• search
For tumakuru Updates
Allow Notification  

  ನೂರೆಂಟು ವಸಂತ ಕಂಡ ತ್ರಿವಿಧ ದಾಸೋಹಿಗೆ ಕೋಟಿ ವಂದನೆ

  By Mahesh
  |

  ತುಮಕೂರು, ಏ..1: 108 ವರ್ಷ ತುಂಬಿದ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ನಿರತ ಕರ್ಮಯೋಗಿ ಶ್ರೀ ಸಿದ್ಧಗಂಗಾ ಶ್ರೀಗಳು ಇನ್ನೂ ನೂರೆಂಟು ಕಾಲ ಬಾಳಲಿ, ಇನ್ನೂ ಲಕ್ಷ ಲಕ್ಷ ಬಡವರ ಮನೆ-ಮನಗಳನ್ನು ಬೆಳಗಲಿ ಎಂಬ ಆಶಯದೊಂದಿಗೆ ಏ.1ರಂದು ನಾಡಿನ ವಿವಿಧೆಡೆ ಶಿವಕುಮಾರ ಸ್ವಾಮೀಜಿ ಅವರ ಹುಟ್ಟುಹಬ್ಬ ಆಚರಣೆಗೊಳ್ಳುತ್ತಿದೆ.

  ಸಿದ್ದಗಂಗಾ ಮಠದಲ್ಲಿ ವೇದಗಳ ಘೋಷ, ಹೂವುಗಳ ಸುವಾಸನೆಯ ಪರಿಮಳ, ಬಿಸಿಲನ್ನು ಲೆಕ್ಕಿಸದೇ ಶ್ರೀಗಳ ಪಾದಕ್ಕೆರಗಲು ಶರಣು ಬಂದ ಭಕ್ತ ಸಾಗರವೇ ಕಂಡು ಬರುತ್ತಿತ್ತು. [ಸಿದ್ದಗಂಗಾಶ್ರೀ ಸಾಕ್ಷ್ಯಚಿತ್ರ ಲೋಕಾರ್ಪಣೆ]

  ಮಕ್ಕಳಿಗೆ ಎಕ್ಸಾಂ : 108ರ ಹರೆಯದ ಶ್ರೀ ಸಿದ್ಧಗಂಗಾ ಕ್ಷೇತ್ರದ ಡಾ.ಶ್ರೀಗಳು ಎಂದಿನಂತೆ ನಿತ್ಯ ಪೂಜೆ ಮುಗಿಸಿ ಬರುತ್ತಿದ್ದಂತೆ , ಕಳಸ-ಕನ್ನಡಿ ಹಿಡಿದ ನಾರಿಯರು, ಪೂರ್ಣಕುಂಭಗಳನ್ನು ಹೊತ್ತ ನೀರೆಯರು ಸ್ವಾಗತ ಕೋರಿದರು.


  ದಿವ್ಯದರ್ಶನ ಪಡೆದ ಭಕ್ತರಲ್ಲಿ ಅದೇನೋ ಪುನೀತ ಭಾವ. ಶ್ರೀಮಠದ ಆವರಣದಲ್ಲಿ ಭಕ್ತರ ಜಯಘೋಷಗಳು ಮಾರ್ದನಿಸುತ್ತಿತ್ತು. ಶ್ರೀಗಳ ಚರಣಗಳ ಅಡಿಯಲ್ಲಿ ಬಾಗಿ ಒಂದು ಕ್ಷಣ ಸಾರ್ಥಕ ಭಾವದ ಸಂಕೇತವಾಗಿತ್ತು.

  ವೀರಶೈವ ಯುವ ವೇದಿಕೆ ವತಿಯಿಂದ ಶ್ರೀಗಳ ಹುಟ್ಟುಹಬ್ಬದ ನಿಮಿತ್ತ ಸುಮಾರು 25,000 ಕ್ಕೂ ಅಧಿಕ ಭಾವಚಿತ್ರಗಳನ್ನು ಹಂಚಲಾಗಿದೆ ಎಂದು ವೇದಿಕೆ ಅಧ್ಯಕ್ಷ ಪ್ರಶಾಂತ್ ಕಲ್ಲೂರ್ ಅವರು ತಿಳಿಸಿದ್ದಾರೆ.

  ರಾಜಕೀಯ ಮುಖಂಡರು, ಸಾಮಾಜದ ಗಣ್ಯರು, ಅಧಿಕಾರಿಗಳು, ಸಾರ್ವಜನಿಕರು, ಭಕ್ತರು, ನೂರಾರು ಮಂದಿ ವಿವಿಧ ಮಠಾಧೀಶರು, ಸಾವಿರಾರು ವಿದ್ಯಾರ್ಥಿಗಳು ಎಲ್ಲರೂ ಸರತಿ ಸಾಲಿನಲ್ಲಿ ಸಾಗಿ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು. ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಎಲ್ಲಾ ಸಾರ್ವಜನಿಕ ವೇದಿಕೆ ಕಾರ್ಯಕ್ರಮಗಳನ್ನು ಬೆಳಗ್ಗೆ 10ಗಂಟೆಯೊಳಗೆ ಪೂರ್ಣಗೊಳಿಸಲಾಯಿತು.

