ತುಮಕೂರಿನಲ್ಲಿ ಹೇಮಾವತಿ ನೀರಿಗೆ ಉಪವಾಸ ಸತ್ಯಾಗ್ರಹ ಆರಂಭ

ತುಮಕೂರು, ಜುಲೈ 31: ಒಂದು ವಾರದೊಳಗೆ ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರು ಹರಿಸಬೇಕು. ಇಲ್ಲದಿದ್ದರೆ ಆಮರಣಾಂತ ಉಪವಾಸ ಧರಣಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಸತ್ಯಾಗ್ರಹ ಆರಂಭ ಮಾಡಿದ್ದಾರೆ.

ಇಲ್ಲಿನ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಶಿವಣ್ಣ ಹೇಮಾವತಿ ನದಿ ನೀರಿಗಾಗಿ ಸೋಮವಾರದಿಂದ ಉಪವಾಸ ಸತ್ಯಾಗ್ರಹ ಆರಂಭ ಮಾಡಿದ್ದಾರೆ. ಶಿವಣ್ಣ ಜತೆಗೆ ಬಿಜೆಪಿ ಮುಖಂಡರು ಹಾಗೂ ಬೆಂಬಲಿಗರು ಕೂಡ ಭಾಗವಹಿಸಿದ್ದಾರೆ.

Former minister Sogadu Shivanna fasting in Tumakuru for Hemavathi water

ಹೇಮಾವತಿ ನದಿ ನೀರು ಜಿಲ್ಲೆಗೆ ಹರಿಯುವವರೆಗೂ ಉಪವಾಸದಿಂದ ಹಿಂದೆ ಸರಿಯುವುದಿಲ್ಲ ಎಂದು ಶಿವಣ್ಣ ಪಟ್ಟು ಹಿಡಿದಿದ್ದು, ಹೇಮಾವತಿ ನದಿ ನೀರಿಗಾಗಿ ಹೋರಾಟ ಆರಂಭವಾದ ಬೆನ್ನಿಗೆ ವಿವಿಧ ಪಕ್ಷಗಳು ಸಹ ಚಳವಳಿ ಆರಂಭಿಸಿವೆ.

ಹೇಮಾವತಿ ನದಿ ನೀರಿಗಾಗಿ ಸೊಗಡು ಶಿವಣ್ಣ ಆರಂಭಿಸಿರುವ ಉಪವಾಸ ನಿರಶನಕ್ಕೆ ಹಲವು ಮಠಾಧೀಶರು ಸಹ ಬೆಂಬಲ ನೀಡಿದ್ದಾರೆ. ಚಿಕ್ಕತೊಟ್ಲುಕೆರೆ ಸುಕ್ಷೇತ್ರ ಅಧ್ಯಕ್ಷರಾದ ಅಟವಿ ಶಿವಲಿಂಗ ಮಹಾಸ್ವಾಮಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ ಮಾಜಿ ಸದಸ್ಯ ಹುಲಿನಾಯ್ಕರ್ , ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ರಮೇಶ್, ಬನಶಂಕರಿ ಬಾಬು, ಚಂದನ್, ಮಂಜುನಾಥ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು, ರೈತರು, ರೈತಪರ ಸಂಘಟನೆಗಳ ಸದಸ್ಯರು, ಕನ್ನಡ ಪರ ಸಂಘಟನೆಗಳು ಸದಸ್ಯರು ಉಪವಾಸ ನಿರಶನದಲ್ಲಿ ಪಾಲ್ಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+