• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್ ಡೌನ್: ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದ ಅಜ್ಜಿ ಬೀದಿಗೆ

|

ತಿಪಟೂರು, ಮಾರ್ಚ್ 25: ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡಲು ಇಡೀ ಭಾರತ ದೇಶ ಲಾಕ್ ಡೌನ್ ಆಗಿದೆ. ವೈರಸ್ ಹರಡುವ ಭೀತಿಯಿಂದ ಎಲ್ಲ ದೇವಸ್ಥಾನಗಳು ಬಂದ್ ಆಗಿದೆ. ಆದರೆ, ಇದರಿಂದ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದ ಅಜ್ಜಿಯೊಬ್ಬರು ಬೀದಿಗೆ ಬಿದ್ದಿದ್ದಾರೆ.

ಈ ಘಟನೆ ತಿಪಟೂರಿನಲ್ಲಿ ನಡೆದಿದೆ. ತಿಪಟೂರಿನ ಬೀದಿಗಳಲ್ಲಿ ಹೊಟ್ಟೆಗೆ ಊಟ ಇಲ್ಲದೆ, ಅಲೆದಾಡುತ್ತಿದ್ದ ಅಜ್ಜಿಯನ್ನು ಗಮನಿಸಿದ ಸಾರ್ವಜನಿಕರು ಅಲ್ಲಿನ ಅಧಿಕಾರಿಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರೇಖಾ, ಅಜ್ಜಿಗೆ ಸೂರು ಕೊಡಿಸುವ ಕೆಲಸ ಮಾಡಿದ್ದಾರೆ.

Live Updates :ರಾಜ್ಯದಲ್ಲಿ 21 ಸಾವಿರ ಮಂದಿ ಗೃಹಬಂಧನದಲ್ಲಿದ್ದಾರೆ

ಸದ್ಯ, ಅಜ್ಜಿ ವೃದ್ಧಶ್ರಾಮದಲ್ಲಿದೆ. ತಿಪಟೂರಿನ ಯಶಸ್ವಿನಿ ವೃದ್ಧಾಶ್ರಮದಲ್ಲಿ ಅಜ್ಜಿಯನ್ನು ನೋಡಿಕೊಳ್ಳುತ್ತಿದ್ದಾರೆ. ಈ ಘಟನೆಯನ್ನು ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ರೇಖಾ ಹಂಚಿಕೊಂಡಿದ್ದಾರೆ.

ಅನಾಥ ಅಜ್ಜಿ

ಅನಾಥ ಅಜ್ಜಿ

''ಇವತ್ತು (ನಿನ್ನೆ ನಡೆದ ಘಟನೆ) ಮಧ್ಯಾಹ್ನ 03ಕ್ಕೆ ತಿಪಟೂರಿನ unknown ನಂಬರ್ ಇಂದ ಕರೆ ಬಂತು. ಒಬ್ಬರು ವಯೋವೃದ್ಧೆ ರಸ್ತೆಯಲ್ಲಿ ಅನಾಥವಾಗಿ ಇದ್ದಾರೆ ಅಂತ ಸ್ಥಳಕ್ಕೆ ಧಾವಿಸಿದೆ. ಆದರೆ ನನ್ನ ಅಧಿಕಾರ ವ್ಯಾಪ್ತಿಗೆ ಬರೋದಿಲ್ಲ!. ಆದರೆ ಮಾನವೀಯತೆಯ ವ್ಯಾಪ್ತಿ, ವಿಶ್ವದಗಲ ಅಲ್ಲವೇ? ಸತತ ಎರಡು ಗಂಟೆಗಳ ತನಿಖೆ ನಂತರ ಅಜ್ಜಿ ಅನಾಥೆ ಅಂತ ತಿಳಿಯಿತು'' ಎಂದು ರೇಖಾ ಘಟನೆಯನ್ನು ವಿವರಿಸಿದ್ದಾರೆ.