  ಕಿರಿಯ ಶ್ರೀಗಳಾದ ಸಿದ್ದಲಿಂಗಸ್ವಾಮೀಜಿ ಬೇಡಿಕೆ

  ಕಿರಿಯ ಶ್ರೀಗಳಾದ ಸಿದ್ದಲಿಂಗಸ್ವಾಮೀಜಿ ಬೇಡಿಕೆ

  ಶ್ರೀ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ಕೇಂದ್ರ ಸರ್ಕಾರ ಶ್ರೀಗಳಿಗೆ ಪದ್ಮವಿಭೂಷಣ ನೀಡಿರುವುದು ನನಗೆ, ಭಕ್ತಾದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೂ ಸಂತಸ ತಂದಿದೆ. ಆದರೆ ಶ್ರೀಗಳಿಗೆ ಜೀವಿತಾವಧಿಯಲ್ಲಿ ಭಾರತರತ್ನ ಪ್ರಶಸ್ತಿ ನೀಡಬೇಕು. ಇದು ನನ್ನ ಆಶಯವಲ್ಲ. ರಾಜ್ಯ ಮತ್ತು ರಾಷ್ಟ್ರದ ಜನತೆಯ ಆಶಯವಾಗಿದೆ ಎಂದರು.

  ಮಠದಲ್ಲಿ ಪ್ರತಿನಿತ್ಯ ಸಾವಿರಾರು ಮಂದಿಗೆ ಅನ್ನದಾಸೋಹ ನಡೆಯುತ್ತಿದೆ, ಅಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಲಾಗುತ್ತಿದೆ. ಇದು ಸುಲಭದ ಕೆಲಸವಲ್ಲ. ಇದಕ್ಕೆಲ್ಲಾ ಶ್ರೀಗಳ ದೈವಲೀಲೆಯೇ ಕಾರಣವಾಗಿದೆ ಎಂದರು.

  ತುಮಕೂರು ನಗರದಲ್ಲಿ ದಿನವಿಡಿ ಹಬ್ಬದ ವಾತಾವರಣ

  ತುಮಕೂರು ನಗರದಲ್ಲಿ ದಿನವಿಡಿ ಹಬ್ಬದ ವಾತಾವರಣ

  ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಕ್ತಾದಿಗಳಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ಯಾತ್ಸಂದ್ರದಿಂದ ಹಿಡಿದು ಬಿ.ಎಸ್.ರಸ್ತೆ, ಬಟವಾಡಿ, ಟೌನ್‌ಹಾಲ್, ಸರ್ಕಾರಿ ಬಸ್ ನಿಲ್ದಾಣ, ಗುಬ್ಬಿ ಗೇಟ್ ಸೇರಿದಂತೆ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲೂ ಸ್ವಾಮೀಜಿಯವರಿಗೆ ಶುಭ ಕೋರುವ ಫ್ಲೆಕ್ಸ್ , ಬ್ಯಾನರ್ಸ್ ಹಾಗೂ ತಳಿರು-ತೋರಣಗಳಿಂದ ಕಂಗೊಳಿಸುತ್ತಿದೆ.

  ಏ.1 ರಜೆ ಘೋಷಿಸುವಂತೆ ಸರ್ಕಾರಕ್ಕೆ ಮನವಿ

  ಏ.1 ರಜೆ ಘೋಷಿಸುವಂತೆ ಸರ್ಕಾರಕ್ಕೆ ಮನವಿ

  ಬಸವ ಜಯಂತಿ, ಅಂಬೇಡ್ಕರ್‌ಜಯಂಕಿ, ಕನಕ ಜಯಂತಿಗೆ ನೀಡಿರುವಂತೆ ತುಮಕೂರು ನಗರವನ್ನು ಇತಿಹಾಸ ಪುಟಕ್ಕೆ ಸೇರಿಸಿದ ಪದ್ಮವಿಭೂಷಣ ಡಾ. ಶ್ರೀ ಶಿವಕುಮಾರಸ್ವಾಮೀಜಿಗಳ ಜನ್ಮದಿನಕ್ಕೆ ಸರ್ಕಾರಿ ರಜೆ ಘೋಷಣೆ ಮಾಡಬೇಕು. ರಾಜ್ಯದ ಶಾಲಾ-ಕಾಲೇಜು, ಕಚೇರಿಗಳಲ್ಲಿ ಏಪ್ರಿಲ್ 1 ರಂದು ಶ್ರೀಗಳ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಭಕ್ತಾದಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  ಗುರುವಂದನಾ ಕಾರ್ಯಕ್ರಮಕ್ಕೆ ಮೋದಿ

  ಗುರುವಂದನಾ ಕಾರ್ಯಕ್ರಮಕ್ಕೆ ಮೋದಿ

  ಜೂನ್ 21ರಿಂದ 28ರೊಳಗೆ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಅಂದಿನ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಮತ್ತಿತರ ಗಣ್ಯರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.

