ಎಚ್.ಡಿ ಕುಮಾರಸ್ವಾಮಿಗೆ ಕುರಿಮರಿ ನೀಡಿ ಋಣಭಾರ ತೀರಿಸಿದ ರೈತರು
ತುಮಕೂರು, ಅಕ್ಟೋಬರ್ 23: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಗೆ ರೈತರು ಕುರಿಮರಿ ನೀಡಿ ಋಣಭಾರ ತೀರಿಸಿದ ವಿಶೇಷ ಸಂದರ್ಭ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನಲ್ಲಿ ನಡೆದಿದೆ.
ಶಿರಾ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರವಾಗಿ ಮತಯಾಚಿಸಲು ಎಚ್.ಡಿ ಕುಮಾರಸ್ವಾಮಿ ಅವರು ಶಿರಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಬರಗೂರಿನಿಂದ ಶಿರಾ ಕಡೆಗೆ ಹೋಗುತ್ತಿದ್ದ ಕುಮಾರಸ್ವಾಮಿ ಅವರನ್ನು ಮಾರ್ಗಮಧ್ಯೆ ಸೀಗಲಹಳ್ಳಿಯಲ್ಲಿ ಜನರು ವಿಶೇಷವಾಗಿ ಸನ್ಮಾನಿಸಿದರು.
ರೈತರ ಸಾಲಮನ್ನಾ ಮಾಡಿದ ಕೃತಜ್ಞತಾ ಪೂರ್ವಕವಾಗಿ ರೈತರು ಹೊಲದಲ್ಲಿ ಬೆಳೆದಿದ್ದ ಪದಾರ್ಥಗಳು ಹಾಗೂ ಕುರಿಮರಿಯನ್ನು ಎಚ್ಡಿಕೆಗೆ ನೀಡಿ ಋಣಭಾರ ತೀರಿಸಿದರು.

ಈ ಸಂದರ್ಭದಲ್ಲಿ ರೈತರ ಸನ್ಮಾನ ಸ್ವೀಕರಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದರು. ರೈತರಿಗಾಗಿ ಇನ್ನೂ ಸಾಕಷ್ಟು ಕೆಲಸ ಮಾಡುವ ಕನಸಿದ್ದು, ಜೆಡಿಎಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದ ದಿನ ನನ್ನ ಕನಸು ನನಸಾಗಲಿದೆ ಎಂದರು.












Click it and Unblock the Notifications