ಹೆತ್ತ ಮಕ್ಕಳೂ ಒಂಟಿ ಮಾಡಿದ್ದಾಳೆ

''ಕರ್ಫ್ಯೂ ಕಾರಣಕ್ಕೆ ಎಲ್ಲಾ ಇಲಾಖೆಗಳು ಬ್ಯುಸಿ, ಯಾವುದೇ ವಾಹನ ಸಿಗಲಿಲ್ಲ ಮುಸ್ಸಂಜೆ, ಮಳೆಯಾಗುವ ಸಂಭವ ನೆರೆದಿದ್ದ ಜನರೆಲ್ಲಾ ಒಬ್ಬೊಬ್ಬರೇ ಮನೆಗೆ ಹೊರಟರು. ಉಳಿದಿದ್ದು ನಾನು & ಅಜ್ಜಿ ಇಬ್ಬರೇ. ಹೆತ್ತ ಮಕ್ಕಳೂ ಒಂಟಿ ಮಾಡಿದ್ರೂ ಅಂತ ನನ್ನ ಕಣ್ಣನ್ನ ಒದ್ದೆ ಮಾಡಿದ್ದೂ ಸುಳ್ಳಲ್ಲ. ಹೇಗೋ ಒಬ್ಬ ಪುಣ್ಯಾತ್ಮ ಅಜ್ಜಿಯನ್ನ ಆಟೋಗೆ ಹತ್ತಿಸಿದ.''- ರೇಖಾ

ಉಡುಪಿ ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪತ್ತೆ

ಎಲ್ಲ ಕಡೆ ಕೊರೋನಾ ಎಮರ್ಜೆನ್ಸಿ

ಎಲ್ಲ ಕಡೆ ಕೊರೋನಾ ಎಮರ್ಜೆನ್ಸಿ

''ಆಸ್ಪತ್ರೆಯಲ್ಲೂ ಕೊರೋನಾ ಕಾರಣಕ್ಕೆ, ಒಂದು ದಿನದ ಮಟ್ಟಿಗೆ ಆಶ್ರಯ ಕೊಡಲು ಸಾಧ್ಯವಾಗಲಿಲ್ಲ ಎಂದರು. ಪೊಲೀಸ್ ಠಾಣೆಗೆ ಹೋದರೆ ಮತ್ತದೇ ಕೊರೋನಾ ಎಮರ್ಜೆನ್ಸಿ. ಕೊನೆಗೆ ಗೊತ್ತಾಗಿದ್ದು ಅಜ್ಜಿಯ ಕೆಲಸ ಭಿಕ್ಷಾಟನೆ. ಕರ್ಫ್ಯೂ ಕಾರಣಕ್ಕೆ ದೇವಸ್ಥಾನದ ಬಳಿ ಇರುವ ಭಿಕ್ಷುಕರೆಲ್ಲ ಈ ರೀತಿ ರಸ್ತೆಪಾಲಾಗಿದ್ದರೆ ಅಂತ. ಎಲ್ಲಾ ಇಲಾಖೆಗಳ ಕಾರ್ಯವ್ಯಾಪ್ತಿಯನ್ನ ಮೀರಿ ನಮಗೆ ಪ್ರತಿಕ್ರಿಯೆ ನೀಡಿ, ಸ್ಪಂದಿಸಿ ಅಜ್ಜಿಗೆ ರಾತ್ರಿ ಸುಮಾರು 07:30ಕ್ಕೆ ಶೀಘ್ರ ಆಶ್ರಯ ನೀಡಿದ್ದು ಯಶಸ್ವಿನಿ ವೃದ್ಧಾಶ್ರಮ.''- ರೇಖಾ

ಹೊಟ್ಟೆ ತುಂಬುವಷ್ಟು ಅನ್ನ

''ಹೋದಕೂಡಲೇ ಅವರು ಕೊಟ್ಟಿದ್ದು ಹೊಟ್ಟೆ ತುಂಬುವಷ್ಟು ಅನ್ನ. ಇದಲ್ಲವೇ ಸೇವೆ Folded hands ಇದಲ್ಲವೇ ಮನುಷ್ಯತ್ವ Folded hands. ಇವರ ಮುಂದೆ ಇಷ್ಟು ದೊಡ್ಡ ಇಲಾಖೆಗಳೂ ಗೌಣವಾಗಿದ್ದು ಸತ್ಯ. ನಿಮ್ಮನ್ನೆಲ್ಲಾ ಕೇಳಿಕೊಳ್ಳೋದು ಇಷ್ಟೇ, ಖಂಡಿತವಾಗಿಯೂ ನಮ್ಮ ಸಮಾಜದಲ್ಲಿ ನಿಷ್ಠೆಯಿಂದ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು ಇವೆ. ಅವುಗಳನ್ನ ಗುರ್ತಿಸಿ ನಮ್ಮಿಂದ ಆಗುವಷ್ಟು ಸಹಾಯ(ಸೇವೆಯೆಂಬ

English summary
India lockdown heart touching story of a temple beggar. The old lady from tipaturu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X