  ಕಳೆದ ವರ್ಷ ಶ್ರೀಗಳ ಆಶೀರ್ವಾದ ಪಡೆದಿದ್ದ ಮೋದಿ

  ಕಳೆದ ವರ್ಷಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದಿದ್ದನ್ನು ಸ್ಮರಿಸಿಕೊಂಡು ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ .

  ಭಾರತ ರತ್ನಕ್ಕಾಗಿ ಒಕ್ಕೊರಲ ಮನವಿಗೆ ಚಿಂತನೆ

  ಭಾರತ ರತ್ನಕ್ಕಾಗಿ ಒಕ್ಕೊರಲ ಮನವಿಗೆ ಚಿಂತನೆ

  ಸಿದ್ದಗಂಗಾಶ್ರೀಗಳಿಗೆ ಭಾರತ ರತ್ನ ಸಿಗಬೇಕು ಎಂಬುದು ನಮ್ಮ ಆಗ್ರಹವೂ ಆಗಿದೆ. ಈ ಬಗ್ಗೆ ಕೂಡಲೇ ಕೇಂದ್ರ ಸರ್ಕಾರದ ಜೊತೆ ಮಾತನಾಡುವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ಹೇಳಿದರು.

  ಶ್ರೀಗಳು ಭಾರತ ರತ್ನ ಮಾತ್ರವಲ್ಲ ಅವರು 'ವಿಶ್ವರತ್ನ'.ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಬಿದರಿ ಹೇಳಿದರು.

  ಸಿದ್ದಗಂಗಾ ಮಠದಲ್ಲಿ ಗಣ್ಯರ ದಂಡು

  ಸಿದ್ದಗಂಗಾ ಮಠದಲ್ಲಿ ಗಣ್ಯರ ದಂಡು

  ಸಿದ್ದಗಂಗಾ ಮಠದಲ್ಲಿ ಗಣ್ಯರ ದಂಡು ಹರಿದು ಬಂದಿತ್ತು. ಸಚಿವ ಎಚ್ ಎಸ್ ಮಹದೇವ ಪ್ರಸಾದ್, ಎಚ್ ಆಂಜನೇಯ, ಮಾಜಿ ಸಚಿವ ವಿ ಸೋಮಣ್ಣ, ಸೊಗಡು ಶಿವಣ್ಣ, ಸಂಸದ ಎಸ್ ಪಿ ಮುದ್ದಹನುಮೇಗೌಡ, ಮಾಜಿ ಸಂಸದ ಜಿಎಸ್ ಬಸವರಾಜ್ ಸೇರಿದಂತೆ ಅನೇಕ ಮುಖಂಡರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

  ಹುಟ್ಟುಹಬ್ಬದಂದು ಶ್ರೀಗಳ ದಿನಚರಿ ಬದಲಾಗಿಲ್ಲ

  ಹುಟ್ಟುಹಬ್ಬದಂದು ಶ್ರೀಗಳ ದಿನಚರಿ ಬದಲಾಗಿಲ್ಲ

  ಪ್ರತಿನಿತ್ಯದಂತೆ ಶ್ರೀಗಳು ಸೂರ್ಯೋದಯಕ್ಕೂ ಮುನ್ನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಆತ್ಮ ಲಿಂಗ ಪೂಜೆ ಸಲ್ಲಿಸಿದರು. ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬಡವ ಬಲ್ಲಿದ ರಾಜಕೀಯ ಮುಖಂಡರು ಗ್ರಾಮದ ಮುಖ್ಯಸ್ಥರು ಎಂದು ನೋಡದೆ ಎಲ್ಲರನ್ನು ಸಮಾನದೃಷ್ಟಿಯಿಂದ ಕಂಡು ಹರಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ತುಮಕೂರು ಸುದ್ದಿಗಳುView All

  English summary
  A large number of people thronged the Siddaganga mutt premises here in Tumakuru today (Apr.1) to celebrate 108th birthday of Dr. Shivakumara Swamiji. The seer was given a grand welcome with 'Poorna Kumbha' ritual to the venue where the program was organised.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more