಎನ್.ಮುತ್ತಪ್ಪ ರೈ ಮಾರ್ಚ್ 8ರಂದು ನಗರದ ಟೌನ್ ಹಾಲ್ ಮುಂಭಾಗದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

ರಾಜ್ಯಾಧ್ಯಕ್ಷರಾದ ಹೆಚ್.ಎನ್.ದೀಪಕ್.ರಾಜ್ಯ ಕಾರ್ಯಾಧ್ಯಕ್ಷರಾದ ನಾರಾಯಣ್.ರಾಜ್ಯ ಪ್ರದಾನ ಕಾರ್ಯದರ್ಶಿ ಸುದೀಪ್ ಕುಮಾರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ತುಮಕೂರು ನಗರದ ಸಾರ್ವಜನಿಕರು ಮಾರ್ಚ್ 8ರಿಂದ 8861772887 ಈ ನಂಬರ್ ಗೆ ಕರೆ ಮಾಡಿ ಉಚಿತ ಕುಡಿಯುವ ನೀರು ಪಡೆಯಬಹುದಾಗಿದೆ ಎಂದು ಜಯಕರ್ನಾಟಕ ನಗರ ಘಟಕ ಮನವಿ ಮಾಡಿಕೊಂಡಿದೆ.












Click it and Unblock the Notifications