ತುಮಕೂರಿನಲ್ಲಿ CRPF ಯೋಧನ ಪತ್ನಿ ಆತ್ಮಹತ್ಯೆ- ಕಿರುಕುಳ ಆರೋಪ

ತುಮಕೂರು, ಜೂನ್ 03: ತುಮಕೂರಿನಲ್ಲಿ ಸಿಆರ್ ‌ಪಿಎಫ್ ಯೋಧನ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಕುರಿತು ಹಲವು ಅನುಮಾನಗಳು ವ್ಯಕ್ತಗೊಂಡಿವೆ.

ತುಮಕೂರಿನ ಲಕ್ಕೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟವರನ್ನು 24 ವರ್ಷದ ಗೌರಮ್ಮ ಎನ್ನಲಾಗಿದೆ. ಸಿಆರ್ ‌ಪಿಎಫ್ ಯೋಧ ರವೀಶ್ ಹಾಗೂ ಗೌರಮ್ಮ 6 ತಿಂಗಳ ಹಿಂದೆ ಮದುವೆಯಾಗಿದ್ದರು.

ಆದರೆ ಮದುವೆಯಾದಾಗಿನಿಂದ ಗಂಡನ ಮನೆಯಲ್ಲಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಲಾಕ್ ಡೌನ್ ನಿಂದಾಗಿ ಎರಡು ತಿಂಗಳ ಹಿಂದೆ ಕರ್ತವ್ಯದಿಂದ ವಾಪಸ್ಸಾಗಿದ್ದ ರವೀಶ್ ಕೂಡ ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಗೌರಮ್ಮ ಗರ್ಭಿಣಿಯಾಗಿದ್ದರೂ ಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ ಎಂದು ಗೌರಮ್ಮ ಪೋಷಕರು ದೂರಿದ್ದಾರೆ. ಮದುವೆ ಸಂದರ್ಭದಲ್ಲಿ ಒಡವೆಗಳನ್ನು ನೀಡಿ ಅದ್ಧೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದೆವು. ಆದರೂ ಕಿರುಕುಳ ನೀಡುತ್ತಿದ್ದರು. ಚೆನ್ನಾಗಿ ಥಳಿಸಿ ಸಾಯಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

Dowry Harrasment CRPF Soldier Wife Committed Suicide In Tumkur

ಜೊತೆಗೆ ಗೌರಮ್ಮ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿಯೇ ಬಿಟ್ಟು ಗಂಡನ ಮನೆಯವರು ಪರಾರಿಯಾಗಿದ್ದುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮೃತ ಮಹಿಳೆಯ ಮನೆಯವರು ತುಮಕೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯೋಧ ರವೀಶ್ ಕುಟುಂಬದ ಮೇಲೆ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿ, ರವೀಶನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+