ಅಡಿಕೆ ಮರ ಕಡಿದ ಅಧಿಕಾರಿಗಳನ್ನು ಅಮಾನತುಗೊಳಿಸಿ- H.D.ಕುಮಾರಸ್ವಾಮಿ

ತುಮಕೂರು, ಮಾರ್ಚ್ 9: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಜಾಮೀನು ವಿವಾದ ಇದೆ ಎನ್ನುವ ಕಾರಣಕ್ಕೆ 170ಕ್ಕೂ ಹೆಚ್ಚು ಅಡಿಕೆ ಮರ ಹಾಗೂ 25 ತೆಂಗಿನ ಮರವನ್ನು ಅಧಿಕಾರಿಗಳು ಕಡಿದು ಹಾಕಿದ್ದರು. ಈ ಘಟನೆಗೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು.

ಇದೀಗ ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಅಧಿಕಾರಿಗಳ ವರ್ತನೆಯನ್ನು ಖಂಡಿಸಿರುವ ಅವರು ಬೀದಿಗೆ ಬಿದ್ದ ರೈತರಿಗೆ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಎಂದಿದ್ದಾರೆ.

HD Kumaraswamy Tweets About Areca Trees Chopped Incident

''ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದ ರೈತರ ನೂರಾರು ಅಡಕೆ ಹಾಗೂ ತೆಂಗಿನ ಮರಗಳನ್ನು ಒತ್ತುವರಿ ತೆರವು ಮಾಡುವ ನೆಪದಲ್ಲಿ ಕತ್ತರಿಸಿ ಹಾಕಿರುವುದು ಖಂಡನೀಯ. ರೈತರ ಬದುಕಿಗೆ ಕೊಳ್ಳಿ ಇಟ್ಟ ಬೇಜವಾಬ್ದಾರಿ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕು. ಬೀದಿಗೆ ಬಿದ್ದ ರೈತರಿಗೆ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು.'' ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

''ಬೆಂಗಳೂರಿನಲ್ಲಿ ಸಾವಿರಾರು ಮರಗಳನ್ನು ಕತ್ತರಿಸಿ, ಕೆರೆ ಕುಂಟೆಗಳನ್ನು ನುಂಗಿ ಬಡಾವಣೆಗಳನ್ನು ಮಾಡಿ ಕೋಟ್ಯಾಧೀಶರಾದವರ ತಂಟೆಗೆ ಹೋಗದ ಅಧಿಕಾರಿಗಳು ಬಡ ರೈತರ ಮೇಲೆ ಸವಾರಿ ಮಾಡುತ್ತಿರುವುದು ಸರಿಯೇ?'' ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಗುಬ್ಬಿಯ ತಿಪ್ಪೂರು ಎಂಬ ಗ್ರಾಮದಲ್ಲಿ ಸಿದ್ದಮ್ಮ ಅಡಿಕೆ ಹಾಗೂ ತೆಂಗಿನ ಮರ ಬೆಳೆಸಿದ್ದರು. ಆದರೆ, ಇದು ದೇವಸ್ಥಾನಕ್ಕೆ ಸೇರಿದ್ದ ಜಾಗ ಎಂದು ಅಲ್ಲಿನ ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗರು ಮರ ಕಡಿದು ಹಾಕಿದ್ದಾರೆ. ತಾನು ಸಾಕಿದ ಮರಗಳು ಕಣ್ಣು ಮುಂದೆಯೇ ನೆಲಕ್ಕೆ ಉರುಳಿದ್ದನ್ನು ನೋಡಿದ ಸಿದ್ದಮ್ಮ ಕಣ್ಣೀರು ಹಾಕಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+